ಎದೆ ಬಡಿತ ಜೋರಾಗಿದೆ; ಏಕ್ ಲವ್ ಯಾ ಮೇಲೆ ರಾಣಾ ಡ್ರೀಮ್
Team Udayavani, Feb 25, 2022, 9:57 AM IST
ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರದ ಮೂಲಕ ನವನಟ ರಾಣಾ ಲಾಂಚ್ ಆಗಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ರಾಣಾ’ ಕೂಡಾ ಖುಷಿಯಾಗಿದ್ದಾರೆ. “ಇದು ಎಲ್ಲಾ ವರ್ಗದವರು ನೋಡುವ ಸಿನಿಮಾ. ಚಿತ್ರದಲ್ಲಿ ಲವ್ಸ್ಟೋರಿ, ಸೆಂಟಿಮೆಂಟ್, ಸಾಮಾಜಿಕ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನನಗೊಂದು ದೊಡ್ಡ ಲಾಂಚ್ ಕೂಡಾ ಸಿಕ್ಕಿದೆ’ ಎನ್ನುವುದು ರಾಣಾ ಮಾತು.
ಅಂದಹಾಗೆ, ರಾಣಾ ನಾಯಕ ನಟನಾಗುವ ಮುನ್ನ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದಾರೆ. ಡ್ಯಾನ್ಸ್, ಫೈಟ್, ನಟನೆಯ ಜೊತೆಗೆ ಪ್ರೇಮ್ ನಿರ್ದೇಶನದ “ವಿಲನ್’ ಚಿತ್ರದಲ್ಲಿ ಪ್ರೇಮ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಸುದೀಪ್ ಅವರ ಪಾತ್ರದ ಮಾನಿಟರ್ ಶಾಟ್ ಅನ್ನು ರಾಣಾ ಅವರೇ ಮಾಡಿ, ತೋರಿಸುತ್ತಿದ್ದರಂತೆ.
ಇದನ್ನೂ ಓದಿ:ಗಡಿನಾಡಿನ ಕನ್ನಡಿಗರಿಗೆ ಗುದ್ದು : ಕೇರಳ ಸರಕಾರಿ ಉದ್ಯೋಗಕ್ಕೆ ಮಲಯಾಳ ಕಡ್ಡಾಯ
ಇನ್ನು, ಚಿತ್ರದ ಬಿಡುಗಡೆಯಾಗಿರುವ ಎಲ್ಲಾ ಹಾಡುಗಳು ಹಿಟ್ಲಿಸ್ಟ್ ಸೇರಿವೆ. ಆರಂಭದಲ್ಲಿ ಬಿಟ್ಟ ಹುಡುಗಿಯರ ಬ್ರೇಕಪ್ ಸಾಂಗ್ ಆಗಿ ಹೊರಬಂದ “ಎಣ್ಣೆಗೂ ಹೆಣ್ಣಿಗೂ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಈಗ ಹುಡುಗರ ಬ್ರೇಕಪ್ ಸಾಂಗ್ ರಿಲೀಸ್ ಆದ “ಒಂದು ಊರಲಿ..ಕೊನೆ ಬೀದಿಲಿ, ಇದ್ಳು ಒಬ್ಬಳು ಮುದ್ದು ದೇವತೆ…’ ಎಂದು ಆರಂಭವಾಗುವ ಹಾಡು ಸಿನಿಪ್ರೇಮಿಗಳ ಮನಗೆದ್ದಿದೆ. ಇದರ ಜೊತೆಗೆ “ಡೇಟ್ ಮಾಡೋಣ ಇಲ್ಲ, ಮೀಟ್ ಮಾಡೋಣ’ ಹಾಡು ಕೂಡಾ ಹಿಟ್ ಆಗಿದ್ದು, ಸಿನಿಮಾದ ಕ್ರೇಜ್ ಹೆಚ್ಚಿದೆ ಎನ್ನುವುದು ರಾಣಾ ಮಾತು. ರಕ್ಷಿತಾ ಫಿಲಂ ಫ್ಯಾಕ್ಟರಿಯಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ