ಫ್ಯಾಂಟಮ್ ಅಪ್‌ಡೇಟ್ ಮತ್ತು ಫ್ಯಾನ್ಸ್ ಕುತೂಹಲ
Team Udayavani, Jan 19, 2021, 4:09 PM IST
ಸುದೀಪ್ ಅಭಿಮಾನಿಗಳು ಕಾತುರರಾಗಿದ್ದಾರೆ. ಜನವರಿ 21ರತ್ತ ಅವರ ದೃಷ್ಟಿ ನೆಟ್ಟಿದೆ. ಅದಕ್ಕೆ ಕಾರಣ ಸುದೀಪ್ ಅವರ ಚಿತ್ರದ ಕುರಿತಾಗಿ ಬರುವ ಅನೌನ್ಸ್ ಮೆಂಟ್. ಹೌದು, ಸುದೀಪ್ ನಟಿಸುತ್ತಿರುವ “ಫ್ಯಾಂಟಮ್’ ಚಿತ್ರದ ಕುರಿತಾಗಿ ಜನವರಿ 21ರಂದು ಮಹತ್ವದ ಅಪ್‌ಡೇಟ್ ನೀಡುವುದಾಗಿ ಚಿತ್ರತಂಡ ಘೋಷಿಸಿಕೊಂಡಿದೆ.
ಹಾಗಾದರೆ, ಆ ಅಪ್‌ಡೇಟ್ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಸಹಜವಾಗಿಯೇ ಇದೆ. ಅನೇಕರು ಒಂದೊಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಚಿತ್ರದ ಪ್ಯಾನ್ ಇಂಡಿಯಾ ಕುರಿತಾಗಿ ಹೇಳಬಹುದಾ ಅಥವಾ ಯಾವುದಾದರೂ ಇವೆಂಟ್ ಕುರಿತಾಗಿ ಹೇಳಬಹುದೇ ಎಂದು. ಈ ನಡುವೆಯೇ ಮತ್ತೂಂದು ಸುದ್ದಿ ಕೂಡಾ ಕೇಳಿಬರುತ್ತಿದೆ. ಅದು ಚಿತ್ರದ ಟೈಟಲ್ ಕುರಿತಾಗಿ.
ಹೌದು, ಗಾಂಧಿನಗರದ ಮೂಲಗಳ ಪ್ರಕಾರ, “ಫ್ಯಾಂಟಮ್’ ಟೈಟಲ್ ಬದಲಾಗಲಿದೆಯಂತೆ. ಚಿತ್ರತಂಡ “ವಿಕ್ರಾಂತ್ ರೋಣ’ ಎಂಬ ಟೈಟಲ್ ಇಟ್ಟು, “ವಲ್ಡ್ ಆಫ್ ಫ್ಯಾಂಟಮ್’ ಎಂಬ ಟ್ಯಾಗ್‌ಲೈನ್ ಕೊಡಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಹಾಗಂತ ಇದೇ ಅಧಿಕೃತ ಎನ್ನುವಂತಿಲ್ಲ. ಏಕೆಂದರೆ ಚಿತ್ರತಂಡ ದುಬೈ ಬುರ್ಜ್ ಖಲೀಫಾದಲ್ಲಿ ಇವೆಂಟ್‌ವೊಂದನ್ನು ಪ್ಲ್ರಾನ್ ಮಾಡಿಕೊಂಡಿದ್ದು, ಆ ಕುರಿತಾದ ಅನೌನ್ಸ್‌ಮೆಂಟ್ ಇದ್ದರೂ ಇರಬಹುದು. ಯಾವುದಕ್ಕೂ ಚಿತ್ರತಂಡ ಅಧಿಕೃತವಾಗಿ ಹೇಳುವವರೆಗೆ ಅಭಿಮಾನಿಗಳ ಕುತೂಹಲ ಇದ್ದೇ ಇರುತ್ತದೆ. ಫ್ಯಾಂಟಮ್ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಆ ಚಿತ್ರೀಕರಣ ಮುಗಿಸಿಕೊಂಡು ಸುದೀಪ್, ಆರ್. ಚಂದ್ರು ನಿರ್ದೇಶನದ “ಕಬ್ಜ’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣ, ನಿರಂತರ ಧನಾಗಮನ: ಹೇಗಿದೆ ಇಂದಿನ ಗ್ರಹಬಲ ?
ಸಿಇಟಿಗೆ ಪಠ್ಯಕಡಿತ, ನೀಟ್ಗೇಕಿಲ್ಲ? ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆತಂಕ
ದಾವೂದ್ ಆಸ್ತಿ ಜಪ್ತಿಗೆ ಆದೇಶ : ಎಫ್ಎಟಿಎಫ್ ಕಪ್ಪುಪಟ್ಟಿಗೆ ತಪ್ಪಿಸಿಕೊಳ್ಳಲು ಪಾಕ್ ಉಪಾಯ
ಸಂಗೀತ ಇಲ್ಲದ ಸಿನೆಮಾ ಊಹಿಸಲಸಾಧ್ಯ
ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ಗೆ 1 ವರ್ಷ ಜೈಲು ಶಿಕ್ಷೆ