ಪವರ್ ತೋರಿಸೋಕೆ ಪುಟಾಣಿಗಳು ರೆಡಿ
Team Udayavani, Apr 8, 2019, 3:00 AM IST
ಈಗಂತೂ ಕಿರುತೆರೆಯಲ್ಲಿ ಎಲ್ಲಿ ನೋಡಿದ್ರೂ ರಿಯಾಲಿಟಿ ಶೋಗಳದ್ದೇ ಜಮಾನ. ಅದರಲ್ಲೂ ಕಿರುತೆರೆಯಲ್ಲಿ ಪ್ರಸಾರವಾಗುವ ಮಕ್ಕಳ ರಿಯಾಲಿಟಿ ಶೋಗಳಿಗೆ ಸಾಕಷ್ಟು ಸಂಖ್ಯೆಯ ವೀಕ್ಷಕರಿರುತ್ತಾರೆ. ಈಗ ಇಂತಹ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಮಕ್ಕಳು ಅಭಿನಯಿಸಿರುವ “ಪುಟಾಣಿ ಪವರ್’ ಎನ್ನುವ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಸದ್ಯ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಪುಟಾಣಿ ಪವರ್’ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ಹಿರಿಯ ಸಾಹಿತಿ ಪ್ರೋ. ದೊಡ್ಡರಂಗೇಗೌಡ, ಮಹೇಂದ್ರ ಮುನ್ನೋತ್, ಗಾಯಕ ಅಜಯ್ ವಾರಿಯರ್ ಮತ್ತಿತರರು ಹಾಜರಿದ್ದು ಚಿತ್ರದ ಹಾಡುಗಳನ್ನು ಮತ್ತು ಟ್ರೇಲರ್ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಎಂ. ಗಜೇಂದ್ರ ನಿರ್ದೇಶನದಲ್ಲಿ ಮೂಡಿಬಂದಿರುವ “ಪುಟಾಣಿ ಪವರ್’ ಚಿತ್ರದಲ್ಲಿ “ಮಜಾಭಾರತ’ ಖ್ಯಾತಿಯ ಬಾಲನಟಿ ಆರಾಧನಾ ಭಟ್ ಮತ್ತಿತರ ಬಾಲ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯ, ಮಾನಸಿಕ ಹಿಂಸೆಗೆ ಪರಿಹಾರವೇನು? ಚಿಣ್ಣರ ಹಕ್ಕು, ಕನಸು ಏನಾಗಿದೆ? ಕಡ್ಡಾಯ ಶಿಕ್ಷಣ ಉಲ್ಲಂಘನೆ ಎಷ್ಟು ಸರಿ?
ಬಾಲ ಕಾರ್ಮಿಕ ಪದ್ದತಿಯ ಪರಿಣಾಮಗಳಿಗೆ ಚಿತ್ರದ ಮೂಲಕ ಉತ್ತರ ಹೇಳಲಾಗಿದೆ. ಮಕ್ಕಳಲ್ಲಿ ಎಷ್ಟೊಂದು ಪವರ್ ಇರುತ್ತದೆ ಅನ್ನೋದೆ “ಪುಟಾಣಿ ಪವರ್’ ಚಿತ್ರ ಎನ್ನುತ್ತದೆ ಚಿತ್ರತಂಡ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ವಿಜಯ್ ಕೃಷ್ಣ. ಡಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರಕ್ಕೆ ಅಂಥೋನಿ ಛಾಯಾಗ್ರಹಣವಿದೆ. ಬಾಗಲಕೋಟೆ ಮೂಲದ ಎಂ. ರಾಜಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಬೇಸಿಗೆ ರಜೆಯ ಮೂಡ್ನಲ್ಲಿರುವ ಮಕ್ಕಳ ಮುಂದೆ ಇದೇ ತಿಂಗಳಾಂತ್ಯಕ್ಕೆ “ಪುಟಾಣಿ ಪವರ್’ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು