ಪುನೀತ್‌ ಈಗ ನಟ ಸಾರ್ವಭೌಮ; ಹೊಸ ಚಿತ್ರಕ್ಕೆ ಟೈಟಲ್‌ ಸಿಕ್ತು


Team Udayavani, Mar 15, 2018, 1:51 PM IST

Puneeth-Rajakumar-n.jpg

ಡಾ.ರಾಜ್‌ಕುಮಾರ್‌ ಅವರಿಗೆ “ನಟ ಸಾರ್ವಭೌಮ’ ಎಂಬ ಬಿರುದನ್ನು ಅಭಿಮಾನಿಗಳು, ಚಿತ್ರಪ್ರೇಮಿಗಳು ಕೊಟ್ಟಿದ್ದು ನಿಮಗೆ ಗೊತ್ತೇ ಇದೆ. ಈಗ ಆ ಬಿರುದು ಪುನೀತ್‌ರಾಜಕುಮಾರ್‌ಗೆ ಸಿಕ್ಕಿದೆ. ಇದು ಬೇರ್ಯಾರೋ ಕೊಟ್ಟ ಬಿರುದಲ್ಲ. ಚಿತ್ರತಂಡವೊಂದು ಕೊಟ್ಟ ಬಿರುದು! ಹೌದು, ಪುನೀತ್‌ರಾಜಕುಮಾರ್‌ ಅವರ ಹೊಸ ಚಿತ್ರದ ಟೈಟಲ್‌ ಬಗ್ಗೆ ಅನೇಕರಿಗೆ ಕುತೂಹಲವಿತ್ತು. ಚಿತ್ರಕ್ಕೆ ಏನು ಟೈಟಲ್‌ ಇಡಬಹುದೆಂದು ಅಭಿಮಾನಿಗಳು ಕಾಯುತ್ತಿದ್ದರು. ಈಗ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದ್ದು, “ನಟ ಸಾರ್ವಭೌಮ’ ಎಂದಿಡಲಾಗಿದೆ. ಈ ಮೂಲಕ ಮುಂದೆ ಪುನೀತ್‌ ಅವರನ್ನು ಅಭಿಮಾನಿಗಳು “ನಟ ಸಾರ್ವಭೌಮ’ ಎಂದು ಕರೆಯಬಹುದು. 

ರಾಕ್‌ಲೈನ್‌ ವೆಂಕಟೇಶ ನಿರ್ಮಾಣದ ಈ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಿದ್ದಾರೆ. “ರಣವಿಕ್ರಮ’ ನಂತರ ಪುನೀತ್‌-ಪವನ್‌ ಜೋಡಿಯ ಎರಡನೇ ಸಿನಿಮಾವಿದು. ಈಗಾಗಲೇ “ನಟ ಸಾರ್ವಭೌಮ’ ಚಿತ್ರೀಕರಣ ಕೂಡಾ ಆರಂಭವಾಗಿದೆ. ಈ ಚಿತ್ರಕ್ಕಾಗಿ ಪುನೀತ್‌ ಹೇರ್‌ಸ್ಟೈಲ್‌ ಕೂಡಾ ಬದಲಾಗಿದ್ದು, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಅಂದಹಾಗೆ, ಆರಂಭದಲ್ಲಿ ಈ ಚಿತ್ರಕ್ಕೆ ಪ್ರಿಯಾಂಕಾ ಜ್ವಾಲಕರ್‌ ನಾಯಕಿಯಾಗಿದ್ದರು. ಈಗ ಅವರು ಬದಲಾಗಿದ್ದು, ರಚಿತಾ ರಾಮ್‌ಗೆ ಪುನೀತ್‌ ಸಿನಿಮಾದಲ್ಲಿ ಮತ್ತೂಮ್ಮೆ ಅವಕಾಶ ಸಿಕ್ಕಿದೆ. ಚಿತ್ರಕ್ಕೆ ವೈದಿ ಛಾಯಾಗ್ರಹಣ, ಇಮಾನ್‌ ಡಿ ಸಂಗೀತವಿದೆ. ಚಿತ್ರದ ಫ‌ಸ್ಟ್‌ಲುಕ್‌ ಪುನೀತ್‌ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. 

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.