
ಪುನೀತ್ ಹೊಸ ಹೇರ್‌ಸ್ಟೈಲ್
Team Udayavani, Mar 12, 2018, 11:18 AM IST
.jpg)
ಸಿನಿಮಾದಿಂದ ಸಿನಿಮಾಕ್ಕೆ ನಟರ ಹೇರ್‌ಸ್ಟೈಲ್ ಬದಲಾಗುತ್ತಲೇ ಇರುತ್ತದೆ. ನಿರ್ದೇಶಕರು ತಮ್ಮ ಸಿನಿಮಾದ ಪಾತ್ರಕ್ಕೆ ತಕ್ಕಂತೆ ಹೀರೋಗಳ ಹೇರ್‌ಸ್ಟೈಲ್ ಬದಲಿಸುತ್ತಾರೆ. ಈಗಾಗಲೇ ಶಿವಣ್ಣ, ಸುದೀಪ್, ದರ್ಶನ್, ಗಣೇಶ್ ಸೇರಿದಂತೆ ಅನೇಕರು ನಟರು ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಪುನೀತ್‌ರಾಜಕುಮಾರ್ ಸರದಿ.
ಪವನ್ ಒಡೆಯರ್ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ಹೊಸ ಹೇರ್ ಸ್ಟೈಲ್‌ನೊಂದಿಗೆ ಮಿಂಚಲಿದ್ದಾರೆ. ಈಗಾಗಲೇ ಪವನ್ ತಮ್ಮ ಕಲ್ಪನೆಗೆ ಅನುಸಾರವಾಗಿ ಹೇರ್‌ಸ್ಟೈಲ್ ಬದಲಿಸಿದ್ದಾರೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಪವನ್ ಒಡೆಯರ್, “ಪುನೀತ್ ಅವರ ಹೊಸ ಹೇರ್‌ಸ್ಟೈಲ್ ವೇಗವನ್ನು ಪ್ರತಿನಿಧಿಸುತ್ತದೆ.
ಸಿನಿಮಾದ ಕಾನ್ಸೆಪ್ಟ್ಗೆ ಸೂಕ್ತವಾಗಿದೆ. ನಾನು ಕೆಲವು ಸ್ಕೆಚ್ ಮಾಡಿಕೊಂಡು ಹೇರ್‌ಸ್ಟೈಲಿಸ್ಟ್ ಜೊತೆ ಶನಿವಾರ ಪುನೀತ್ ಮನೆಗೆ ಹೋಗಿದ್ದೆ. ಆ ಸ್ಕೆಚ್ ಹೇಗೆ ಕಾಣುತ್ತದೆ ಎಂಬ ಕುತೂಹಲ ಪುನೀತ್ ಅವರಿಗಿತ್ತು. ಅದಕ್ಕಾಗಿ ಮೊದಲು ನಾನೇ ಸ್ಕೆಚ್‌ನಂತೆ ಹೇರ್‌ಸ್ಟೈಲ್ ಮಾಡಿಸಿಕೊಂಡೆ. ಅದನ್ನು ನೋಡಿ ಖುಷಿಯಾದ ಪುನೀತ್ ಕೂಡಾ ಹೇರ್‌ಸ್ಟೈಲ್ ಬದಲಿಸಿಕೊಂಡರು’ ಎಂದು ವಿವರ ನೀಡುತ್ತಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಮಾರ್ಚ್ 12 ರಿಂದ ಆರಂಭವಾಗಲಿದೆ. ಚಿತ್ರದಲ್ಲಿ ಪ್ರಿಯಾಂಕಾ ಜ್ವಾಲಕರ್ ನಾಯಕಿಯಾಗಿದ್ದು, ರವಿಶಂಕರ್, ಚಿಕ್ಕಣ್ಣ, ಪ್ರಭಾಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
