ಮೇಘನಾ ನಿರ್ಮಾಪಕಿ

ಪುಟಾಣಿ ಪಂಟರ್ಸ್ಗೆ ಇಂದು ಮುಹೂರ್ತ

Team Udayavani, Apr 24, 2019, 3:18 AM IST

ಸಾಮಾನ್ಯವಾಗಿ ಸಿನಿಮಾ ನಟಿಯರು ಮದುವೆ ಬಳಿಕ ಹೆಚ್ಚು ಸುದ್ದಿಯಾಗಲ್ಲ. ಎಲ್ಲೋ ಬೆರಳೆಣಿಕೆ ನಟಿಯರು ಮದುವೆ ನಂತರವೂ ಸಿನಿಮಾ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಅಂತಹವರ ಸಾಲಿಗೆ ಈಗ ಮೇಘನಾರಾಜ್‌ ಕೂಡ ಸೇರಿದ್ದಾರೆ. ಹೌದು, ಚಿರಂಜೀವಿ ಸರ್ಜಾ ಅವರನ್ನು ವಿವಾಹವಾದ ನಂತರ ಸಿನಿಮಾದಿಂದ ಮೇಘನಾ ದೂರ ಉಳಿಯುತ್ತಾರಾ ಎಂಬ ಪ್ರಶ್ನೆ ಎಲ್ಲರಿಗೂ ಇತ್ತು.

ಆದರೆ, ಮೇಘನಾರಾಜ್‌ ಅದೆಲ್ಲಾ ಏನೂ ಇಲ್ಲ, ನಾನು ಮದುವೆ ನಂತರವೂ ಹಾಡಬಲ್ಲೆ, ಸಿನಿಮಾದಲ್ಲೂ ನಟಿಸಬಲ್ಲೆ ಅಷ್ಟೇ ಅಲ್ಲ, ಈಗ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಳ್ಳಬಲ್ಲೆ ಎಂಬುದನ್ನು ಸಾರಿದ್ದಾರೆ. ಮೇಘನಾರಾಜ್‌ ಅವರೀಗ ಮೇಘನಾ ಸಿನಿಮಾಸ್‌ ಬ್ಯಾನರ್‌ ಮೂಲಕ ನಿರ್ಮಾಪಕಿಯಾಗಿದ್ದಾರೆ. ಸದ್ದಿಲ್ಲದೆಯೇ ಅವರೀಗ ಮಕ್ಕಳ ಚಿತ್ರಕ್ಕೆ ಕೈ ಹಾಕಿದ್ದಾರೆ.

ಅವರ ನಿರ್ಮಾಣದ ಚಿತ್ರಕ್ಕೆ “ಪುಟಾಣಿ ಪಂಟರ್ಸ್’ ಎಂದು ನಾಮಕರಣ ಮಾಡಲಾಗಿದೆ. ಚಿತ್ರವನ್ನು ಪವನ್‌ಕುಮಾರ್‌ ನಿರ್ದೇಶನ ಮಾಡುತ್ತಿದ್ದಾರೆ. ಮೇಘನಾರಾಜ್‌ ಅವರೊಂದಿಗೆ ಸಹ ನಿರ್ಮಾಪಕರಾಗಿ ಅಶೋಕ್‌ ಸುಲೇಗಾಯ್‌, ಜೆ.ಆರ್‌.ಮೋಹನ್‌ ಕುಮಾರ್‌, ಧರ್ಮಶ್ರೀ ಮಂಜುನಾಥ್‌, ಗೋವಿಂದ ರಾಜುಲು ಮತ್ತು ಪ್ರವೀಣ್‌ ಕೂಡ ಸಾಥ್‌ ನೀಡುತ್ತಿದ್ದಾರೆ.

ಏಪ್ರಿಲ್‌ 24 (ಇಂದು) ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಡಾ.ರಾಜಕುಮಾರ್‌ ಅವರ ಹುಟ್ಟುಹಬ್ಬದ ದಿನದಂದೇ “ಪುಟಾಣಿ ಪಂಟರ್ಸ್’ ಚಿತ್ರಕ್ಕೂ ಚಾಲನೆ ಸಿಗುತ್ತಿದೆ. ಅಂದಹಾಗೆ, ಬನಶಂಕರಿಯಲ್ಲಿರುವ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 9 ಕ್ಕೆ ಮುಹೂರ್ತ ನೆರವೇರಲಿದೆ. ಅರ್ಜುನ್‌ ಸರ್ಜಾ ಅವರು ಆರಂಭ ಫ‌ಲಕ ನೀಡಿದರೆ, ಧ್ರುವ ಸರ್ಜಾ ಕ್ಯಾಮೆರಾ ಚಾಲನೆ ನೀಡುತ್ತಿದ್ದಾರೆ.

ಚಿರಂಜೀವಿ ಸರ್ಜಾ ಹಾಗೂ ಮೇಘನಾ ಜ್ಯೋತಿ ಬೆಳಗಿಸಲಿದ್ದಾರೆ. ಚಿತ್ರಕ್ಕೆ ವಸಂತಕುಮಾರ್‌ ಎಲ್‌.ಎನ್‌ ಸಂಗೀತವಿದೆ. ಮೀರಾ ಅವರ ಸಾಹಿತ್ಯವಿದೆ. ಚಿತ್ರದಲ್ಲಿ ಸುಂದರ್‌ರಾಜ್‌, ಪ್ರಮೀಳಾ ಜೋಷಾಯ್‌, ಸ್ಪರ್ಶ ರೇಖಾ, ರಮೇಶ್‌ ಪಂಡಿತ್‌, ರಾಜೇಶ್‌ ನಟರಂಗ ಇದ್ದಾರೆ. ಮಾಸ್ಟರ್‌ ಹೇಮಂತ್‌, ಮಾಸ್ಟರ್‌ ಹರಿಪ್ರೀತಮ್‌, ಮಾಸ್ಟರ್‌ ಸುಚೆತ್‌, ಬೇಬಿ ದೀಕ್ಷಾ ಮತ್ತು ಬೇಬಿ ಶಿವಾನಿ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಮೇಘನಾರಾಜ್‌ ಅವರು ಸೃಜನ್‌ ಲೋಕೇಶ್‌ ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಈಗ ಅವರೇ ತಮ್ಮ ನಿರ್ಮಾಣದ ಚಿತ್ರಕ್ಕೆ ಮುಹೂರ್ತ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಹೊಸಬಗೆಯ ಚಿತ್ರ ಕಟ್ಟಿಕೊಡುವ ಉತ್ಸಾಹದಲ್ಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

 • ದಿಗಂತ್‌ ಅಭಿನಯದ "ಶಾರ್ಪ್‌ ಶೂಟರ್‌' ಚಿತ್ರ ನಿರ್ದೇಶಿಸಿದ್ದ ಗೌಸ್‌ಪೀರ್‌, ಆ ಚಿತ್ರದ ಬಳಿಕ ಬೇರೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ...

 • ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ತಾರೆ ಸುಧಾರಾಣಿ ಪುತ್ರಿ ನಿಧಿರಾವ್‌ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಚಿತ್ರರಂಗದಲ್ಲಿ ಹರಿದಾಡುತ್ತಿದೆ....

 • ನಟ ಉಪೇಂದ್ರ ಅವರು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಆಗಿನ್ನೂ ಶೀರ್ಷಿಕೆ ಪಕ್ಕಾ...

 • ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಚಿತ್ರ ಯಾವಾಗ ತೆರೆಗೆ ಬರಬಹುದು ಎಂಬ ಲೆಕ್ಕಚಾರದಲ್ಲಿ ಸುದೀಪ್‌ ಅಭಿಮಾನಿಗಳಿದ್ದಾರೆ. ಮತ್ತೂಂದೆಡೆ ಅಭಿಮಾನಿಗಳ ಕುತೂಹಲವನ್ನು...

 • ಚಿರಂಜೀವಿ ಸರ್ಜಾ "ಖಾಕಿ' ಚಿತ್ರದ ಹೀರೋ ಎಂದು ಈ ಹಿಂದೆ ಇದೇ "ಬಾಲ್ಕನಿ'ಯಲ್ಲಿ ಹೇಳಲಾಗಿತ್ತು. ಅವರಿಗೆ ತಾನ್ಯಾ ಹೋಪ್‌ ನಾಯಕಿಯಾಗಿದ್ದಾರೆ ಅಂತಾನೂ ತಿಳಿಸಲಾಗಿತ್ತು....

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...