ಸದ್ಯ ರಾಮ್ ಗೆ ಕನ್ನಡದ ಜೊತೆಯಲ್ಲಿ ಹೆಚ್ಚಾಗಿ ಪರಭಾಷೆಯಲ್ಲಿ ಬೇಡಿಕೆ ಇದೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸುತ್ತಿತುವ ‘ಆರಟ್ಟು’ ಚಿತ್ರದಲ್ಲಿ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು ನಟ ಕಾರ್ತಿ ಅಭಿನಯದ ‘ಸುಲ್ತಾನ್’ ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದು ಅದರ ಫಸ್ಟ್ ಲುಕ್ ರಿಲೀಸ್ ಆಗಿದೆ.
ಹೌದು ಅಜಯ್ ಭೂಪತಿ ನಿರ್ದೇಶಿಸುತ್ತಿರುವ ‘ಮಹಾ ಸಮುದ್ರಂ’ ಸಿನಿಮಾದಲ್ಲಿ ರಾಮಚಂದ್ರರಾಜು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧನಂಜಯ್ ಎಂಬ ಕ್ಯಾರೆಕ್ಟರ್ ನಿರ್ವಹಿಸುತ್ತಿದ್ದು, ಚಿತ್ರತಂಡ ರಾಮ್ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ‘ಮಹಾ ಸಮುದ್ರಂ’ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 96 ರಿಮೇಕ್ ‘ಜಾನು’ ಸಿನಿಮಾದಲ್ಲಿ ನಟಿಸಿದ್ದ ಶರ್ವಾನಂದ್ ಹಾಗೂ ಸಿದ್ಧಾರ್ಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇವರ ಜೊತೆ ಜಗಪತಿ ಬಾಬು, ರಾವ್ ರಮೇಶ್ ಸಹ ನಟಿಸಿದ್ದಾರೆ.