ರಘು ದೀಕ್ಷಿತ್ ಮೇಲಿರಲಿ “ನಿಮ್ಮೆಲ್ಲರ ಆಶೀರ್ವಾದ’: ಖ್ಯಾತ ಗಾಯಕನ ಕಂಠದಲ್ಲಿ ಶೀರ್ಷಿಕೆ ಗೀತೆ!


Team Udayavani, Oct 17, 2020, 4:35 PM IST

nimmellara

ಮಂಗಳೂರು: ಕೋವಿಡ್ ನಡುವೇ ಚಿತ್ರರಂಗ ಗರಿಗೆದರುತ್ತಿದೆ. ಸಿನಿಮಾ ಮಂದಿರಗಳು ಆರಂಭವಾಗಿವೆ. ಇದೆಲ್ಲದರ ನಡುವೇ ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರತಂಡ ಶುಭ ಸಮಾಚಾರವೊಂದನ್ನು ಹಂಚಿಕೊಂಡಿದೆ.

ಹೌದು ! ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರದ ಶೀರ್ಷಿಕೆ ಗೀತೆಯನ್ನು ಖ್ಯಾತ ಬಹುಭಾಷಾ ಗಾಯಕ ರಘು ದೀಕ್ಷಿತ್ ಹಾಡಿದ್ದು, ಅತ್ಯುತ್ತಮವಾಗಿ ಮೂಡಿ ಬಂದಿದೆ. ಆ ಮೂಲಕ ಸುನಾದ್ ಗೌತಮ್ ಸಂಗೀತ ನಿರ್ದೇಶಿಸಿರುವ ಹಾಡು ರಘು ದೀಕ್ಷಿತ್ ಕಂಠದಲ್ಲಿ ಮೋಡಿ ಮಾಡಲು ತಯಾರಾಗುತ್ತಿದೆ. ರೆಕಾರ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ಶೀರ್ಷಿಕೆ ಗೀತೆಯು ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು. ರಘು ದೀಕ್ಷಿತ್ ಹಾಡಿನ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ.

ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಕಥಾಹಂದರ ಹೊಂದಿರುವ “ನಿಮ್ಮೆಲ್ಲರ ಆಶೀರ್ವಾದ’  ಚಿತ್ರಕ್ಕೆ ಯುವ ನಿರ್ದೇಶಕ ರವಿಕಿರಣ್‌ ನಿರ್ದೇಶನ ಮಾಡಿದ್ದಾರೆ. ವರುಣ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ. ನವ ನಾಯಕ ಪ್ರತೀಕ್‌, ಪಾಯಲ್‌ ರಾಧಾಕೃಷ್ಣ ಈ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರವು ಪೊಲೀಸ್ ಒಬ್ಬನ ದೈನಂದಿನ ಜೀವನದ ಕಥಾಹಂದರವನ್ನು ಹೊಂದಿದೆ. ಶೀರ್ಷಿಕೆ ಗೀತೆಯು ಆರಕ್ಷಕರ ಸೇವೆಯನ್ನು ಬಿಂಬಿಸುವಂತಿದ್ದು, ಚಿತ್ರದಲ್ಲಿ ಇನ್ನೂ ಮೂರು ಹಾಡುಗಳು ಇರಲಿವೆ. ಸದ್ಯ ಸಿನಿಮಾವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಾಡುಗಳು ಅಂತಿಮ ಸ್ವರೂಪ ಪಡೆಯುತ್ತಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇನ್ನು “ನಿಮ್ಮೆಲ್ಲರ ಆಶೀರ್ವಾದ’ ಚಿತ್ರದಲ್ಲಿ ಪ್ರತೀಕ್‌ ಶೆಟ್ಟಿ, ಪಾಯಲ್‌ ರಾಧಾಕೃಷ್ಣ ಅವರೊಂದಿಗೆ ದಿನೇಶ್‌ ಮಂಗಳೂರು, ಗೋವಿಂದೇ ಗೌಡ (ಜಿ.ಜಿ), ಅರವಿಂದ ಬೋಳಾರ್‌, ಎಂ.ಎನ್‌ ಲಕ್ಷ್ಮೀದೇವಿ, ಸ್ವಾತಿ ಗುರುದತ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣ ಉಡುಪಿ, ಮಲ್ಪೆ, ಪರ್ಕಳ ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಶರವಣನ್‌ ಜಿ. ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ ಕಾರ್ಯವಿದೆ. ರೂಪೇಂದ್ರ ಆಚಾರ್‌ ಕಲಾ ನಿರ್ದೇಶನವಿದೆ. ಸುನಾದ್‌ ಗೌತಮ್‌ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. “ವರುಣ್‌ ಸಿನಿ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ವರುಣ್‌ ಹೆಗ್ಡೆ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

ಟಾಪ್ ನ್ಯೂಸ್

12tanker1

ಕುಮಟಾದಲ್ಲಿ  ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆ  

siddaramaiah

ಪಕ್ಷಾಂತರ ಪಕ್ಕಾ?:ಶಾಸಕರು ಸಂಪರ್ಕದಲ್ಲಿರುವುದು ಸತ್ಯ ಎಂದ ಸಿದ್ದರಾಮಯ್ಯ

cm-bommai

ತೀವ್ರವಾದ ಉಸ್ತುವಾರಿ ವಿವಾದ: ‘ಪಕ್ಷದ ರಾಜಕೀಯ ನೀತಿ’ ಎಂದ ಸಿಎಂ ಬೊಮ್ಮಾಯಿ

Kota-1

ಉತ್ತರ ಕನ್ನಡಕ್ಕೆ ಕೋಟ, ಲೆಕ್ಕಾಚಾರದ ನೋಟ

1-rewr

ಗಂಗೂಲಿ,ದ್ರಾವಿಡ್,ಕುಂಬ್ಳೆ ವಿಶ್ವಕಪ್ ಗೆದ್ದಿಲ್ಲ; ಅವರು ಕಳಪೆ ಆಟಗಾರರೇ?: ರವಿಶಾಸ್ತ್ರಿ

ಕಾರು ಅಪಘಾತ: ಬಿಜೆಪಿ ಶಾಸಕ ಪುತ್ರ ಸೇರಿ 7 ಮಂದಿ ಮೆಡಿಕಲ್ ವಿದ್ಯಾರ್ಥಿಗಳ ಸಾವು

ಕಾರು ಅಪಘಾತ: ಬಿಜೆಪಿ ಶಾಸಕ ಪುತ್ರ ಸೇರಿ 7 ಮಂದಿ ಮೆಡಿಕಲ್ ವಿದ್ಯಾರ್ಥಿಗಳ ಸಾವು

ಕಾಗೆಯ ಸೇಡು? : ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

ಕಾಗೆಯ ಸೇಡು? : ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಹೊಸಬರ ಇನ್ಸ್ಟಂಟ್‌ ಕರ್ಮ ರಿಲೀಸ್‌ಗೆ ರೆಡಿ

ಹೊಸ ಸಿನಿಮಾಕ್ಕೆ ಶಿವಣ್ಣ ಗ್ರೀನ್‌ ಸಿಗ್ನಲ್‌

ಹೊಸ ಸಿನಿಮಾಕ್ಕೆ ಶಿವಣ್ಣ ಗ್ರೀನ್‌ ಸಿಗ್ನಲ್‌

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ಜೇಮ್ಸ್‌  ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

ಜೇಮ್ಸ್‌  ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

Untitled-1

ಈ ವಾರ ಡಿಎನ್‌ಎ ಬಿಡುಗಡೆ

MUST WATCH

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

ಹೊಸ ಸೇರ್ಪಡೆ

12tanker1

ಕುಮಟಾದಲ್ಲಿ  ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆ  

siddaramaiah

ಪಕ್ಷಾಂತರ ಪಕ್ಕಾ?:ಶಾಸಕರು ಸಂಪರ್ಕದಲ್ಲಿರುವುದು ಸತ್ಯ ಎಂದ ಸಿದ್ದರಾಮಯ್ಯ

11sslc

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ: ಡಾ| ಅಜಯಸಿಂಗ್‌

ಬಂಗಾರಪೇಟೆ: ಹೆಚ್ಚಿದ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ

ಬಂಗಾರಪೇಟೆ: ಹೆಚ್ಚಿದ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ

ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಿ

ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.