ಬ್ಲಾಸ್ಟ್ ಸುತ್ತ ರಾಗಿಣಿ ಚಿತ್ರ: Watch
Team Udayavani, Sep 3, 2018, 3:34 PM IST
ರಾಗಿಣಿ ಮುಖ್ಯಭೂಮಿಕೆಯಲ್ಲಿರುವ “ಟೆರರಿಸ್ಟ್’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೈಲರ್ ನಗರದ ಮಂತ್ರಿಮಾಲ್ನಲ್ಲಿ ಬಿಡುಗಡೆಯಾಗಿದ್ದು, ನಟ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದಾರೆ. “ಟೆರರಿಸ್ಟ್’ ಚಿತ್ರದ ಟ್ರೈಲರ್ ಅನ್ನು ಯುಟ್ಯೂಬ್ನಲ್ಲಿ ಡಾಲ್ಬಿ ಸ್ಟಿರಿಯೋ ಸೌಂಡ್ನೊಂದಿಗೆ ನೋಡಬಹುದಾಗಿದೆ.
ಇನ್ನು ಟ್ರೈಲರ್ ನಲ್ಲಿ ಭಯೋತ್ಪಾದಕತೆಯ ತೀವ್ರತೆ, ಅದರ ಕರಾಳ ಮುಖ, ಉಗ್ರವಾದದಿಂದ ನಲುಗುತ್ತಿರುವ ದೇಶ ಹಾಗೂ ಟೆರರಿಸ್ಟ್ಗಳನ್ನು ಮಟ್ಟ ಹಾಕುವ ಪ್ರಯತ್ನಗಳು ಅನಾವರಣಗೊಂಡಿದ್ದು, ಇದೊಂದು ಪಕ್ಕಾ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದೆ. ರಾಗಿಣಿ ಈ ಚಿತ್ರದಲ್ಲಿ ರೇಷ್ಮಾ ಎಂಬ ಮುಸ್ಲಿಂ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ರಾಗಿಣಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದಾರೆ.
ಬಾಂಬ್ ಬ್ಲಾಸ್ಟ್ ಆದಾಗ ನಡೆಯುವ ಘಟನೆಗಳ ಸುತ್ತ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ರಾಗಿಣಿ ಬಹುತೇಕ ಒಂದೇ ಕಾಸ್ಟ್ಯೂಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೆಚ್ಚು ಮಾತನಾಡುವ ರಾಗಿಣಿಗೆ ಇಲ್ಲಿ ಮಾತು ಕಡಿಮೆ. ಅವರ ಮೌನಕ್ಕೆ ಹಿನ್ನೆಲೆ ಸಂಗೀತದ ಮೂಲಕ ಅರ್ಥ ನೀಡಲಾಗಿದೆ. ಚಿತ್ರವನ್ನು ಇನ್ವೆಂಚರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅಲಂಕಾರ ಸಂತಾನ ನಿರ್ಮಿಸಿದ್ದು, ಪಿ.ಸಿ.ಶೇಖರ್ ನಿರ್ದೇಶನ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು