ಗುಡ್ ನ್ಯೂಸ್ ಕೊಟ್ಟ ನಟಿ ಪ್ರಣಿತಾ ಸುಭಾಷ್
Team Udayavani, Apr 12, 2022, 10:33 AM IST
ಕಳೆದ ವರ್ಷವಷ್ಟೇ ಹಸೆಮಣೆ ಏರಿದ್ದ ನಟಿ ಪ್ರಣಿತಾ ಸುಭಾಷ್ ಈಗ ತಾಯಿಯಾಗುತ್ತಿದ್ದಾರೆ. ಹೌದು, ಈ ಸಂತಸದ ವಿಷಯವನ್ನು ಸ್ವತಃ ಪ್ರಣಿತಾ ಅವರೇ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗುವಿನ ಸ್ಕ್ಯಾನಿಂಗ್ ಚಿತ್ರವನ್ನು ಹಿಡಿದು ಪತಿಯೊಟ್ಟಿಗೆ ಖುಷಿಯಿಂದ ಸೆಲೆಬ್ರೆಟ್ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಪ್ರಣಿತಾ, “ನನ್ನ ಪತಿಯ 34ನೇ ವರ್ಷದ ಹುಟ್ಟುಹಬ್ಬದ ಸಂದರ್ಭ ಮೇಲಿರುವ ದೇವತೆಗಳು ನಮಗಾಗಿ ಉಡುಗೊರೆ ಕಳಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಇನ್ನು ಪ್ರಣಿತಾ ಇಂಥದ್ದೊಂದು ಗುಡ್ ನ್ಯೂಸ್ ಹಂಚಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕರು ಪ್ರಣಿತಾ ಸುಭಾಶ್ ಹಾಗೂ ಪತಿಗೆ ಅಭಿನಂದನೆಗಳನ್ನು ಹೇಳುತ್ತಿದ್ದಾರೆ.