ಪುನೀತ್‌ ಬರ್ತ್‌ಡೇ ಸಾಂಗ್‌

Team Udayavani, Mar 13, 2019, 6:04 AM IST

ಪುನೀತ್‌ರಾಜಕುಮಾರ್‌ ಅಭಿನಯದ “ನಟಸಾರ್ವಭೌಮ’ ಚಿತ್ರ ಮುಂದಿನ ವಾರಕ್ಕೆ 50 ದಿನಗಳನ್ನು ಪೂರ್ಣಗೊಳಿಸಲಿದೆ. ಆ ಖುಷಿಯಲ್ಲಿರುವ ಚಿತ್ರತಂಡ ಇದೀಗ ಪುನೀತ್‌ ಅವರ ಹುಟ್ಟುಹಬ್ಬಕ್ಕೊಂದು ಹಾಡಿನ ಕೊಡುಗೆ ನೀಡಲು ತಯಾರಾಗಿದೆ. ಹೌದು, ನಿರ್ದೇಶಕ ಪವನ್‌ ಒಡೆಯರ್‌, ಪುನೀತ್‌ರಾಜಕುಮಾರ್‌ ಅವರ ಹುಟ್ಟುಹಬ್ಬಕ್ಕೆಂದೇ ಹಾಡೊಂದನ್ನು ಬರೆದಿದ್ದು, ಆ ಹಾಡನ್ನು ಮಾ.16 ರ ಮಧ್ಯರಾತ್ರಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಅಂದಹಾಗೆ,  ಪುನೀತ್‌ ಅವರ ಸಿನಿಮಾ ಪಯಣ ಮತ್ತು ಸಿನಿಮಾಗಳ ಶೀರ್ಷಿಕೆ ಪ್ರಧಾನವಾಗಿಟ್ಟುಕೊಂಡು ಹಾಡನ್ನು ರಚಿಸಲಾಗಿದೆ. ಹಾಡಿನ ಕುರಿತು ಹೇಳಿಕೊಳ್ಳುವ ಪವನ್‌ ಒಡೆಯರ್‌, “ಆಕಾಶದ ಅಭಿಯಾಗಿ, ಕನ್ನಡ ಪೃಥ್ವಿಗೆ ನೀ ಅರಸು, ಅಣ್ಣಾಬಾಂಡ್‌ ದೊಡ್ಮನೆ ಹುಡುಗನ ನಾನ್‌ ಸ್ಟಾಪ್‌ ಸ್ಟೆಪ್‌… ಡ್ಯಾನ್ಸ್‌ ವಿತ್‌ ಅಪ್ಪು….’ ಎಂದು ಶುರುವಾಗುತ್ತದೆ.

ಈ ಹಾಡಿಗೆ “ನಟಸಾರ್ವಭೌಮ’ ಚಿತ್ರದ ಟೈಟಲ್‌ ಟ್ರಾಕ್‌ ಬಳಸಲಾಗಿದ್ದು, ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಸಂಗೀತ ನಿರ್ದೇಶಕ ಇಮಾನ್‌ ಅವರು ಸಂಗೀತ ನೀಡುತ್ತಿದ್ದಾರೆ. ಚೆನ್ನೈನ ಗಾಯಕರೊಬ್ಬರು ಹಾಡಲಿದ್ದಾರೆ. ಚೆನ್ನೈ ಸ್ಟುಡಿಯೋದಲ್ಲೇ ಹಾಡು ರೆಕಾರ್ಡಿಂಗ್‌ ಆಗಲಿದ್ದು, ಮಾ.16 ರ ಮಧ್ಯರಾತ್ರಿ ಅವರ ಹುಟ್ಟುಹಬ್ಬಕ್ಕೆ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ.

ಅಭಿಮಾನಿಗಳಿಗೆ ಈ ಹಾಡು ಇಷ್ಟವಾಗುವಂತೆಯೇ ಮಾಡಲಾಗುತ್ತಿದೆ ಎನ್ನುವ ಪವನ್‌ ಒಡೆಯರ್‌, ಸದ್ಯಕ್ಕೆ “ನಟಸಾರ್ವಭೌಮ’ 50 ದಿನದತ್ತ ದಾಪುಗಾಲು ಇಡುತ್ತಿದ್ದು, ನಿರ್ಮಾಪಕರು ಇಷ್ಟರಲ್ಲೇ 50 ದಿನದ ಸಂಭ್ರಮ ಆಚರಿಸಲು ನಿರ್ಧರಿಸಿದ್ದಾರೆ ಎಂಬುದು ನಿರ್ದೇಶಕರ ಹೇಳಿಕೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ