ವರ್ಷದ ಮೊದಲ ಹಾರರ್ ಚಿತ್ರ ಪುನರಪಿ
Team Udayavani, Jan 8, 2018, 11:59 AM IST
ಕೆಲ ಸಿನಿಮಾಗಳೇ ಹಾಗೆ. ಸದ್ದಿಲ್ಲದೆಯೇ, ಶುರುವಾಗಿ, ಸುದ್ದಿ ಮಾಡದೆಯೇ ತೆರೆಗೆ ಅಪ್ಪಳಿಸುತ್ತವೆ. ಆ ಸಾಲಿಗೆ “ಪುನರಪಿ ಜನನಂ’ ಎಂಬ ಹೊಸಬರ ಚಿತ್ರವೂ ಒಂದು. ಆರಂಭ ವರ್ಷದ ಮೊದಲ ವಾರ ಬಿಡುಗಡೆಯಾದ ಚಿತ್ರಗಳ ಸಾಲಿಗೆ ಸೇರಿದ “ಪುನರಪಿ ಜನನಂ’ ವರ್ಷದ ಮೊದಲ ಹಾರರ್ ಚಿತ್ರ ಎಂಬುದು ಇನ್ನೊಂದು ವಿಶೇಷ. ಹಾಗೆ ಹೇಳುವುದಾದರೆ, ಪ್ರತಿ ವರ್ಷವೂ ಹಾರರ್ ಚಿತ್ರಗಳ ಸಂಖ್ಯೆಗೇನೂ ಕಮ್ಮಿ ಇಲ್ಲ.
ಕಳೆದ ವರ್ಷವೂ ಸಾಕಷ್ಟು ಹಾರರ್ ಚಿತ್ರಗಳು ತೆರೆಗೆ ಬಂದಿದ್ದುಂಟು. ಈಗ ಹಾರರ್ ಚಿತ್ರಗಳ ಲೆಕ್ಕದ ಖಾತೆಗೆ ಮೊದಲ ಎಂಟ್ರಿಯಾಗಿರುವ “ಪುನರಪಿ ಜನನಂ’ ಚಿತ್ರದಲ್ಲಿ ಹೊಸ ಪ್ರತಿಭೆಗಳು ತುಂಬಿಕೊಂಡಿವೆ. ಲಿಂಗರಾಜು ಪಿ. ಬಳ್ಳಾರಿ ಚಿತ್ರದ ನಿರ್ದೇಶಕರು. ಕಳೆದ 25 ವರ್ಷಗಳಿಂದಲೂ ಚಿತ್ರರಂಗದಲ್ಲಿ ಅನೇಕ ಚಿತ್ರಗಳಿಗೆ ಕೆಲಸ ಮಾಡಿರುವ ಲಿಂಗರಾಜು ಅವರು ಈ ಹಿಂದೆ “ಹೂ ಮನಸು’ ಎಂಬ ಸಿನಿಮಾ ಮಾಡಿದ್ದರು.
ಈಗ ಹಾರರ್ ಚಿತ್ರದ ಹಿಂದೆ ಬಂದಿದ್ದಾರೆ. ನಿರ್ದೇಶಕ ಸಾಯಿಪ್ರಕಾಶ್ ಅವರ ಬಹುತೇಕ ಚಿತ್ರಗಳಲ್ಲಿ ಕೆಲಸ ಮಾಡಿರುವ ಲಿಂಗರಾಜು, ಮೊದಲ ಸಲ ಹಾರರ್ ಚಿತ್ರ ಮಾಡಿದ್ದಾರೆ. ಆ ಮೂಲಕ ನೋಡುಗರನ್ನು ಬೆಚ್ಚಿಬೀಳಿಸುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ರಾಜ್ ಚರಣ್, ಸುಧೀûಾ ರಮೇಶ್, ಪಲ್ಲವಿ, ರಿತೇಶ್ ನಾಗರಾಜ್, ಸಂದೀಪ್ ಸೇರಿದಂತೆ ಇನ್ನೂ ಅನೇಕ ಪ್ರತಿಭೆಗಳು ಕಾಣಿಸಿಕೊಂಡಿವೆ.
ದಿನೇಶ್ ಕಥೆ ಬರೆದಿದ್ದಾರೆ. ಇನ್ನು, ಬಿ.ಎಲ್.ಬಾಬು ಇಲ್ಲಿ ಕ್ಯಾಮೆರಾ ಹಿಡಿಯುವುದರ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಭಯ ಹುಟ್ಟಿಸುವ ಚಿತ್ರಕ್ಕೆ ಹಿಂದಿ ಡಬ್ಬಿಂಗ್ ರೈಟ್ಸ್ ಕೂಡ ಆಗಿದ್ದು, ಇನ್ನೆರೆಡು ಭಾಷೆಗೆ ಡಬ್ಬಿಂಗ್ ಮಾತುಕತೆ ನಡೆಯುತ್ತಿದೆ. ಅದೇನೆ ಇರಲಿ, ಮೊದಲ ಹಾರರ್ ಚಿತ್ರವಾಗಿ ಚಿತ್ರಮಂದಿರ ಹೊಕ್ಕಿರುವ “ಪುನರಪಿ ಜನನಂ’, ಎಲ್ಲಾ ಹಾರರ್ ಚಿತ್ರಗಳ ಹಿರಿಯಣ್ಣನಾಗುವುದಂತೂ ನಿಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ