- Sunday 15 Dec 2019
100ರ ಸಂಭ್ರಮದಲ್ಲಿ ರಮೇಶ್ ಅರವಿಂದ್
ಮುಕ್ತಾಯದ ಹಂತಕ್ಕೆ ಚಿತ್ರ
Team Udayavani, Nov 14, 2019, 6:01 AM IST
ರಮೇಶ್ ಅರವಿಂದ್ ನಿರ್ದೇಶನದ “100′ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರ ಮುಕ್ತಾಯದ ಹಂತಕ್ಕೆ ಬಂದಿದೆ. ಸದ್ಯ ಹಾಡಿನ ಚಿತ್ರೀಕರಣದಲ್ಲಿದೆ ಚಿತ್ರತಂಡ. ಈ ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಥೆ ಹಾಗೂ ಪಾತ್ರದ ಬಗ್ಗೆ ರಮೇಶ್ ಅರವಿಂದ್ ಕೂಡಾ ಖುಷಿಯಾಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮಾತನಾಡುವ “ಹುಡುಗಿಯರನ್ನು ಹುಡುಗರು ಫಾಲೋ ಮಾಡೋದು, ತೊಂದರೆ ಕೊಡೋದು ಎಂಬ ಒಂದು ಕಾಲವಿತ್ತು.
ಈಗ ಫಾಲೋ ಮಾಡೋದು, ತೊಂದರೆ ಕೊಡೋದು ಎಲ್ಲವೂ ಸೋಶಿಯಲ್ ಮೀಡಿಯಾ ಮೂಲಕ ಆಗುತ್ತಿದೆ. ಹೆಣ್ಣು ಮಕ್ಕಳು ಯಾರನ್ನೋ ಫ್ರೆಂಡ್ ಆಗಿ ಒಪ್ಪಿಕೊಳ್ಳುತ್ತಾರೆ. ಆ ನಂತರ ಫ್ರೆಂಡ್‌ಶಿಪ್‌ನ ಕಟ್ ಮಾಡೋಕೂ ಆಗಲ್ಲ, ಅನ್‌ಫ್ರೆಂಡ್ ಮಾಡೋಕೂ ಆಗಲ್ಲ. ಈ ತರಹ ವಿಪರೀತ ತೊಂದರೆಯಲ್ಲಿ ಕೆಲವು ಹೆಣ್ಮಕ್ಕಳು ಸಿಲುಕಿದ್ದಾರೆ. ಇದನ್ನು “ಸೈಬರ್ ಸ್ಟಾಕಿಂಗ್’ ಎನ್ನುತ್ತಾರೆ. ಕಂಪ್ಯೂಟರ್, ಮೊಬೈಲ್ ಮೂಲಕ ಸತತವಾಗಿ ಹುಡುಗಿಯರ ಮೇಲೆ ಕಣ್ಣಿಟ್ಟು ಅವರಿಗೆ ತೊಂದರೆ ಕೊಡುವ ಒಂದಷ್ಟು ಮಂದಿ ಇದ್ದಾರೆ.
ಆ ತರಹದ ಕಥಾ ವಸ್ತುವನ್ನಿಟ್ಟುಕೊಂಡು ಹೆಣೆದಿರುವ ಕಥೆ 100′ ಎನ್ನುತ್ತಾರೆ ರಮೇಶ್ ಅರವಿಂದ್ ಮಾತು. ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ವಿಷ್ಣು ಎಂಬ ಸೈಬರ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ತೊಂದರೆಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಪಾತ್ರ ಅವರದು. ಚಿತ್ರಕ್ಕೆ ಸತ್ಯಹೆಗಡೆ ಛಾಯಾಗ್ರಹಣ, ಎರಡು ಹಾಡುಗಳಿಗೆ ಸಂಗೀತ ರವಿ ಬಸ್ರೂರು, ಮೂರು ಫೈಟ್‌ಗಳಿಗೆ ರವಿವರ್ಮ ಸಾಹಸ ಸಂಯೋಜನೆ, ಆಕಾಶ್ ಶ್ರೀವತ್ಸ ಸಂಕಲನವಿದೆ. ಮೋಹನ್‌ಪಂಡಿತ್, ನೃತ್ಯ ಧನು ಅವರದಾಗಿದೆ.
ಈ ವಿಭಾಗದಿಂದ ಇನ್ನಷ್ಟು
-
ಕಳೆದ ವರ್ಷ ಡಿಸೆಂಬರ್ 21 ರಂದು ಯಶ್ ಅಭಿನಯದ "ಕೆಜಿಎಫ್' ಬಿಡುಗಡೆಯಾಗಿತ್ತು. ಈ ಡಿಸೆಂಬರ್ 21 ರಂದು "ಕೆಜಿಎಫ್-2' ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಲಿದೆ. ಹೌದು,...
-
ರಕ್ಷಿತ್ ಶೆಟ್ಟಿ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ "ಅವನೇ ಶ್ರೀಮನ್ನಾರಾಯಣ' ಚಿತ್ರ ತೆರೆಗೆ ಬರೋದಕ್ಕೆ ದಿನ ಗಣನೆ ಶುರುವಾಗಿದೆ. ಇತ್ತೀಚೆಗಷ್ಟೇ ಚಿತ್ರದ...
-
ಸುದೀಪ್ ಅಭಿನಯದ "ಕೋಟಿಗೊಬ್ಬ 3' ಚಿತ್ರ ಇನ್ನೇನು ಮುಗಿಯೋ ಹಂತ ತಲುಪಿದೆ. ಇತ್ತೀಚೆಗೆ ಮುಂಬೈನ ಪಬ್ವೊಂದರಲ್ಲಿ ಚಿತ್ರದ ಟೈಟಲ್ ಟ್ರಾಕ್ ಸಾಂಗ್ಗೆ ಚಿತ್ರೀಕರಣ...
-
ಕಳೆದ ಬಾರಿ ಕನ್ನಡ "ಬಿಗ್ಬಾಸ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದ ಪ್ರಗತಿಪರ ಕೃಷಿಕ ಶಶಿಕುಮಾರ್, ಈಗ ಹೀರೋ ಆಗಿ...
-
ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಜಯಶ್ರೀ ಕೂಡಾ ಒಬ್ಬರು. ರೂಪದರ್ಶಿಯಾಗಿ, ನಟಿಯಾಗಿ ಜನಪ್ರಿಯತೆ ಕಂಡಿದ್ದ ಈ ನಟಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ...
ಹೊಸ ಸೇರ್ಪಡೆ
-
ದಿಬ್ರುಗಢ್: ಕೇಂದ್ರ ಸರಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಸ್ಸಾಂ ರಾಜ್ಯದ...
-
ಹೊಸದಿಲ್ಲಿ: ಅತ್ಯಾಚಾರ ಅಪರಾಧಿಗಳಿಗೆ ಆರು ತಿಂಗಳ ಒಳಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ...
-
ನವದೆಹಲಿ: ರಾಹುಲ್ ಗಾಂಧಿ ತನ್ನ ಹೆಸರಿನ ಜೊತೆಗೆ ಸಾವರ್ಕರ್ ಹೆಸರು ಸೇರಿಸಿಕೊಳ್ಳಬೇಕಾದರೆ “ವೀರ್ ಸಾವರ್ಕರ್ ಅವರಂತೆಯೇ ಧೈರ್ಯಶಾಲಿಯಾಗಿರಬೇಕೆಂದು” ಬಿಜೆಪಿ...
-
ಬೆಂಗಳೂರು: ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಎರಡೂ ಬದಿ ಹೊಟೇಲ್ ಸೇರಿದಂತೆ ಪ್ರವಾಸಿಗರಿಗೆ ಪೂರಕವಾದ ಸೌಲಭ್ಯ ನಿರ್ಮಿಸಲು ಮುಂದೆ ಬರುವವರಿಗೆ...
-
ಕಳೆದ ವರ್ಷ ಡಿಸೆಂಬರ್ 21 ರಂದು ಯಶ್ ಅಭಿನಯದ "ಕೆಜಿಎಫ್' ಬಿಡುಗಡೆಯಾಗಿತ್ತು. ಈ ಡಿಸೆಂಬರ್ 21 ರಂದು "ಕೆಜಿಎಫ್-2' ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಲಿದೆ. ಹೌದು,...