ಪ್ರಿಯಾಮಣಿ ಬರ್ತ್‌ಡೇಗೆ “ಡಾ. 56′ ಮೋಶನ್‌ ಟೀಸರ್‌ ಗಿಫ್ಟ್

ವೃತ್ತಿ ಬದುಕಿನ 56 ನೇ ಚಿತ್ರವಿದು

Team Udayavani, Jun 9, 2019, 3:01 AM IST

ನಟಿ ಪ್ರಿಯಾಮಣಿ ಅವರ ಹುಟ್ಟು ಹಬ್ಬದ ಅಂಗವಾಗಿ “ಡಾ. 56′ ಚಿತ್ರತಂಡ ಇತ್ತೀಚೆಗೆ ಮೋಶನ್‌ ಟೀಸರ್‌ ಬಿಡುಗಡೆ ಮಾಡುವ ಮೂಲಕ ಅವರಿಗೆ ವಿಶೇಷ ಕೊಡುಗೆ ನೀಡಿದೆ. ಇತ್ತೀಚೆಗೆ (ಜೂ. 4ರಂದು) ಪ್ರಿಯಾಮಣಿ ಅವರು ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ವೇಳೆ ಅವರು ಅಭಿನಯಿಸುತ್ತಿರುವ “ಡಾ.56′ ಚಿತ್ರತಂಡ ಮೋಶನ್‌ ಟೀಸರ್‌ ಬಿಡುಗಡೆ ಮಾಡಿ ಭರ್ಜರಿ ಗಿಫ್ಟ್ ಕೊಟ್ಟಿದೆ.

ಅಂದಹಾಗೆ, ಇದೊಂದು ಮಹಿಳಾ ಪ್ರಧಾನ ಕಥಾ ಹಂದರ ಹೊಂದಿರುವ ಚಿತ್ರ. “ಡಾ.56′ ಚಿತ್ರದಲ್ಲಿ ಪ್ರಿಯಾಮಣಿ ಅವರು ಸಿಬಿಐ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಿಯಾಮಣಿ ಸಿನಿಮಾ ಕೆರಿಯರ್‌ನಲ್ಲಿ ಕಾಕತಾಳೀಯವೊ ಎಂಬಂತೆ “ಡಾ. 56′ ಚಿತ್ರ ಅವರ 56ನೇ ಚಿತ್ರ ಎಂಬುದು ವಿಶೇಷ.

ಸದ್ಯ ಬಿಡುಗಡೆಯಾಗಿರುವ “ಡಾ. 56′ ಚಿತ್ರದ ಮೋಶನ್‌ ಟೀಸರ್‌ ನಿಧಾನವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಸೈನ್ಸ್‌ ಫಿಕ್ಷನ್‌ ಜೊತೆಗೊಂದು ಮರ್ಡರ್‌ ಮಿಸ್ಟರಿ ಚಿತ್ರದಲ್ಲಿರುವ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. “ಡಾ. 56′ ಚಿತ್ರವನ್ನು ರಾಜೇಶ್‌ ಆನಂದ ಲೀಲಾ ಅವರು ನಿರ್ದೇಶನ ಮಾಡಿದ್ದಾರೆ.

ಇನ್ನು, “ಹರಿಹರ ಪಿಕ್ಚರ್’ ಬ್ಯಾನರ್‌ನಲ್ಲಿ ಪ್ರವೀಣ್‌ ರೆಡ್ಡಿ “ಡಾ. 56′ ಚಿತ್ರಕ್ಕೆ ಕಥೆ, ಚಿತ್ರಕಥೆ, ಬರೆದು ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರಕ್ಕೆ ರಾಕೇಶ್‌ ಸಿ. ತಿಲಕ್‌ ಛಾಯಾಗ್ರಹಣ ಮಾಡಿದರೆ, ವಿಶ್ವ ಅವರು ಸಂಕಲನ ಮಾಡಿದ್ದಾರೆ. ಶಂಕರ್‌ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಚಿತ್ರಕ್ಕೆ ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ.

ಈ ಚಿತ್ರದಲ್ಲಿ ಪ್ರಿಯಾಮಣಿ ಅವರೊಂದಿಗೆ ಪ್ರವೀಣ್‌, ರಮೇಶ್‌ ಭಟ್‌, ಯತಿರಾಜ್‌, ವೀಣಾ ಪೊನ್ನಪ್ಪ, ದೀಪಕ್‌ ಶೆಟ್ಟಿ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಜುಲೈ ಅಂತ್ಯಕ್ಕೆ “ಡಾ. 56′ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಒಂದು ಕಾಲದಲ್ಲಿ ಕಾಲೇಜು ಹುಡುಗಿಯರ ಡ್ರೀಮ್ ಬಾಯ್ ಆಗಿದ್ದ ಡಾರ್ಲಿಂಗ್ ಕೃಷ್ಣ ಈಗ ನಿರ್ದೇಶಕ. ಕಿರುತೆರೆಯ ಜನಪ್ರಿಯ ಧಾರವಾಹಿ ಕೃಷ್ಣ ರುಕ್ಮಿಣಿ ಮೂಲಕ ಜನಪ್ರಿಯತೆ...

  • ಶ್ರೀನಿ ಅಭಿನಯದ "ಓಲ್ಡ್‌ ಮಾಂಕ್‌' ಚಿತ್ರತಂಡಕ್ಕೆ ಇದೀಗ ಅದಿತಿ ಪ್ರಭುದೇವ ಹೊಸದಾಗಿ ಎಂಟ್ರಿಯಾಗಿದ್ದಾರೆ. ಹೌದು, ಕಳೆದ ಕೆಲ ತಿಂಗಳಿನಿಂದ "ಒಲ್ಡ್‌ ಮಾಂಕ್‌' ಚಿತ್ರಕ್ಕೆ...

  • ಚಿತ್ರದುರ್ಗ ಆಂದಾಕ್ಷಣ ಅಲ್ಲಿನ ಇತಿಹಾಸ ನೆನಪಾಗುತ್ತದೆ. ಈಗಾಗಲೇ ಚಿತ್ರದುರ್ಗ ಕಲ್ಲಿನಕೋಟೆ ಆಳಿದ ಮದಕರಿ ನಾಯಕನ ಕುರಿತು ಅನೇಕ ಪುಸ್ತಕ ಹೊರಬಂದಿವೆ. ಆ ಕುರಿತು...

  • ಜನವರಿ ತಿಂಗಳ ಕೊನೆ ಸಮೀಪಿಸುತ್ತಿದ್ದಂತೆ, ಗಾಂಧಿನಗರದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆಯೂ ನಿಧಾನವಾಗಿ ಏರಿಕೆಯಾಗುತ್ತಿದೆ. ಜನವರಿ ತಿಂಗಳ ಕೊನೆ...

  • ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ "5 ಅಡಿ 7 ಅಂಗುಲ' ಚಿತ್ರ ತೆರೆಗೆ ಬರೋದಕ್ಕೆ ತಯಾರಾಗಿದೆ. ಸದ್ಯ ಬಹುತೇಕ ತನ್ನ ಕೆಲಸಗಳನ್ನು ಪೂರ್ಣಗೊಳಿಸಿ ಫ‌ಸ್ಟ್‌...

ಹೊಸ ಸೇರ್ಪಡೆ