Udayavni Special

ಚಿರು ನಿಧನದ ಬೆನ್ನಲ್ಲೇ “ಸಲಗಾ” ಸಿನಿಮಾ ನಟ ಸುಶೀಲ್ ಆತ್ಮಹತ್ಯೆಗೆ ಶರಣು; ವಿಜಿ ಕಂಬನಿ

ಇಂಡಸ್ಟ್ರೀಯಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ನಟನ ಬಗ್ಗೆ ವಿಜಿ ಫೇಸ್ ಬುಕ್ ನಲ್ಲಿ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

Team Udayavani, Jul 8, 2020, 6:02 PM IST

ಚಿರು ಸಾವಿನ ಬೆನ್ನಲ್ಲೇ “ಸಲಗಾ” ಸಿನಿಮಾ ನಟ ಸುಶೀಲ್ ಆತ್ಮಹತ್ಯೆಗೆ ಶರಣು; ವಿಜಿ ಕಂಬನಿ

ಬೆಂಗಳೂರು: ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ಯುವ ಪ್ರತಿಭೆ, ಖ್ಯಾತ ನಟ ಚಿರಂಜೀವಿ ಸರ್ಜಾ ಅಕಾಲಿಕ ಸಾವನ್ನಪ್ಪಿದ್ದ ಘಟನೆ ಚಿತ್ರಪ್ರೇಮಿಗಳ ನೆನಪಿನಿಂದ ಮಾಸುವ ಮುನ್ನವೇ ಇದೀಗ ಕನ್ನಡ ಚಿತ್ರರಂಗದ ಮತ್ತೊಂದು ಯುವ ಪ್ರತಿಭೆ ಸುಶೀಲ್ ಗೌಡ(30ವರ್ಷ) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ನಟನೆ ಜತೆಗೆ ಫಿಟ್ನೆಸ್ ಟ್ರೈನರ್ ಆಗಿದ್ದ ಸುಶೀಲ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಅವರ ಅಭಿಮಾನಿಗಳು ಮತ್ತು ಆಪ್ತರಿಗೆ ಆಘಾತಕಾರಿ ವಿಷಯವಾಗಿದೆ. ಅಕಾಲಿಕ ನಿಧನದ ಬಗ್ಗೆ ಸುಶೀಲ್ ಮೊದಲ ಟಿವಿ ಶೋ ಅಂತಃಪುರ ನಿರ್ದೇಶಕ ಅರವಿಂದ್ ಕೌಶಿಕ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ನಾನು ದುಃಖಕರ ವಿಷಯ ಹಂಚಿಕೊಳ್ಳುತ್ತಿದ್ದೇನೆ. ನಾನು ನಿರ್ದೇಶಿಸಿದ್ದ ಅಂತಃಪುರ ಟಿವಿ ಸೀರಿಯಲ್ ಲೀಡ್ ರೋಲ್ ನಿರ್ವಹಿಸಿದ್ದ ಸುಶೀಲ್ ವಿಧಿವಶರಾಗಿದ್ದಾರೆ ಎಂದು ಉಲ್ಲೇಖಿಸಿದ್ದರು.

ಮತ್ತೊಂದೆಡೆ ದುನಿಯಾ ವಿಜಯ್ ಮತ್ತು ಸಂಜನಾ ಅಭಿನಯದ ಸಲಗಾ ಸಿನಿಮಾದಲ್ಲಿ ಸುಶೀಲ್ ಅಭಿನಯಿಸಿದ್ದರು. ಅವರ ಸಾವಿನ ವಿಚಾರವನ್ನು ವಿಜಿ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕಂಬನಿ ಮಿಡಿದಿದ್ದಾರೆ. ಸಲಗ ಚಿತ್ರದಲ್ಲಿನ ಸುಶೀಲ್ ಪಾತ್ರ, ಇಂಡಸ್ಟ್ರೀಯಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ನಟನ ಬಗ್ಗೆ ವಿಜಿ ಫೇಸ್ ಬುಕ್ ನಲ್ಲಿ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಸುಶೀಲ್ ಗೌಡ ಅವರು ಯಾವ ಕಾರಣಕ್ಕಾಗಿ ಮಂಡ್ಯದ ಇಂಡವಾಳು ಗ್ರಾಮದಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಚಿತ್ರರಂಗದ ಹಲವಾರು ಗಣ್ಯರು ಸುಶೀಲ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಶೀಲ್ ಆತ್ಮಹತ್ಯೆಗೆ ಏನು ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

disha salian

ದಿಶಾ ಸಾಲ್ಯಾನ್ ಸಾವಿಗೂ ಮುನ್ನ ನಡೆಸಿದ್ದ ಪಾರ್ಟಿ ವಿಡಿಯೋ ಈಗ ವೈರಲ್!

ಮೂರು ದಿನದ ಹಿಂದೆ ಕಾಣೆಯಾಗಿದ್ದ ವೃದ್ಧೆ ಶವವಾಗಿ ಪತ್ತೆ! ಚಿಕ್ಕಮಗಳೂರನಲ್ಲಿ ಮಳೆಗೆ ಐದನೇ ಬಲಿ

ಮೂರು ದಿನದ ಹಿಂದೆ ಕಾಣೆಯಾಗಿದ್ದ ವೃದ್ಧೆ ಶವವಾಗಿ ಪತ್ತೆ! ಚಿಕ್ಕಮಗಳೂರನಲ್ಲಿ ಮಳೆಗೆ ಐದನೇ ಬಲಿ

india-total-covid

ಕೋವಿಡ್ ಅಂಕಿಅಂಶ: ಒಂದೇ ದಿನ ದಾಖಲೆಯ 64,399 ಹೊಸ ಪ್ರಕರಣ, 861 ಸಾವು

rajanath-sing

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ, 101 ವಸ್ತುಗಳು ದೇಶದಲ್ಲೇ ಉತ್ಪಾದನೆ: ರಾಜನಾಥ್ ಸಿಂಗ್

ಪ್ರವಾಹಕ್ಕೆ ಸಿಲುಕಿರುವ 230 ಕುರಿಗಳು ಮತ್ತು ಕುರಿಗಾಹಿ ರಕ್ಷಣೆಗೆ NDRF ತಂಡ ಸಿದ್ಧತೆ

ಪ್ರವಾಹಕ್ಕೆ ಸಿಲುಕಿರುವ 230 ಕುರಿಗಳು ಮತ್ತು ಕುರಿಗಾಹಿ ರಕ್ಷಣೆಗೆ NDRF ತಂಡ ಸಿದ್ಧತೆ

ಇಂಗ್ಲೆಂಡ್ ಗೆ ನೆರವಾದ ಬಟ್ಲರ್- ವೋಕ್ಸ್: ಪಾಕ್ ವಿರುದ್ಧ ಮೊದಲ ಟೆಸ್ಟ್ ಗೆದ್ದ ರೂಟ್ ಪಡೆ

ಇಂಗ್ಲೆಂಡ್ ಗೆ ನೆರವಾದ ಬಟ್ಲರ್- ವೋಕ್ಸ್: ಪಾಕ್ ವಿರುದ್ಧ ಮೊದಲ ಟೆಸ್ಟ್ ಗೆದ್ದ ರೂಟ್ ಪಡೆ

covid-care

ವಿಜಯವಾಡ: ಕೋವಿಡ್ ಕೇರ್ ಸೆಂಟರ್ ಹೊಟೇಲ್ ನಲ್ಲಿ ಬೆಂಕಿ ಅವಘಢ: 7 ಮಂದಿ ದುರ್ಮರಣ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

ಕುತೂಹಲ ಕೆರಳಿಸಿರುವ ತ್ರಿಕೋನ

ಕುತೂಹಲ ಕೆರಳಿಸಿರುವ ತ್ರಿಕೋನ

ನಾಲ್ಕನೇ ಬಾರಿ ಒಂದಾಗುತ್ತಿರುವ ಭಜರಂಗಿ ಜೋಡಿ

ನಾಲ್ಕನೇ ಬಾರಿ ಒಂದಾಗುತ್ತಿರುವ ಭಜರಂಗಿ ಜೋಡಿ

ಬ್ರಹ್ಮ ರಾಕ್ಷಸ – ಹೀಗೊಂದು ಹಾರರ್‌ ಸಿನಿಮಾ; ಪುಷ್ಕರ್‌ ಬ್ಯಾನರ್‌ ಸೆಪ್ಟೆಂಬರ್‌ನಲ್ಲಿ ಶುರು

ಬ್ರಹ್ಮ ರಾಕ್ಷಸ -ಹೀಗೊಂದು ಹಾರರ್‌ ಸಿನಿಮಾ; ಪುಷ್ಕರ್‌ ಬ್ಯಾನರ್‌ ಸೆಪ್ಟೆಂಬರ್‌ನಲ್ಲಿ ಶುರು

ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ನಾಪತ್ತೆಯಾಗಿಲ್ಲ

ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ನಾಪತ್ತೆಯಾಗಿಲ್ಲ

MUST WATCH

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani



ಹೊಸ ಸೇರ್ಪಡೆ

ದೇಶದಲ್ಲಿ ಕೋವಿಡ್ ಸೋಂಕಿಗೆ 196 ವೈದ್ಯರ ಸಾವು! ಐಎಂಎಯಿಂದಲೇ ಮಾಹಿತಿ

ದೇಶದಲ್ಲಿ ಕೋವಿಡ್ ಸೋಂಕಿಗೆ 196 ವೈದ್ಯರ ಸಾವು! ಐಎಂಎಯಿಂದಲೇ ಮಾಹಿತಿ

ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಸಾಲೂರು ಮಠದ ಪ್ರಗತಿಗೆ ಆದ್ಯತೆ ನೀಡಿ

ಸಾಲೂರು ಮಠದ ಪ್ರಗತಿಗೆ ಆದ್ಯತೆ ನೀಡಿ

disha salian

ದಿಶಾ ಸಾಲ್ಯಾನ್ ಸಾವಿಗೂ ಮುನ್ನ ನಡೆಸಿದ್ದ ಪಾರ್ಟಿ ವಿಡಿಯೋ ಈಗ ವೈರಲ್!

ಕಲ್ಲು ಗಣಿಗಾರಿಕೆ ನಿಷೇಧಕ್ಕಾಗಿ ಪಾದಯಾತ್ರೆ

ಕಲ್ಲು ಗಣಿಗಾರಿಕೆ ನಿಷೇಧಕ್ಕಾಗಿ ಪಾದಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.