ಪ್ರೇಮಿಗಳ ದಿನಕ್ಕೆ ಪೊಗರು ಆಡಿಯೋ

ದಾವಣಗೆರೆಯಲ್ಲಿ ಅದ್ಧೂರಿ ಸಮಾರಂಭ

Team Udayavani, Feb 10, 2021, 12:40 PM IST

ಪ್ರೇಮಿಗಳ ದಿನಕ್ಕೆ ಪೊಗರು ಆಡಿಯೋ

ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಅನೌನ್ಸ್‌ ಮಾಡಿದೆ. ಇದೇ ಫೆ. 19ಕ್ಕೆ “ಪೊಗರು’ ಚಿತ್ರ ಕನ್ನಡ, ತೆಲುಗು, ತಮಿಳಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇದರ ನಡುವೆಯೇ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, “ಪೊಗರು’ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕಸರತ್ತಿನಲ್ಲಿ ನಿರತವಾಗಿದೆ.

ಇದೇ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್‌ ಮೂಲಕ ಪ್ರೇಕ್ಷಕರ ಮುಂದೆ ಬಂದ ನಟ ಧ್ರುವ ಸರ್ಜಾ, ಚಿತ್ರದ ಪ್ರಮೋಷನ್‌ ಮತ್ತಿತರ ವಿಷಯಗಳ ಬಗ್ಗೆ ಅಭಿಮಾನಿಗಳ ಜೊತೆ ಒಂದಷ್ಟು ಮಾತನಾಡಿದ್ದಾರೆ. “ಫೆಬ್ರವರಿ 14 ಪ್ರೇಮಿಗಳ ದಿನದಂದು ದಾವಣಗೆರೆಯಲ್ಲಿ “ಪೊಗರು’ ಸಿನಿಮಾ ಆಡಿಯೋ ರೀಲಿಸ್‌ ಮಾಡಲಿದ್ದೇವೆ’ ಎಂದಿರುವ ಧ್ರುವಸರ್ಜಾ, “ನಮ್ಮ ಸಿನಿಮಾದ ಆಡಿಯೋ ರಿಲೀಸ್‌ ವೇಳೆ ಸಾಕಷ್ಟು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಇರುವ ಸೆಲೆಬ್ರಿಟಿ ಸ್ಟಾರ್‌ಗಳು ಒಂದೇ ಕಡೆಕಾಣಿಸಿಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ. “ತುಂಬಾ ದೊಡ್ಡ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ : ಸಂಹಾರಿಣಿಯಾಗಿ ಪೂಜಾ ಗಾಂಧಿ ರೀ ಎಂಟ್ರಿ

ಸಿನಿಮಾ ಕುರಿತಾಗಿ ಸಾಕಷ್ಟು ಸರ್‌ಪ್ರೈಸ್‌ ಇರಲಿದೆ. “ಪೊಗರು’ ಸಿನಿಮಾದ ಕಲಾವಿದರು ಹಾಗೂ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಲವು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಇರುವ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಒಂದೆ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ನಾವು ಕಾರ್ಯಕ್ರಮದಲ್ಲಿ ಹೇಳಲಿದ್ದೇವೆ. ಫೆಬ್ರವರಿ 19 ರಂದು ಸಿನಿಮಾ ರಿಲೀಸ್‌ ಆಗುತ್ತಿದ್ದು, ಸಿನಿಮಾ ರಿಲೀಸ್‌ ದಿನ ನಾವೆಲ್ಲ ಎಲ್ಲಿರುತ್ತೇವೆ ಅನ್ನೋ ವಿಷಯವನ್ನು ಈ ಕಾರ್ಯಕ್ರಮದಲ್ಲಿ ಹೇಳುತ್ತೇವೆ’ ಎಂದಿದ್ದಾರೆ ಧ್ರುವ.

ಇನ್ನು ಲೈವ್‌ನಲ್ಲಿ, “ಒಂದು ನಿಮಿಷದ ಟ್ರೇಲರ್‌, ಮೇಕಿಂಗ್‌ ವೀಡಿಯೋ ಅಥವಾ ಇಂಟ್ರೊಡಕ್ಷನ್‌ ಸಾಂಗ್‌ ಬಿಡಬೇಕಾ ಎಂಬ ವಿಚಾರವನ್ನು ಅಭಿಮಾನಿಗಳಾದ ನಿಮಗೆ ಬಿಡುತ್ತೇನೆ. ನೀವು ಹೇಳಿದ ಹಾಗೆ ನಮ್ಮ ಚಿತ್ರತಂಡ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ’ ಎಂದು ಆಯ್ಕೆಯನ್ನು ಪ್ರೇಕ್ಷಕರಿಗೇ ಬಿಟ್ಟಿದ್ದಾರೆ ಧ್ರುವ ಸರ್ಜಾ.­

ಟಾಪ್ ನ್ಯೂಸ್

ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

ಕುಟುಂಬ ಆಧಾರಿತ ಪಕ್ಷಗಳಿಂದ ಪ್ರಜಾಸತ್ತೆಗೆ ಅಪಾಯ

ಕುಟುಂಬ ಆಧಾರಿತ ಪಕ್ಷಗಳಿಂದ ಪ್ರಜಾಸತ್ತೆಗೆ ಅಪಾಯ

ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಪರಿಹರಿಸಲು ಸಚಿವ ನಾಗೇಶ್‌ ಭರವಸೆ

ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಪರಿಹರಿಸಲು ಸಚಿವ ನಾಗೇಶ್‌ ಭರವಸೆ

ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‌ಶೀಟ್‌ಗೆ ಅನುಮತಿ

ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‌ಶೀಟ್‌ಗೆ ಅನುಮತಿ

ನಮ್ಮ ಸಂವಿಧಾನ ಶ್ರೇಷ್ಠವಾದುದು: ಸಭಾಪತಿ, ಸ್ಪೀಕರ್‌ ಪ್ರತಿಪಾದನೆ

ನಮ್ಮ ಸಂವಿಧಾನ ಶ್ರೇಷ್ಠವಾದುದು: ಸಭಾಪತಿ, ಸ್ಪೀಕರ್‌ ಪ್ರತಿಪಾದನೆ

ಡಿ.6ಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತಕ್ಕೆ ಭೇಟಿ

ಡಿ.6ಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತಕ್ಕೆ ಭೇಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

shivaji surathkal 2

ಡಿಸೆಂಬರ್‌ನಿಂದ ಶಿವಾಜಿ ಸುರತ್ಕಲ್‌ 2 ಶುರು

jhjhgfd

ಜಮಾಲಿಗುಡ್ಡದಲ್ಲಿ ಧನಂಜಯ್‌-ಅದಿತಿ ಪ್ರಭುದೇವ

gori kannada movie

ಉತ್ತರ ಕರ್ನಾಟಕ ಮಂದಿಯ ಸಿನಿಮಾ ‘ಗೋರಿ’ಯಲ್ಲಿ ಮಾನವೀಯತೆ ಪಾಠ

ಒಂದೇ ಚಿತ್ರದಲ್ಲಿ ಅಪ್ಪ-ಮಗಳು: ಲವ್‌ ಯು ರಚ್ಚು ಚಿತ್ರದಲ್ಲಿ ಅಜೇಯ್‌ ರಾವ್‌ ಪುತ್ರಿ ನಟನೆ

ಒಂದೇ ಚಿತ್ರದಲ್ಲಿ ಅಪ್ಪ-ಮಗಳು: ಲವ್‌ ಯು ರಚ್ಚು ಚಿತ್ರದಲ್ಲಿ ಅಜೇಯ್‌ ರಾವ್‌ ಪುತ್ರಿ ನಟನೆ

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

ಕುಟುಂಬ ಆಧಾರಿತ ಪಕ್ಷಗಳಿಂದ ಪ್ರಜಾಸತ್ತೆಗೆ ಅಪಾಯ

ಕುಟುಂಬ ಆಧಾರಿತ ಪಕ್ಷಗಳಿಂದ ಪ್ರಜಾಸತ್ತೆಗೆ ಅಪಾಯ

ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಪರಿಹರಿಸಲು ಸಚಿವ ನಾಗೇಶ್‌ ಭರವಸೆ

ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಪರಿಹರಿಸಲು ಸಚಿವ ನಾಗೇಶ್‌ ಭರವಸೆ

ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‌ಶೀಟ್‌ಗೆ ಅನುಮತಿ

ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‌ಶೀಟ್‌ಗೆ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.