‘ಅದ್ಭುತ ಆರಂಭದ ಈ ಪಯಣಕ್ಕೆ ಕೊನೆಯಿಲ್ಲ’ : ಟ್ವಿಟರ್ ಟ್ರೆಂಡಿಂಗ್ನಲ್ಲಿ ‘ಕೆಜಿಎಫ್’ ತಂಡ
Team Udayavani, Mar 13, 2021, 8:12 PM IST
ಬೆಂಗಳೂರು : ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿರುವ ‘ಕೆಜಿಎಫ್ 2’ ಬಿಡುಗಡೆಯ ದಿನ ಸಮೀಪಿಸುತ್ತಿದೆ. ಬೆಳ್ಳಿ ಪರದೆ ಮೇಲೆ ಪ್ರಶಾಂತ್ ನೀಲ್ ಕಮಾಲ್, ರಾಕಿ ಭಾಯ್ ಅಬ್ಬರ ನೋಡಲು ಪ್ರೇಕ್ಷಕ ವರ್ಗ ಚಾತಕ ಪಕ್ಷಿಯಂತೆ ಕಾಯುತ್ತಿದೆ.
ಈ ನಡುವೆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಝಿಯಾಗಿರುವ ಚಿತ್ರತಂಡ ಸಿನಿಮಾ ಪ್ರಮೋಷನ್ಗೆ ಭರ್ಜರಿ ತಯಾರಿ ಕೂಡ ನಡೆಸಿದೆ. ಸಿನಿಮಾ ಪ್ರಚಾರದ ಒತ್ತಡದ ನಡುವೆಯೂ ನಿರ್ದೇಶಕ ಪ್ರಶಾಂತ್, ನೀಲ್, ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್, ನಿರ್ಮಾಪಕ ವಿಜಯ್ ಕಿರಗಂದೂರು, ನಟ ಗರುಡ ರಾಮ್ ಸೇರಿದಂತೆ ಇಡೀ ಚಿತ್ರತಂಡ ಒಂದೆಡೆ ಸೇರಿದೆ. ಈ ಸುಂದರ ಕ್ಷಣಗಳ ಫೋಟೊಗಳನ್ನು ಪ್ರಶಾಂತ್ ನೀಲ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡು, ಅದ್ಭುತ ಆರಂಭದ ಈ ಪಯಣಕ್ಕೆ ಕೊನೆಯಿಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನು ಚಿತ್ರೀಕರಣ ಮುಗಿಸಿಕೊಂಡಿರುವ ಕೆಜಿಎಫ್ ಚಿತ್ರತಂಡ ಪ್ರಮೋಷನ್ನಲ್ಲಿ ಬ್ಯುಝಿಯಾಗಿದೆ. ಜುಲೈ 16 ರಂದು ವಿಶ್ವದಾದ್ಯಂತ ಕೆಜಿಎಫ್ 2 ಅದ್ಧೂರಿಯಾಗಿ ತೆರೆ ಕಾಣಲಿದೆ. ಹಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲರೂ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಮೊದಲ ಭಾಗ ದಾಖಲೆ ಬರೆದಿತ್ತು. ಇದೀಗ ಕೆಜಿಎಫ್ ಸೀಕ್ವೆಲ್ ಮೇಲೆಯೂ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ. ಬಾಲಿವುಡ್ ನಟ ಸಂಜಯ್ ದತ್ ಕೂಡ ಕೆಜಿಎಫ್ 2 ನಲ್ಲಿ ನಟಿಸಿರುವುದು ಚಿತ್ರಕ್ಕೆ ಮತ್ತೊಂದು ಖದರ್ ತಂದು ಕೊಟ್ಟಿದೆ. ಜುಲೈನಲ್ಲಿ ಕೆಜಿಎಫ್ 2 ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ.
A journey with a great start and no end?#KGFChapter1 #kgfchapter2 #kgffamily pic.twitter.com/6J7XSoRR3B
— Prashanth Neel (@prashanth_neel) March 13, 2021