ರಾಧಿಕಾ ನಟನೆಯ “ನಮಗಾಗಿ’ಗೆ ಮರುಜೀವ?

ಚಿತ್ರೀಕರಿಸಿದ ದೃಶ್ಯ ನೋಡಿ ರಾಧಿಕಾ ನಿರ್ಧಾರ

Team Udayavani, Dec 19, 2019, 7:03 AM IST

ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿರುವ “ನಮಗಾಗಿ’ ಎಂಬ ಸಿನಿಮಾ ಆರಂಭವಾಗಿದ್ದು ನಿಮಗೆ ಗೊತ್ತಿರಬಹುದು. ವಿಜಯ ರಾಘವೇಂದ್ರ ನಾಯಕರಾಗಿದ್ದ ಈ ಚಿತ್ರವನ್ನು ರಘುರಾಮ್‌ ನಿರ್ದೇಶಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಆ ಚಿತ್ರ ನಿಂತು ಹೋಯಿತು. ಆದರೆ, ಈಗ “ನಮಗಾಗಿ’ ಚಿತ್ರಕ್ಕೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಇದೆ. “ನಮಗಾಗಿ’ ಚಿತ್ರಕ್ಕೆ ಮರುಜೀವ ಕೊಡುವ ಕುರಿತಾದ ತೆರೆಮರೆಯ ಬೆಳವಣಿಗೆಗಳು ನಡೆಯುತ್ತಿವೆ.

ಈ ಬಾರಿ ಚಿತ್ರದ ನಿರ್ಮಾಣದ ಹೊಣೆಯನ್ನು ಸ್ವತಃ ರಾಧಿಕಾ ಅವರೇ ಹೊತ್ತುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಂತ ಅಂತಿಮವಾಗಿಲ್ಲ. “ನಮಗಾಗಿ’ ಚಿತ್ರ ರೀ ಟೇಕಾಫ್ ಆಗುವ ಕುರಿತು ಮಾತನಾಡುವ ನಿರ್ದೇಶಕ ರಘುರಾಮ್‌, “ಸದ್ಯಕ್ಕೆ ಆ ಚಿತ್ರ ಮುಂದುವರೆಯುತ್ತದೆ ಅಥವಾ ಇಲ್ಲ ಎಂದು ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ಏಕೆಂದರೆ ಯಾವುದೂ ಅಂತಿಮವಾಗಿಲ್ಲ. ಇಷ್ಟು ದಿನ ನಾನು ಚಿತ್ರೀಕರಿಸಿದ ಫ‌ೂಟೇಜ್‌ ನನ್ನ ಕೈಗೆ ಬಂದಿದ್ದು, ಅದನ್ನು ಎಡಿಟ್‌ ಮಾಡುತ್ತಿದ್ದೇನೆ.

ಆ ದೃಶ್ಯಗಳನ್ನು ರಾಧಿಕಾ ಅವರು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ. ಒಂದು ವೇಳೆ ಅವರು ಓಕೆ ಅಂದರೆ ಚಿತ್ರ ಮುಂದುವರೆಯುತ್ತದೆ. ಚಿತ್ರದ ಚಿತ್ರೀಕರಣ ಇನ್ನೂ ಶೇ 30ರಷ್ಟು ಬಾಕಿ ಇದೆ. ಮುಖ್ಯವಾಗಿ ಫಾರಿನ್‌ ಸನ್ನಿವೇಶಗಳ ಚಿತ್ರೀಕರಣ ಇನ್ನಷ್ಟೇ ಆಗಬೇಕಿದೆ’ ಎನ್ನುವುದು ರಘುರಾಮ್‌ ಮಾತು. ಅಂದಹಾಗೆ, ರಾಧಿಕಾ ಅಭಿನಯದ “ದಮಯಂತಿ’ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿದೆ. ಇದರ ಬೆನ್ನಲ್ಲೇ “ಬೈರಾದೇವಿ’, “ಕಾಂಟ್ರ್ಯಾಕ್ಟ್’ ಚಿತ್ರ ತೆರೆಕಾಣಲಿವೆ. ಈಗ “ನಮಗಾಗಿ’ ಚಿತ್ರದ ಸುದ್ದಿಯೂ ಹರಿದಾಡುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ