ರಾಜ್‌ ಮೊಮ್ಮಗನ ಚಿತ್ರಕ್ಕೆ “ಶಿವ 143′ ಟೈಟಲ್‌ ಫಿಕ್ಸ್‌

ಧೀರನ್‌ ಅಭಿನಯದ ಚೊಚ್ಚಲ ಚಿತ್ರ ರೆಡಿ

Team Udayavani, Oct 14, 2019, 3:05 AM IST

ಡಾ.ರಾಜಕುಮಾರ್‌ ಮೊಮ್ಮಗ ಧೀರನ್‌ ರಾಮ್‌ಕುಮಾರ್‌ ಚಿತ್ರರಂಗಕ್ಕೆ ಎಂಟ್ರಿಯಾಗಿರುವುದು ಗೊತ್ತೇ ಇದೆ. ಅದಾಗಲೇ ಸದ್ದಿಲ್ಲದೆಯೇ ಸಿನಿಮಾವೊಂದರ ಚಿತ್ರೀಕರಣ ಕೂಡ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಹಿಂದೆ ಧೀರನ್‌ ಅಭಿನಯದ ಚಿತ್ರಕ್ಕೆ “ದಾರಿ ತಪ್ಪಿದ ಮಗ’ ಎಂದು ಹೆಸರಿಡಲಾಗಿತ್ತು. ಆದರೆ, ಚಿತ್ರದ ಕಥೆಗೆ ಆ ಶೀರ್ಷಿಕೆ ಹೊಂದಿಕೆ ಆಗಲ್ಲ ಎಂಬ ಕಾರಣಕ್ಕೆ ಶೀರ್ಷಿಕೆ ಬದಲಿಸಲು ಚಿತ್ರತಂಡ ತೀರ್ಮಾನಿಸಿ, ಬದಲಿಸಿತ್ತು.

ಈಗ ಧೀರನ್‌ ನಟಿಸಿರುವ ಚಿತ್ರಕ್ಕೆ ಹೊಸ ಶೀರ್ಷಿಕೆ ಇಡಲಾಗಿದೆ. ಅಂದಹಾಗೆ, ಅದರ ಹೆಸರು “ಶಿವ 143′. ಹೌದು, ಚಿತ್ರರಂಗದಲ್ಲಿ ಆಗಾಗ ಒಂದಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಆರಂಭದಲ್ಲಿ ಇದ್ದದ್ದು, ಕ್ಲೈಮ್ಯಾಕ್ಸ್‌ ವೇಳೆಗೆ ಇರೋದಿಲ್ಲ. ಅದು ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಂತ್ರಜ್ಞರು ಹೀಗೆ ಒಂದಲ್ಲ ಒಂದು ಬದಲಾವಣೆ ಸಹಜ. ಹಾಗೆಯೇ ಧೀರನ್‌ ಅಭಿನಯದ “ದಾರಿ ತಪ್ಪಿದ ಮಗ’ ಚಿತ್ರದ ಹೆಸರು ಬದಲಾಗಿದ್ದು, ಈಗ “ಶಿವ 143′ ಎಂಬ ಹೆಸರಿಟ್ಟಿರುವುದು ಸದ್ಯದ ಸುದ್ದಿ.

“ಶಿವ 143′ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಬಿಡುಗಡೆಯ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಚಿತ್ರದಲ್ಲಿ ಧೀರನ್‌ ರಾಮ್‌ಕುಮಾರ್‌ ಅವರಿಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿರುವ ಧೀರನ್‌, ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ವರ್ಕೌಟ್‌ ಮಾಡಿದ್ದಾರೆ. ಅನಿಲ್‌ಕುಮಾರ್‌ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ನಿರ್ಮಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಸೋಮವಾರಪೇಟೆ: ಕೊಡಗು ಪ್ಯಾಕೇಜ್‌ ಸೇರಿದಂತೆ ಇತರ ಯೋಜನೆಯಡಿ ತಾಲೂಕಿನಲ್ಲಿ ನಿರ್ಮಾಣ ವಾಗುತ್ತಿರುವ ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂದು ಆರೋಪಿಸಿದ...

  • ಗೊಗ್ಗಯ್ಯನ ಮೂಗು ಬೆಳೆಯುತ್ತಾ ಹೋಯಿತು. ಅದನ್ನು ಹೊತ್ತುಕೊಂಡು ತಿರುಗಾಡುವುದೇ ಕಷ್ಟವಾಗತೊಡಗಿತು. ಕಡೆಗೊಂದು ದಿನ ಅದಕ್ಕೆ ಪರಿಹಾರವೂ ಸಿಕ್ಕಿತು. ಆ ಹುಡುಗ...

  • ಉಡುಪಿ: ಬಿಸಿಲಿನ ಧಗೆ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದು, 35 ಡಿಗ್ರಿವರೆಗೆ ತಲುಪಿದೆ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಒಂದೆರಡು ಡಿಗ್ರಿ ಹೆಚ್ಚಳವಾಗುವ...

  • ರಾಮು ಆಟ- ಪಾಠಗಳಲ್ಲಿ ಬಹಳ ಜಾಣ. ಅವನು ತುಂಬಾ ತುಂಟನೂ ಆಗಿದ್ದ. ಶಾಲೆಯಲ್ಲಿ ಯಾವಾಗಲೂ ಏನಾದರೊಂದು ಕೀಟಲೆ ಮಾಡುತ್ತಿರುತ್ತಿದ್ದ. ರಾಮುವಿನ ತುಂಟಾಟ ಮಿತಿಮೀರಿದಾಗೆಲ್ಲಾ...

  • ಮಹಾನಗರ: ವಿದ್ಯುತ್‌ ಚಾಲಿತ ವಾಹನಗಳಿಗೆ ಕೇಂದ್ರ ಸರಕಾರ ಪ್ರೋತ್ಸಾಹ ನೀಡುತ್ತಿರುವ ಬೆನ್ನಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಲೆಕ್ಟ್ರಿಕ್‌...