ಆ್ಯಮಿ ಜಾಕ್ಸನ್ಗೆ ರಕ್ಷಿತಾ ಡಬ್ಬಿಂಗ್
Team Udayavani, May 22, 2018, 11:10 AM IST
ಸದ್ಯ “ದಿ ವಿಲನ್’ ಚಿತ್ರಕ್ಕೆ ಡಬ್ಬಿಂಗ್ ನಡೆಯುತ್ತಿದೆ. ಚಿತ್ರದ ನಾಯಕಿಯಾಗಿ ನಟಿಸಿರುವ ಆ್ಯಮಿ ಜಾಕ್ಸನ್ಗೆ ಯಾರಿಂದ ಡಬ್ಬಿಂಗ್ ಮಾಡಿಸೋದೆಂದು ಪ್ರೇಮ್ ಯೋಚಿಸುತ್ತಿದ್ದಾಗ ಅವರ ತಲೆಗೆ ಬಂದ ಹೆಸರು ರಕ್ಷಿತಾ ಅವರದ್ದು. ರಕ್ಷಿತಾ ಅವರನ್ನು ಪ್ರೇಮ್ ಈಗ ಡಬ್ಬಿಂಗ್ ಮಾಡಲು ಒಪ್ಪಿಸಿದ್ದಾರೆ.
ಆ್ಯಮಿ ಜಾಕ್ಸನ್ ಪಾತ್ರಕ್ಕೆ ರಕ್ಷಿತಾ ಡಬ್ಬಿಂಗ್ ಮಾಡುತ್ತಿದ್ದಾರೆ. ರಕ್ಷಿತಾ ತಮ್ಮ ಸಿನಿಮಾಗಳಿಗೆ ತಾವೇ ಡಬ್ ಮಾಡುತ್ತಿದ್ದರು. ಸಿನಿಮಾ ಮಾಡುವುದನ್ನು ನಿಲ್ಲಿಸಿದ ನಂತರ ಹಿರಿತೆರೆಯಲ್ಲಿ ಅವರ ಧ್ವನಿಯನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದರು. ಈಗ “ದಿ ವಿಲನ್’ ಮೂಲಕ ಮತ್ತೆ ಅವರ ಧ್ವನಿಯನ್ನು ಪಾತ್ರವೊಂದರ ಮೂಲಕ ಕೇಳುವಂತಾಗಿದೆ.
ಅಷ್ಟಕ್ಕೂ ರಕ್ಷಿತಾ ಅವರಿಂದ ಡಬ್ಬಿಂಗ್ ಮಾಡಿಸಿದ ಉದ್ದೇಶವೇನು ಎಂದು ಕೇಳಬಹುದು. ಪ್ರೇಮ್ ಹೇಳುವಂತೆ ರಕ್ಷಿತಾ ಅವರ ಧ್ವನಿ ಆ್ಯಮಿ ಜಾಕ್ಸನ್ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತದೆಯಂತೆ. ಜೊತೆಗೆ ಇಂಗ್ಲೀಷ್ ಮಿಶ್ರಿತ ಕನ್ನಡ ಮಾತನಾಡುವ ಪಾತ್ರವಾದ್ದರಿಂದ ರಕ್ಷಿತಾ ಅವರಿಂದ ಡಬ್ಬಿಂಗ್ ಮಾಡಿಸಲಾಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ