ಚಂಬಲ್‌ ಕಣಿವೆಯಲ್ಲಿ ಪುನೀತ್‌

Team Udayavani, Jan 28, 2019, 5:40 AM IST

ಕನ್ನಡದಲ್ಲಿ ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ನೀನಾಸಂ ಸತೀಶ್‌ ಅಭಿನಯದ “ಚಂಬಲ್‌’ ಚಿತ್ರವೂ ಒಂದು. ಈ ಚಿತ್ರ ಈಗ ಬಿಡುಗಡೆಯ ತಯಾರಿಯಲ್ಲಿದೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯಾವುದೇ ಕಟ್‌ ಇಲ್ಲದೆ “ಯು/ಎ’ ಪ್ರಮಾಣ ಪತ್ರ ನೀಡಿದೆ. ಈಗ “ಚಂಬಲ್‌’ನ ಹೊಸ ಸುದ್ದಿಯೆಂದರೆ, ಅದು ಟ್ರೇಲರ್‌ ಬಿಡುಗಡೆ.

ಹೌದು, ಈ ಚಿತ್ರದ ಟ್ರೇಲರ್‌ ಜನವರಿ 31 ರಂದು ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರದ ಟ್ರೇಲರ್‌ಗೆ ಪುನೀತ್‌ರಾಜಕುಮಾರ್‌ ಅವರು ಚಾಲನೆ ನೀಡಲಿದ್ದಾರೆ. ಚಿತ್ರದ ಹೀರೋ ನೀನಾಸಂ ಸತೀಶ್‌ ಅವರಿಗೆ ಪುನೀತ್‌ ಅವರಿಂದಲೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿಸಬೇಕು ಎಂಬ ಆಸೆ. ಆ ಆಸೆಗೆ ಪುನೀತ್‌ ಕೂಡ ಗ್ರೀನ್‌ಸಿಗ್ನಲ್‌ ನೀಡುತ್ತಿದ್ದು, ಸತೀಶ್‌ ಅವರ ಆಸೆಯಂತೆ ಜನವರಿ 31 ರಂದು ಪುನೀತ್‌ ಅವರು ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ.

ಈ ಹಿಂದೆ ಕೂಡ ಸತೀಶ್‌ ಅಭಿನಯದ “ಅಯೋಗ್ಯ’ ಚಿತ್ರದ ಹಾಡೊಂದನ್ನು ಪುನೀತ್‌ ಬಿಡುಗಡೆ ಮಾಡಿದ್ದರು. ಅದೇ ಖುಷಿಯಲ್ಲಿರುವ ಸತೀಶ್‌ ಅವರಿಂದ ಬಿಡುಗಡೆ ಮಾಡಿಸಲು ಮುಂದಾಗಿದ್ದಾರೆ. ಅಂದಹಾಗೆ, ಈ ಹಿಂದೆ ಪುನೀತ್‌ ಅವರಿಗೆ “ಪೃಥ್ವಿ’ ಚಿತ್ರವನ್ನು ನಿರ್ದೇಶಿಸಿದ್ದ ಜೇಕಬ್‌ ವರ್ಗಿಸ್‌ ಅವರೇ “ಚಂಬಲ್‌’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, “ಚಂಬಲ್‌’ ಅಂದಾಕ್ಷಣ, ಚಂಬಲ್‌ ಕಣಿವೆಯ ಡಕಾಯಿತರ ನೆನಪಾಗುತ್ತೆ. ಚಿತ್ರದಲ್ಲೂ ಆ ಅಂಶಗಳಿವೆಯಾ? ಎಂಬುದಕ್ಕೆ ಚಿತ್ರ ಬರುವವರೆಗೂ ಕಾಯಬೇಕು ಎಂಬುದು ಚಿತ್ರತಂಡದ ಮಾತು.

ಆದರೂ, ಟ್ರೇಲರ್‌ನಲ್ಲಿ ಒಂದಷ್ಟು ಸೂಕ್ಷ್ಮ ವಿಷಯಗಳಿವೆ. ಅದನ್ನು ನೋಡಿದವರಿಗೆ ಇದು ಯಾವ ರೀತಿಯ ಸಿನಿಮಾ ಎಂಬುದು ಗೊತ್ತಾಗಲಿದೆಯಂತೆ. ಕಥೆಯಲ್ಲಿ  ಒಬ್ಬ ಅಮಾಯಕ, ಒಂದು ಕೂಪದಲ್ಲಿ ಸಿಲುಕೊಂಡು, ಒದ್ದಾಡಿ, ಆ ಬಳಿಕ ಹೇಗೆ ಹೊರಬರುತ್ತಾನೆ ಎಂಬ ವಿಷಯ ಅಡಕವಾಗಿದೆಯಂತೆ. ಇನ್ನು, ಈ ಚಿತ್ರದಲ್ಲಿ ರೋಜರ್‌ ನಾರಾಯಣ್‌, ಸೋನು ಗೌಡ, ಸರ್ದಾರ್‌ ಸತ್ಯ, ಅಚ್ಯುತ್‌ ಕುಮಾರ್‌ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ