ಮದಕರಿ ಅಲ್ಲ ರಾಜವೀರ ಮದಕರಿ ನಾಯಕ

Team Udayavani, Dec 7, 2019, 10:17 AM IST

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮದಕರಿ ನಾಯಕನ ಕುರಿತ ಐತಿಹಾಸಿಕ ಚಿತ್ರಕ್ಕೆ ಗಂಡುಗಲಿ ಮದಕರಿ ನಾಯಕಎಂದು ಹೆಸರಿಡಲಾಗಿತ್ತು. ಕಳೆದ ಕೆಲ ತಿಂಗಳಿನಿಂದ ಭರದಿಂದ ಪ್ರೀಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಇತ್ತೀಚೆಗಷ್ಟೇ ಚಿತ್ರದುರ್ಗಕ್ಕೆ ಭೇಟಿ ನೀಡಿ, ಅಲ್ಲಿನ ದೇಗುಲಗಳಿಗೆ ಪ್ರದಕ್ಷಣೆ ಹಾಕಿ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತ್ತು.

ಇದರ ಬೆನ್ನಲ್ಲೆ ಶುಕ್ರವಾರ (ಡಿ. 6)ಕ್ಕೆ ಈ ಚಿತ್ರದ ಮುಹೂರ್ತ ಕೂಡ ಅದ್ಧೂರಿಯಾಗಿ ನೆರವೇರಿದೆ. ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ, ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್‌ ಹಾಜರಿದ್ದು, ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಗಂಡುಗಲಿ ವೀರಮದಕರಿ ನಾಯಕಚಿತ್ರದ ಶೀರ್ಷಿಕೆ ಕೂಡ ಬದಲಾಗಿದೆ. ಹೌದು, ಈ ಮೊದಲು ಚಿತ್ರಕ್ಕೆ ಗಂಡುಗಲಿ ಮದಕರಿ ನಾಯಕಎಂದು ಹೆಸರಿಡಲಾಗಿತ್ತು. ಆದರೆ ಈಗ ಚಿತ್ರತಂಡ, ಚಿತ್ರಕ್ಕೆ ರಾಜವೀರ ಮದಕರಿ ನಾಯಕಎಂದು ಹೆಸರಿಟ್ಟಿದೆ. ಇನ್ನು ಈ ಚಿತ್ರದಲ್ಲಿ ನಟಿ ಸುಮಲತಾ ಅಂಬರೀಶ್‌ ಕೂಡ ಬಣ್ಣ ಹಚ್ಚಲಿದ್ದು, ಮದಕರಿ ನಾಯಕನ ತಾಯಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ