ಸೂರಿ “ಪಾಪ್‍ಕಾರ್ನ್’ನಿಂದ ನಿರ್ಮಾಪಕ ಶ್ರೀಕಾಂತ್‌ ಔಟ್‌


Team Udayavani, Feb 18, 2019, 5:26 AM IST

suri.jpg

ಶಿವರಾಜಕುಮಾರ್‌ ಅಭಿನಯದ “ಟಗರು’ ಯಶಸ್ಸಿನ ನಂತರ ನಿರ್ದೇಶಕ ಸೂರಿ “ಪಾಪ್‌ಕಾನ್‌ ಮಂಕಿ ಟೈಗರ್‌’ ಚಿತ್ರಕ್ಕೆ ಅಣಿಯಾಗಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರದ ಚಿತ್ರೀಕರಣ ಕೂಡ ಜೋರಾಗಿಯೇ ನಡೆಯುತ್ತಿದೆ ಎಂಬುದು ಸಹ ಗೊತ್ತಿದೆ. ಅಂದಹಾಗೆ, “ಟಗರು’ ಚಿತ್ರವನ್ನು ನಿರ್ಮಿಸಿದ್ದ ಕೆ.ಪಿ.ಶ್ರೀಕಾಂತ್‌ ಅವರೇ ಸೂರಿ ಜೊತೆಗೆ “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ.

ಆದರೆ, ಈಗ ಹೊಸ ಸುದ್ದಿಯೆಂದರೆ, “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರದಿಂದ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಹೊರಬಂದಿದ್ದಾರೆ. ಹಾಗಂತ, ಸೂರಿ ಜೊತೆಗೆ ಕೆ.ಪಿ.ಶ್ರೀಕಾಂತ್‌ ಅವರು ಮುನಿಸಿಕೊಂಡು ಹೊರಬಂದಿದ್ದಾರೆ ಎಂದು ನೀವಂದುಕೊಳ್ಳುವಂತಿಲ್ಲ. ಯಾವುದೇ ಮುನಿಸು ಇಲ್ಲದೆ, ಕೆ.ಪಿ.ಶ್ರೀಕಾಂತ್‌ ಅವರು “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರ ನಿರ್ಮಾಣದಿಂದ ಹೊರಬಂದಿದ್ದಾರೆ. ಈ ಬಗ್ಗೆ ಸ್ವತಃ, ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಅವರೇ ಸ್ಪಷ್ಟಡಿಸುವುದು ಹೀಗೆ.

“ಆರಂಭದಲ್ಲಿ ಸೂರಿ ಅವರ ನಿರ್ದೇಶನದ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರವನ್ನು ನಾನು ನಿರ್ಮಾಣ ಮಾಡುತ್ತಿದ್ದದ್ದು ನಿಜ. ಕಾರಣಾಂತರಗಳಿಂದ ಈಗ ನಾನು ಹೊರಬಂದಿದ್ದೇನೆ. ಆದರೆ, ಹೊರಬಂದಿದ್ದಕ್ಕೆ ಯಾವುದೇ ಮುನಿಸು ಇಲ್ಲ. ಮುಂದಿನ ದಿನಗಳಲ್ಲಿ ನಿರ್ದೇಶಕ “ದುನಿಯಾ’ ಸೂರಿ ಅವರೊಂದಿಗೆ ನಾನು ದೊಡ್ಡ ಪ್ರಾಜೆಕ್ಟ್ ಮಾಡುತ್ತಿದ್ದೇನೆ. ಆ ಬಗ್ಗೆ ತಯಾರಿಯೂ ನಡೆಯುತ್ತಿದೆ’ ಎಂದಷ್ಟೇ ಹೇಳುತ್ತಾರೆ ಕೆ.ಪಿ.ಶ್ರೀಕಾಂತ್‌.  

“ಟಗರು’ ಚಿತ್ರದ ಬೆನ್ನಲ್ಲೇ “ಟಗರು-2′ ಚಿತ್ರಕ್ಕೆ ಚಿತ್ರತಂಡ ಸದ್ದಿಲ್ಲದೇ ಮುಹೂರ್ತ ಮಾಡಿತ್ತು. “ಟಗರು’ ಮುಂದುವರಿದ ಮಾಡುವುದಾಗಿಯೂ ಹೇಳಿತ್ತು. ಹಾಗಾದರೆ, ಸೂರಿ ಹಾಗೂ ಶ್ರೀಕಾಂತ್‌ “ಟಗರು-2′ ಮಾಡುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಹಿಟ್‌ ಆದ “ಟಗರು’ ಚಿತ್ರದ ಮುಂದುವರಿದ ಭಾಗ ಅಭಿಮಾನಿಗಳಿಗೆ ಖುಷಿಕೊಡಬಹುದೆಂಬ ಕಾರಣಕ್ಕೆ ಆ ಚಿತ್ರದ ತಯಾರಿಯೂ ನಡೆಯುತ್ತಿದೆ ಎನ್ನಲಾಗಿದೆ.

ಅಂದಹಾಗೆ, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಯುವ ಹಂತ ತಲುಪಿರುವ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರವನ್ನು ಸುಧೀರ್‌ ಎನ್ನುವವರು  ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸೂರಿ ಈ ಚಿತ್ರ ಕೈಗೆತ್ತಿಕೊಳ್ಳಲು ಕಾರಣ, ಅವರು ಕುಸಿದು ಹೋಗುತ್ತಿರುವ ಸಂಬಂಧಗಳ ಮೌಲ್ಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾಗ ಈ ಕಥೆ ಹುಟ್ಟುಕೊಂಡಿತಂತೆ. ಹಾಗಾದರೆ, ಈ ಚಿತ್ರದಲ್ಲೂ ಸೂರಿ ಅವರು ಮಾಫಿಯಾ ಶೇಡ್‌ ಇಟ್ಟಿರುತ್ತಾರಾ? ಎಂಬ ಪ್ರಶ್ನೆಗೆ ಚಿತ್ರ ಬರುವವರೆಗೆ ಕಾಯಲೇಬೇಕು. ಈ ಚಿತ್ರದಲ್ಲಿ ಧನಂಜಯ್‌, ನಿವೇದಿತಾ, ಅಮೃತಾ ಸೇರಿದಂತೆ ಹಲವು ನಟರು ಅಭಿನಯಿಸುತ್ತಿದ್ದಾರೆ.

ಟಾಪ್ ನ್ಯೂಸ್

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

22kubala

ಬಹು ನಿರೀಕ್ಷಿತ “ಚಾರ್ಲಿ” ಚಿತ್ರೀಕರಣ ಮುಕ್ತಾಯ: ಡಿಸೆಂಬರ್ 31ಕ್ಕೆ ಬಿಡುಗಡೆ

ಗೋಲ್ಡನ್ ಸ್ಟಾರ್ ‘ಸಖತ್’ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್

ಗೋಲ್ಡನ್ ಸ್ಟಾರ್ ‘ಸಖತ್’ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್

ದೊಡ್ಡಬಳ್ಳಾಪುರ- ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗ

ದೊಡ್ಡಬಳ್ಳಾಪುರ: ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗಡೆ

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

23glb-13

ಮಹಿಳೆಯರಿಗೆ ರಾಣಿ ಚನ್ನಮ್ಮ ಆದರ್ಶ: ಪ್ರಕಾಶ ಕುದುರಿ

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.