ಕೋವಿಡ್-19 ವಿರುದ್ಧ ಹೋರಾಟಕ್ಕೆ 50 ಲಕ್ಷ ರೂ. ನೆರವು ನೀಡಿದ ಪುನೀತ್ ರಾಜಕುಮಾರ್
Team Udayavani, Mar 31, 2020, 10:48 AM IST
ಬೆಂಗಳೂರು: ಚೀನಾದ ವುಹಾನ್ ಪಟ್ಟಣದಲ್ಲಿ ಆರಂಭವಾದ ಕೋವಿಡ್-19 ಎಂಬ ಸೋಂಕು ವಿಶ್ವದಾದ್ಯಂತ ಹಬ್ಬಿದೆ. ನಮ್ಮ ರಾಜ್ಯದಲ್ಲೂ ಸೋಂಕು ಹಬ್ಬುತ್ತಿದ್ದು, ಸರಕಾರಗಳು ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ನಟರು, ಗಣ್ಯ ವ್ಯಕ್ತಿಗಳು ಸೋಂಕಿನ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಸಹಾಯ ಹಸ್ತ ಚಾಚುತ್ತಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 50 ಲಕ್ಷ ರೂ ನೀಡಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಪರಿಹಾರ ನಿಧಿಗೆ ಪುನೀತ್ ರಾಜಕುಮಾರ್ 50 ಲಕ್ಷ ರೂ ನೆರವು ನೀಡಿದರು. ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವಥ ನಾರಾಯಣ ಕೂಡಾ ಉಪಸ್ಥಿತರಿದ್ದರು.
ರಾಜ್ಯದಲ್ಲಿ ದಿನೇ ದಿನೇ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ರಾಜ್ಯದಲ್ಲಿ ಇದುವರೆಗೆ ಸುಮಾರು 91 ಜನರಿಗೆ ಸೋಂಕು ತಗುಲಿದ್ದು ಮೂವರು ಸಾವನ್ನಪ್ಪಿದ್ಧಾರೆ.