ರಾಘಣ್ಣ ಹೀಗೆ ಕಾಣ್ತಾರೆ ನೋಡಿ …

Team Udayavani, Aug 11, 2018, 6:37 PM IST

“ಅಮ್ಮನ ಮನೆ’ ಎಂಬ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಹೊಸದೇನಲ್ಲ. ಈಗಾಗಲೇ ಅವರೇ ಈ ವಿಷಯವಾಗಿ ಹೇಳಿಕೊಂಡಿದ್ದಾರೆ. ಹೊಸ ವಿಷಯವೇನೆಂದರೆ, ಈ ಚಿತ್ರದ ಮುಹೂರ್ತ ಆಗಸ್ಟ್‌ 15ರಂದು ಅವರ ಹುಟ್ಟುಹಬ್ಬದ ಅಂಗವಾಗಿ ಪ್ರಾರಂಭವಾಗಲಿದೆ.

ಅದಕ್ಕೂ ಮುನ್ನ ಚಿತ್ರದ ಫೋಟೋ ಶೂಟ್‌ ಆಗಿದ್ದು, ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಹೇಗೆ ಕಾಣುತ್ತಾರೆ ಎಂಬ ಸ್ಯಾಂಪಲ್‌ ಇಲ್ಲಿದೆ. 14 ವರ್ಷಗಳ ಹಿಂದೆ ಬಿಡುಗಡೆಯಾದ “ಪಕ್ಕದ್ಮನೆ ಹುಡುಗಿ’ ಚಿತ್ರದಲ್ಲಿ ನಟಿಸಿದ್ದು ಬಿಟ್ಟರೆ, ರಾಘವೇಂದ್ರ ರಾಜಕುಮಾರ್‌ ಆ ನಂತರ ನಟಿಸಿರಲಿಲ್ಲ. ಈಗ “ಅಮ್ಮನ ಮನೆ’ ಚಿತ್ರದ ಮೂಲಕ ಅವರು ವಾಪಸ್ಸಾಗುತ್ತಿದ್ದಾರೆ.

ಈ ಚಿತ್ರವು ಶ್ರೀಲಲಿತೆ ಚಿತ್ರಾಲಯ ಬ್ಯಾನರ್‌ನಡಿ ಆತ್ಮಶ್ರೀ ಮುತ್ತು ಆರ್‌.ಎಸ್‌. ಕುಮಾರ್‌ ನಿರ್ಮಿಸುತ್ತಿದ್ದಾರೆ. ಶ್ರೀಲಲಿತೆ ರಚಿಸಿರುವ ಕಥೆಗೆ ಚಿತ್ರಕಥೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತ ನಿಖೀಲ್‌ ಮಂಜು. ಶಿವಾನಂದ್‌ ಅವರು ಸಂಭಾಷಣೆಯನ್ನು ರಚಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಸಮೀರ್‌ ಕುಲಕರ್ಣಿ ಅವರ ಸಂಗೀತ, ಪಿ.ವಿ.ಆರ್‌ ಸ್ವಾಮಿ ಅವರ ಛಾಯಾಗ್ರಹಣ ಮತ್ತು ಆದಿತ್ಯ ಕುಣಿಗಲ್‌ ಅವರ ಸಂಕಲನವಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ