ಪತ್ನಿ ರಕ್ಷಿತಾ ಬರ್ತ್ ಡೇಗಾಗಿ ಸ್ವತಃ ಕೇಕ್ ತಯಾರಿಸಿದ ಪ್ರೇಮ್
ಅದೇ ದಿನ "ಏಕ್ ಲವ್ ಯಾ" ಚಿತ್ರ ಕೂಡಾ ಲಾಂಚ್ ಆಗಿತ್ತು. ಆದರೆ ಈ ವರ್ಷ ಕೋವಿಡ್ ಎಫೆಕ್ಟ್ ನಿಂದ ಸಿಂಪಲ್ಲಾಗಿ ಮನೆಯಲ್ಲೇ ಆಚರಿಸಲಾಗಿದೆ.
Team Udayavani, Apr 2, 2020, 6:35 PM IST
ಬೆಂಗಳೂರು: ನಟಿ ರಕ್ಷಿತಾ ಪ್ರೇಮ್ ಮಾರ್ಚ್ 31ರಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಕಳೆದ ವರ್ಷ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಯುಬಿ ಸಿಟಿಯಲ್ಲಿ ಆಚರಿಸಲಾಗಿತ್ತು.
ಅದೇ ದಿನ “ಏಕ್ ಲವ್ ಯಾ” ಚಿತ್ರ ಕೂಡಾ ಲಾಂಚ್ ಆಗಿತ್ತು. ಆದರೆ ಈ ವರ್ಷ ಕೋವಿಡ್ ಎಫೆಕ್ಟ್ ನಿಂದ ಸಿಂಪಲ್ಲಾಗಿ ಮನೆಯಲ್ಲೇ ಆಚರಿಸಲಾಗಿದೆ. ಸ್ವತಃ ಪ್ರೇಮ್ ಅವರೇ ಕೇಕ್ ತಯಾರಿಸಿ ಪತ್ನಿಯ ಹುಟ್ಟುಹಬ್ಬ ಆಚರಿಸಿದ್ದಾರೆ. ಕುಟುಂಬ ವರ್ಗದೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರೇಮ್, ಪ್ರತಿ ವರ್ಷ ರಕ್ಷಿತಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೆವು. ಆದರೆ ಈ ವರ್ಷ ಮನೆಯಲ್ಲಿರಬೇಕಾದ ಅನಿವಾರ್ಯತೆ ಇದೆ. ಸ್ಟೇ ಹೋಮ್ ಸ್ಟೇ ಸೇಫ್. ಹಾಗಾಗಿ, ನಾವೇ ಸೇರಿಕೊಂಡು ಕೇಕ್ ಮಾಡಿದ್ದೇವೆ ಎಂದಿದ್ದಾರೆ.
ಪತಿ ಪ್ರೇಮ್, ಮಗ ಸೂರ್ಯ ಸೇರಿ ಕೇಕ್ ತಯಾರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿದ್ದರಿಂದ ನಟಿ ರಕ್ಷಿತಾ ಖುಷಿಯಾಗಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಸದ್ಯ ಏಕ್ ಲವ್ ಯಾ ಎಂಬ ಸಿನಿಮಾ ನಿರ್ಮಿಸುತ್ತಿದ್ದು, ಅವರ ಸಹೋದರ ರಾಣಾ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರೇಮ್ ನಿರ್ದೇಶಿಸುತ್ತಿದ್ದು, ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಚಿತಾ ರಾಮ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ.