ರೌದ್ರ ಭಯಂಕರ ರಾಧಿಕಾ 

Team Udayavani, Oct 19, 2018, 12:05 PM IST

ನಟಿ ರಾಧಿಕಾ ಅವರು “ಭೈರಾದೇವಿ’ ಹಾಗೂ “ದಮಯಂತಿ’ ಚಿತ್ರಗಳಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಎರಡೂ ಚಿತ್ರಗಳ ಪಾತ್ರಗಳು ತುಂಬಾ ಭಿನ್ನವಾಗಿದ್ದರಿಂದ ಖುಷಿಯಿಂದ ನಟಿಸುತ್ತಿರುವುದಾಗಿ ರಾಧಿಕಾ ಈ ಹಿಂದೆಯೇ ಹೇಳಿಕೊಂಡಿದ್ದರು. ಸಹಜವಾಗಿಯೇ ಅಭಿಮಾನಿಗಳಲ್ಲೊಂದು ಕುತೂಹಲವಿತ್ತು, ರಾಧಿಕಾ ಹೇಗೆ ಕಾಣಬಹುದು ಎಂದು. ಈಗ ಕುತೂಹಲಕ್ಕೆ ಉತ್ತರ ಸಿಕ್ಕಿದೆ. “ಭೈರಾದೇವಿ’ ಹಾಗೂ “ದಮಯಂತಿ’ ಚಿತ್ರಗಳ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ.

ಎರಡೂ ಚಿತ್ರಗಳಲ್ಲೂ ರಾಧಿಕಾ ರೌದ್ರ ಅವತಾರದಲ್ಲಿ ಮಿಂಚಿದ್ದಾರೆ. “ಭೈರಾದೇವಿ’ ಚಿತ್ರದ ಟೈಟಲ್‌ಗೆ ತಕ್ಕಂತೆ ಭೈರಾದೇವಿಯಾಗಿ ಅಬ್ಬರಿಸಿರುವ ರಾಧಿಕಾ, ದಮಯಂತಿಯಲ್ಲಿ ಹಾರರ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. “ಭೈರಾದೇವಿ’ ಚಿತ್ರ ರಾಧಿಕಾ ಅವರ ಹೋಂಬ್ಯಾನರ್‌ನಲ್ಲಿ ತಯಾರಾಗುತ್ತಿದ್ದು, ಶ್ರೀಜಯ್‌ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ರಮೇಶ್‌ ಅರವಿಂದ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. “ದಮಯಂತಿ’ ಚಿತ್ರವನ್ನು ನವರಸನ್‌ ನಿರ್ದೇಶಿಸುತ್ತಿದ್ದಾರೆ. 

ಸವಾಲಿನ ಪಾತ್ರ: ರಾಧಿಕಾ ಈ ಸಿನಿಮಾಗಳನ್ನು ಒಪ್ಪಿಕೊಳ್ಳಲು ಕಾರಣ, ಅದರಲ್ಲಿನ ಪಾತ್ರವಂತೆ. ಎರಡೂ ಚಿತ್ರಗಳಲ್ಲೂ ಸವಾಲಿನ ಪಾತ್ರ ಸಿಕ್ಕಿದ್ದು ಅವರಿಗೆ ಖುಷಿಕೊಟ್ಟಿದೆಯಂತೆ. “ಎರಡೂ ಕಥೆಗಳನ್ನು ನಾನು ತುಂಬಾ ಇಷ್ಟಪಟ್ಟು ಒಪ್ಪಿದ್ದೇನೆ. ನಟಿಯಾಗಿ ನನಗೆ ಸವಾಲಿನ ಪಾತ್ರ. ಎರಡೂ ಪಾತ್ರಗಳು ಬೇರೆ ಬೇರೆ ಶೇಡ್‌ನಿಂದ ಕೂಡಿವೆ. ಜನ ಈ ಸಿನಿಮಾಗಳನ್ನು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ ನನಗಿದೆ’ ಎಂದು ತಮ್ಮ ಎರಡು ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ ರಾಧಿಕಾ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ