ಪುನೀತ್‌ ರಾಜಕುಮಾರ್‌ ರ ‘ಯುವರತ್ನ’ ಇಂದು ತೆರೆಗೆ


Team Udayavani, Apr 1, 2021, 8:04 AM IST

ಪುನೀತ್‌ ರಾಜಕುಮಾರ್‌ ರ ‘ಯುವರತ್ನ’ ಇಂದು ತೆರೆಗೆ

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರ ಇಂದು (ಏ. 1) ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ತೆರೆಕಾಣುತ್ತಿದ್ದು, ಎರಡೂ ಭಾಷೆಗಳಲ್ಲೂ ಚಿತ್ರದ ಬಿಡುಗಡೆಗೆ ಭರ್ಜರಿ ತಯಾರಿ ನಡೆದಿದೆ. ಇಂದು ಮುಂಜಾನೆಯಿಂದಲೇ “ಯುವರತ್ನ’ ಚಿತ್ರದ ಪ್ರದರ್ಶನ ಆರಂಭವಾಗಲಿದ್ದು, ತಮ್ಮ ನೆಚ್ಚಿನ ನಟ ಚಿತ್ರವನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಪವರ್‌ಸ್ಟಾರ್‌ ಫ್ಯಾನ್ಸ್‌ ಕೂಡ ಕಾತುರರಾಗಿದ್ದಾರೆ.

ಇನ್ನು “ಯುವರತ್ನ’ ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ಗೆ ಸಯೇಶಾ ಸೈಗಲ್‌ ಮೊದಲ ಬಾರಿಗೆ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಪ್ರಕಾಶ್‌ ರೈ, ಸಾಯಿಕುಮಾರ್‌, ಧನಂಜಯ್‌, ದಿಗಂತ್‌, ಸೋನು ಗೌಡ, ವಿಶಾಲ್‌ ಹೆಗ್ಡೆ, ಸಾಧುಕೋಕಿಲ, ರಂಗಾಯಣ ರಘು, ಅಚ್ಯುತ ಕುಮಾರ್‌, ಅವಿನಾಶ್‌, ಸುಧಾರಾಣಿ, ಪ್ರಕಾಶ್‌ ಬೆಳವಾಡಿ, ತಾರಕ್‌ ಪೊನ್ನಪ್ಪ, ರಾಜೇಶ್‌ ನಟರಂಗ, ಗುರುದತ್‌, ಕುರಿ ಪ್ರತಾಪ್‌, ಹನುಮಂತೇ ಗೌಡ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಹೊಂಬಾಳೆ ಫಿಲಂಸ್‌’ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು “ಯುವರತ್ನ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. “ಯುವರತ್ನ’ ಚಿತ್ರಕ್ಕೆ ಸಂತೋಷ್‌ ಆನಂದರಾಮ್‌ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಎಸ್‌. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ವೆಂಕಟೇಶ್‌ ಅಂಗುರಾಜ್‌ ಛಾಯಾಗ್ರಹಣ, ಜ್ಞಾನೇಶ್‌ ಬಿ. ಮಠದ್‌ ಸಂಕಲನವಿದೆ. ಶಿವಕುಮಾರ್‌ ಕಲಾ ನಿರ್ದೇಶನ, ಚಿನ್ನಿಪ್ರಕಾಶ್‌, ಜಾನಿ, ಸಿರೀಶ್‌, ಮೋಹನ್‌ ನೃತ್ಯ ನಿರ್ದೇಶನವಿದೆ. ಚಿತ್ರದ ಸಾಹಸ ದೃಶ್ಯಗಳಿಗೆ ರಾಮ್‌ ಲಕ್ಷ್ಮಣ್‌, ಅಂಬು ಅರಿವು, ವಿಜಯ…, ದಿಲೀಪ್‌ ಸುಬ್ರಹ್ಮಣ್ಯಂ ಸಾಹಸ ಸಂಯೋಜಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಹಾಡುಗಳು ಮತ್ತು ಟ್ರೇಲರ್‌ಗಳ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ “ಯುವರತ್ನ’ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇನ್ನು ಚಿತ್ರತಂಡ ಕೂಡ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದ್ದು, ರಾಜ್ಯದ ಉದ್ದಗಲ ಸಂಚಾರ ಮಾಡಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ಮಾಡಿದೆ. ಒಟ್ಟಾರೆ ರಿಲೀಸ್‌ಗೂ ಮೊದಲೇ ಸೌಂಡ್‌ ಮಾಡುತ್ತಿರುವ ಪುನೀತ್‌ ಅವರ ಪವರ್‌ ಪ್ಯಾಕ್‌ ಸಿನಿಮಾ “ಯುವರತ್ನ’ ಥಿಯೇಟರ್‌ನಲ್ಲಿ ಪ್ರೇಕ್ಷಕ ಪ್ರಭು ಗಳಿಗೆ ಹೇಗೆಲ್ಲಾ ಇಷ್ಟವಾಗುತ್ತದೆ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

ಟಾಪ್ ನ್ಯೂಸ್

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಮತ್ತೆ 124 ಸೋಂಕು ಪ್ರಕರಣ ಪತ್ತೆ

ಮತ್ತೆ 124 ಸೋಂಕು ಪ್ರಕರಣ ಪತ್ತೆ

ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20ರಂದು ಆರೆಂಜ್‌ ಅಲರ್ಟ್‌

ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20 ಕ್ಕೆ ಆರೆಂಜ್‌ ಅಲರ್ಟ್‌: ಹವಾಮಾನ ಇಲಾಖೆಯ ಮುನ್ಸೂಚನೆ

Untitled-1

ಭಾರೀ ಮಳೆ: ಕೇರಳದ 12 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!

ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಿಂಗ ತಾರತಮ್ಯದ ಬಗ್ಗೆ  ರಮ್ಯಾ ಕಾಮೆಂಟ್‌

ಲಿಂಗ ತಾರತಮ್ಯದ ಬಗ್ಗೆ ರಮ್ಯಾ ಕಾಮೆಂಟ್‌

shivarajkumar’s ashwathama shooting starts soon

‘ಅಶ್ವತ್ಥಾಮ’ನಾಗಲು ಶಿವಣ್ಣ ರೆಡಿ; ಸೆಪ್ಟೆಂಬರ್‌ನಿಂದ ಚಿತ್ರೀಕರಣ ಪ್ರಾರಂಭ

ಕಲರ್‌ ಫುಲ್‌ ಇವೆಂಟ್‌ನಲ್ಲಿ ‘ಗರುಡ’ ಪಯಣ; ಈ ವಾರ ತೆರೆಗೆ

ಕಲರ್‌ ಫುಲ್‌ ಇವೆಂಟ್‌ನಲ್ಲಿ ‘ಗರುಡ’ ಪಯಣ; ಈ ವಾರ ತೆರೆಗೆ

ಫಾರೆನ್ಸಿಕ್‌ ಡಿಟೆಕ್ಟಿವ್‌ ಪಾತ್ರದಲ್ಲಿ ರಚನಾ ಇಂದರ್‌

ಫಾರೆನ್ಸಿಕ್‌ ಡಿಟೆಕ್ಟಿವ್‌ ಪಾತ್ರದಲ್ಲಿ ರಚನಾ ಇಂದರ್‌

“ಮೆಟಡೋರ್‌” ಏರಿದ ಕವಿತಾ ಗೌಡ

“ಮೆಟಡೋರ್‌” ಏರಿದ ಕವಿತಾ ಗೌಡ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

ಮತ್ತೆ “ಎ’ ಗ್ರೇಡ್‌ಗೇರಿದ ದ.ಕ., ಸಮತೋಲನ ಕಾಯ್ದುಕೊಂಡ ಉಡುಪಿ

ಮತ್ತೆ “ಎ’ ಗ್ರೇಡ್‌ಗೇರಿದ ದಕ್ಷಿಣ ಕನ್ನಡ, ಸಮತೋಲನ ಕಾಯ್ದುಕೊಂಡ ಉಡುಪಿ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಭೋವಿ ಅಭಿವೃದ್ಧಿ ನಿಗಮದ ಎಂಡಿ ಮೇಲೆ ಎಸಿಬಿ ದಾಳಿ

ಭೋವಿ ಅಭಿವೃದ್ಧಿ ನಿಗಮದ ಎಂಡಿ ಮೇಲೆ ಎಸಿಬಿ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.