ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ನೀಡಿದ ಸುಪ್ರೀಂ
Team Udayavani, Jan 21, 2021, 11:44 AM IST
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಅಂಗೀಕಾರವಾಗಿದೆ. ರಾಗಿಣಿಗೆ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ರಾಗಿಣಿಗೆ ಜಾಮೀನು ನಿರಾಕರಿಸಿ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ನಟಿಗೆ ಜಾಮೀನು ನೀಡಿದೆ.
ಡ್ರಗ್ ಪ್ರಕರಣದಲ್ಲಿ ರಾಗಿಣಿ ಹೆಸರು ಕೇಳಿಬಂದ ಬಳಿಕ ಸಿಸಿಬಿ ಅಧಿಕಾರಿಗಳು ಅವರ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ನಂತರ ಸಪ್ಟೆಂಬರ್ 4ರಂದು ರಾಗಿಣಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ:ಪೊಲಿಟಿಕಲ್ ಡ್ರಾಮಾಕ್ಕೆ ಕ್ರೇಜಿಸ್ಟಾರ್ ನಿರ್ದೇಶನ
ವಿಶೇಷ ನ್ಯಾಯಾಲವು ಸೆ.28ರಂದು ರಾಗಿಣಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ನಟಿ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ರೈಲ್ವೆ ಹಳಿಮೇಲೆ ಎಸೆದು ಹೋದ ಆರೋಪಿಗಳು!
ಇದೀಗ ಸುಪ್ರೀಂ ಕೋರ್ಟ್ ರಾಗಿಣಿಗೆ ಜಾಮೀನು ಮಂಜೂರು ಮಾಡಿದ್ದು, ಸುಮಾರು 140 ದಿನಗಳ ಕಾಲ ಸೆರೆಮನೆವಾಸ ಬಳಿಕ ರಾಗಿಣಿ ನಿಟ್ಟುಸಿರು ಬಿಡುವಂತಾಗಿದೆ.