ತ್ಯಾಗಮಯಿ ಈ ‘ಪ್ರೇಮಮಯಿ’: ಪ್ರೇಮ-ಪ್ರೀತಿಗೆ ಹೊಸ ವ್ಯಾಖ್ಯಾನ

Team Udayavani, Sep 16, 2021, 3:03 PM IST

ತ್ಯಾಗಮಯಿ ಈ ‘ಪ್ರೇಮಮಯಿ’: ಪ್ರೇಮ-ಪ್ರೀತಿಗೆ ಹೊಸ ವ್ಯಾಖ್ಯಾನ

ಪ್ರೀತಿ, ಪ್ರೇಮದ ವಿಷಯವನ್ನು ಇಟ್ಟುಕೊಂಡು ನೂರಾರು ಸಿನಿಮಾಗಳು ಬಂದಿರುವುದು ನಿಮಗೆ ಗೊತ್ತೇ ಇದೆ. ಈಗ ಇಲ್ಲೊಂದು ಚಿತ್ರತಂಡ ತಮ್ಮ ಚಿತ್ರದ ಮೂಲಕ ಪ್ರೀತಿ, ಪ್ರೇಮಕ್ಕೆ ಮತ್ತೊಂದು ಹೊಸ ಅರ್ಥ, ವ್ಯಾಖ್ಯಾನ ನೀಡಲು ಹೊರಟಿದೆ. ಅಂದಹಾಗೆ, ಆ ಚಿತ್ರದ ಹೆಸರು “ಪ್ರೇಮಮಯಿ’.

ಈ ಹಿಂದೆ “ದೌಲತ್‌’ ಚಿತ್ರವನ್ನು ನಿರ್ದೇಶಿಸಿದ್ದ ರಘುವರ್ಮ “ಪ್ರೇಮಮಯಿ’ ಚಿತ್ರಕ್ಕೆಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು ಪ್ರೇಮಮಯಿ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ರಘುವರ್ಮ, “ಇಲ್ಲಿಯವರೆಗೆ ಪ್ರೀತಿಯನ್ನು ಒಂದೊಂದು ರೀತಿಯಲ್ಲಿ ವರ್ಣಿಸಲಾಗಿದೆ. ನಮ್ಮ ಸಿನಿಮಾದಲ್ಲಿ ಅದೆಲ್ಲದಕ್ಕಿಂತಲೂ ವಿಭಿನ್ನವಾಗಿ ವರ್ಣಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರೀತಿ-ಪ್ರೇಮ ಎಂದರೆ‌ ಕೇವಲ ಹುಡುಗ ‌-ಹುಡುಗಿಯ ನಡುವೆ ಮಾತ್ರ ಇರುವಂಥದಲ್ಲ. ತಂದೆ  -ಮಗ, ಸ್ನೇಹಿತರು ಹೀಗೆ ಎಲ್ಲಕಡೆಯೂ ಇರುವಂಥದ್ದು. ಅದರ ವ್ಯಾಪ್ತಿ ಮತ್ತು ವಿಸ್ತಾರ ದೊಡ್ಡದು ಎಂಬ ಅಂಶವನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಬರೀ ಪ್ರೀತಿ-ಪ್ರೇಮ ಮಾತ್ರವಲ್ಲದೆ ಇಲ್ಲೊಂದು ತ್ಯಾಗದ ಕಥೆಯಿದೆ. ನವಿರಾದ ಲವ್‌ಸ್ಟೋರಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್‌, ಎಮೋಶನ್ಸ್‌, ಕಾಮಿಡಿ ಹೀಗೆ ಎಲ್ಲ ಅಂಶಗಳೂ ಇದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂಥ ಸಿನಿಮಾ ಇದಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮತ್ತೆ ಗಾಳಿಪಟ-2 ಹಾರಾಟ.. ಸೆ. 18ರಿಂದ ಚಿತ್ರೀಕರಣ

“ಪ್ರೇಮಮಯಿ’ ಚಿತ್ರದಲ್ಲಿ ನವ ಪ್ರತಿಭೆ ರಾಮು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ನವನಟಿ ಸುರಕ್ಷಿತಾ ನಾಯಕಿಯಾಗಿ ತೆರೆಮೇಲೆ ಜೋಡಿಯಾಗುತ್ತಿದ್ದಾರೆ.

ಉಳಿದಂತೆ ಅಂಜನಪ್ಪ, ಶಿವಕುಮಾರ್‌ ಆರಾಧ್ಯ, ಸಂದೀಪ್‌ ಮಲಾನಿ, ಕಲಾರತಿ ಮಹದೇವ್‌, ಕುರಿಬಾಂಡ್‌ ರಂಗ, ವಿಕ್ಟರಿ ವಾಸು, ಶಿಲ್ಪಾ ಮೂರ್ತಿ, ಮಂಜುನಾಥ್‌ ಮೊದಲಾದವರು “ಪ್ರೇಮಮಯಿ ‌ ‘ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದು, ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಸದ್ಯ “ಪ್ರೇಮಮಯಿ’ ಚಿತ್ರದ ಮುಹೂರ್ತ ನಡೆಸಿರುವ ಚಿತ್ರತಂಡ ಶಿವಮೊಗ್ಗ, ಗೋವಾ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲು ಯೋಚನೆ ಹಾಕಿಕೊಂಡಿದೆ.

“ಶ್ರೀಸಿಂಗನಲ್ಲೂರು ಚೌಡೇಶ್ವರಿ ಕಂಬೈನ್ಸ್‌’ ಬ್ಯಾನರ್‌ನಲ್ಲಿ ಎಲ್‌. ನಾಗಭೂಷಣ್‌, ಕಾರ್ತಿಕ್‌ ವೆಂಕಟೇಶ್‌, ಪಿ.ಎನ್‌.ಕಿರಣ್ ಕುಮಾರ್‌ ಜಂಟಿಯಾಗಿ “ಪ್ರೇಮಮಯಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಐದು ಹಾಡುಗಳಿಗೆ ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಕೀರ್ತಿವರ್ಧನ್‌ ಛಾಯಾಗ್ರಹಣ, ಭಾರ್ಗವ್‌ ಸಂಕಲನವಿದೆ.

ಎಲ್ಲ ಅಂದುಕೊಂಡಂತೆ ನಡೆದರೆ, ಮುಂಬರುವ ಸಂಕ್ರಾಂತಿ ವೇಳೆಗೆ “ಪ್ರೇಮಮಯಿ’ಯನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

ಟಾಪ್ ನ್ಯೂಸ್

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22kubala

ಬಹು ನಿರೀಕ್ಷಿತ “ಚಾರ್ಲಿ” ಚಿತ್ರೀಕರಣ ಮುಕ್ತಾಯ: ಡಿಸೆಂಬರ್ 31ಕ್ಕೆ ಬಿಡುಗಡೆ

ಗೋಲ್ಡನ್ ಸ್ಟಾರ್ ‘ಸಖತ್’ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್

ಗೋಲ್ಡನ್ ಸ್ಟಾರ್ ‘ಸಖತ್’ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್

ದೊಡ್ಡಬಳ್ಳಾಪುರ- ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗ

ದೊಡ್ಡಬಳ್ಳಾಪುರ: ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗಡೆ

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಬಿಎಸ್‌ವೈ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ಬಿಎಸ್‌ವೈ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.