ತಂದೆಯರ ಮಹತ್ವ ಸಾರುವ “ಕಿಲಾಡಿ ಪೊಲೀಸ್‌’ ಫಸ್ಟ್ ಲುಕ್: Watch

Team Udayavani, Jun 17, 2018, 3:07 PM IST

ಸ್ಯಾಂಡಲ್‍ವುಡ್‍ನಲ್ಲಿ ತಾಯಂದಿರ ದಿನಾಚರಣೆಯಂದು ಚಿರಂಜೀವಿ ಸರ್ಜಾ ಅಭಿನಯದ “ಅಮ್ಮ ಐ ಲವ್ ಯೂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಎಲ್ಲ ತಾಯಂದಿರಿಗೆ ಸಮರ್ಪಿಸಲಾಗಿತ್ತು. ಇದೀಗ ಕನ್ನಡದ ನಟ ಹರೀಶ್‌ ರಾಜ್‌ ಒಂದು ಹೆಜ್ಜೆ ಮುಂದೆ ಹೋಗಿ “ತಂದೆಯರ ದಿನಾಚರಣೆ’ ಸಲುವಾಗಿ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಅದನ್ನು ಎಲ್ಲ ತಂದೆಯರಿಗೂ ಅರ್ಪಿಸಿದ್ದಾರೆ. ಹೌದು! 

“ಶ್ರೀ ಸತ್ಯನಾರಾಯಣ’ ಚಿತ್ರದ ನಂತರ ಹರೀಶ್‌ ರಾಜ್‌ ಅವರ ಇನ್ನೊಂದು ಚಿತ್ರ “ಕಿಲಾಡಿ ಪೊಲೀಸ್‌’ ಎಂಬ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಬರೀ ಹೀರೋ ಅಷ್ಟೇ ಅಲ್ಲ, ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅವರ ನಿರ್ಮಾಣ ಮತ್ತು ನಿರ್ದೇಶನದ ಐದನೆಯ ಚಿತ್ರ. 

ಇನ್ನು ಈ ಚಿತ್ರದ ಟೀಸರ್ ನ್ನು “ತಂದೆಯರ ದಿನಾಚರಣೆಯಂದು ಬಿಡುಗಡೆ ಮಾಡಿದ್ದು, ಎಲ್ಲ ತಂದೆಯರಿಗೂ ಇದನ್ನು ಅರ್ಪಿಸಲಾಗಿದೆ. ಈ ಟೀಸರ್ ನಲ್ಲಿ ಹೇಳುವ ಹಾಗೆ “ತಾಯಿ ನಂತರ ಕಣ್ಣಿಗೆ ಕಾಣೋ ದೇವರು ಅಂದರೆ ಅದು ತಂದೆ. ತನ್ನ ಮಗುವನ್ನ ತಾಯಿಯಷ್ಟೇ ಪ್ರೀತಿ ಮಾಡುತ್ತಾನೆ. ಆದರೆ ಹೇಳಿಕೊಳ್ಳೊಕ್ಕೆ ಬರಲ್ಲ. ಬೆರಳು ಹಿಡಿದು ನಡೆಯೋದು ಕಲಿಸುತ್ತಾನೆ, ತಮಾಷೆ ಮಾಡಿ ನಗಿಸುತ್ತಾನೆ. ತಪ್ಪು ಮಾಡಿದಾಗ ಹೊಡೆದು, ಬಯ್ದು, ಬುದ್ಧಿ ಕಲಿಸುತ್ತಾನೆ. ಹೆಂಡತಿ ಮಕ್ಕಳು ಚೆನ್ನಾಗಿರಬೇಕು ಅಂತಾ, ಎಷ್ಟೇ ದುಃಖ ಇದ್ದರೂ ಯಾರ ಹತ್ತಿರನೂ ತೋರಿಸಿಕೊಳ್ಳದೇ, ನಗು – ನಗುತಾ ಖುಷಿಯಾಗಿ ಮಕ್ಕಳನ್ನು ಬೆಳೆಸುತ್ತಾನೆ, ಎಲ್ಲ ತಂದೆಯಂದಿರಿಗೂ ಒಂದು ಆಸೆ ಇರುತ್ತೆ. ನಮ್ಮಪ್ಪನ ಆಸೆ ನಾನು ಪೊಲೀಸ್ ಆಗಬೇಕು ಅಂತಾ’. ಎಂಬ ಸಂದೇಶದ ಜೊತೆಗೆ “ಹ್ಯಾಟ್ಸ್ ಆಫ್ ಟು ಅಲ್ ಫಾಧರ್ಸ್’, ಹ್ಯಾಪಿ ಫಾಧರ್ಸ್ ಡೇ ಎಂಬ ಸಂದೇಶದೊಂದಿಗೆ ತೆರೆ ಬೀಳುತ್ತದೆ.

ಈ ಚಿತ್ರವು ತಮಿಳಿನಲ್ಲಿ 2014ರಲ್ಲಿ ತೆರೆಗೆ ಬಂದ “ತಿರುಡನ್‌ ಪೊಲೀಸ್‌’ ಎಂಬ ಚಿತ್ರದ ರೀಮೇಕ್‌. ಈ ಚಿತ್ರದಲ್ಲಿ ಹರೀಶ್‌ ಪೊಲೀಸ್‌ ಪೇದೆಯಾಗಿ ಕಾಣಿಸಿಕೊಂಡಿದ್ದು, ತಂದೆ-ಮಗನ ಸಂಬಂಧದ ಸುತ್ತ ಚಿತ್ರ ಸುತ್ತುತ್ತದಂತೆ. “ತಂದೆ-ಮಗನ ಸೆಂಟಿಮೆಂಟ್‌ ಚಿತ್ರ ಇದು. ಇಲ್ಲಿ ತಂದೆಯಾಗಿ ಶ್ರೀನಿವಾಸಮೂರ್ತಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಅಲ್ಲದೇ ಚಿತ್ರದಲ್ಲಿ ಹರೀಶ್‌ ರಾಜ್‌ಗೆ ನಾಯಕಿಯಾಗಿ ಸಾನ್ವಿ ಪೊನ್ನಮ್ಮ ನಟಿಸುತ್ತಿದ್ದು, ಮಿಕ್ಕಂತೆ ಶ್ರೀನಿವಾಸಮೂರ್ತಿ, ಪದ್ಮಾ ವಾಸಂತಿ, ಸುಚೇಂದ್ರ ಪ್ರಸಾದ್‌, ಮುನಿ, ಗಿರಿ, ಮೋಹನ್‌ ಜುನೇಜ, ಜೆನ್ನೀಫ‌ರ್‌ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ದೀಪಕ್‌ ಕುಮಾರ್‌ ಅವರ ಛಾಯಾಗ್ರಹಣ, ಎಲ್ವಿನ್‌ ಜೋಶ್ವಾ ಅವರ ಸಂಗೀತ ಚಿತ್ರಕ್ಕಿದ್ದು, ಡಿಫ‌ರೆಂಟ್‌ ಡ್ಯಾನಿ ಈ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ