ಪಾಪ್‌ಕಾರ್ನ್ ಮಂಕಿ ಟೈಗರ್‌ ಟೈಟಲ್‌ ಕ್ರೇಜ್‌ ಶುರು

Team Udayavani, May 29, 2018, 12:03 PM IST

ಸೂರಿ ನಿರ್ದೇಶನದಲ್ಲಿ ಧನಂಜಯ್‌ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಆ ಚಿತ್ರಕ್ಕೆ “‘ ಎಂಬ ವಿಭಿನ್ನ ಶೀರ್ಷಿಕೆ ಇಟ್ಟಿದ್ದಾರೆ ಎಂಬ ಸುದ್ದಿಯೂ ಗೊತ್ತಿದೆ. ಈಗ ಹೊಸ ಸುದ್ದಿ ಅಂದರೆ, ಶಿವರಾಜಕುಮಾರ್‌ ಅವರು “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಚಿತ್ರದ ಟೈಟಲ್‌ಗೆ ಚಾಲನೆ ಕೊಟ್ಟಿದ್ದಾರೆ. ಅಂದರೆ, ನಿರ್ದೇಶಕ ಸೂರಿ ಇದೇ ಮೊದಲ ಸಲ ತಮ್ಮ ಮೊಬೈಲ್‌ ಕವರ್‌ಗೆ ಚಿತ್ರದ ಶೀರ್ಷಿಕೆಯ ಡಿಸೈನ್‌ ಹಾಕಿಕೊಂಡಿದ್ದಾರೆ.

ಆ ಮೊಬೈಲ್‌ ಮೇಲಿರುವ ಡಿಸೈನ್‌ ಅನ್ನು, ಶಿವರಾಜಕುಮಾರ್‌ ಅಭಿಮಾನಿಗಳಿಗೆ ತೋರಿಸುವ ಮೂಲಕ ಶೀರ್ಷಿಕೆ ಎಲ್ಲರಿಗೂ ತಲುಪುವಂತೆ ಮಾಡಿದ್ದಾರೆ. ಸೂರಿ, ಹೀಗೊಂದು ಹೊಸ ಟ್ರೆಂಡ್‌ ಶುರು ಮಾಡಿಬಿಟ್ಟಿದ್ದಾರೆ. ತಮ್ಮ ಮೊಬೈಲ್‌ಗೆ ಶೀರ್ಷಿಕೆಯೇ ಕವರ್‌ ಡಿಸೈನ್‌ ಆಗಿರುವುದರಿಂದ ಆ ವಿನ್ಯಾಸವುಳ್ಳ ಮೊಬೈಲ್‌ ಕವರ್‌ ಮುಂದಿನ ದಿನಗಳಲ್ಲಿ ಅಭಿಮಾನಿಗಳ ಮೊಬೈಲ್‌ಗ‌ಳಿಗೂ ಬಂದರೆ ಯಾವುದೇ ಅಚ್ಚರಿ ಇಲ್ಲ.

ಅಂದಹಾಗೆ, ಧನಂಜಯ್‌ ಜೊತೆ ಸೂರಿ ಈ ಚಿತ್ರವನ್ನು ಅನೌನ್ಸ್‌ ಮಾಡಿದ್ದು, ಇಷ್ಟರಲ್ಲೇ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಇನ್ನು, “ಟಗರು’ ಚಿತ್ರ ನಿರ್ಮಿಸಿದ್ದ ಕೆ.ಪಿ.ಶ್ರೀಕಾಂತ್‌ ಅವರೇ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಿವೇದಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಸೂರಿ ನಿರ್ದೇಶನದ “ಟಗರು’ ಚಿತ್ರ ಮುಂದಿನ ವಾರ ಶತದಿನ ಪೂರೈಸುತ್ತಿದೆ.

ಈ ಮೂಲಕ ಈ ವರ್ಷದ ಹಿಟ್‌ ಚಿತ್ರಗಳ ಸಾಲಿಗೆ “ಟಗರು’ ಸೇರಿದಂತಾಗುತ್ತದೆ. ಜೂನ್‌ 03 ರಂದು “ಟಗರು’ ಚಿತ್ರತಂಡ ಸಂತೋಷ್‌ ಹಾಗೂ ವೀರೇಶ್‌ ಚಿತ್ರಮಂದಿರಕ್ಕೆ ತೆರಳಿ ಚಿತ್ರದ ಯಶಸ್ಸನ್ನು ಅಭಿಮಾನಿಗಳೊಂದಿಗೆ ಸಂಭ್ರಮಿಸಲಿದೆ. ಇನ್ನು ಚಿತ್ರದ ಶತದಿನ ಸಮಾರಂಭವನ್ನು ಕೂಡಾ ಅದ್ಧೂರಿಯಾಗಿ ಜೂನ್‌ 23 ರಂದು ಅರಮನೆ ಮೈದಾನದಲ್ಲಿ ನಡೆಸುವ ಉದ್ದೇಶ ಕೂಡಾ ಚಿತ್ರತಂಡಕ್ಕಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ