Udayavni Special

ಶಿವಾಜಿ ಗೆಲುವಿಗೆ ರಮೇಶ್‌ ಖುಷಿ‌

ಎರಡನೇ ವಾರದತ್ತ ಸಕ್ಸಸ್‌ಫ‌ುಲ್‌ ರನ್ನಿಂಗ್‌

Team Udayavani, Feb 27, 2020, 7:03 AM IST

Shivaji-Surathkal

“ನಾವು ಇಷ್ಟಪಟ್ಟ ಕೆಲಸವನ್ನು, ಇಷ್ಟಪಡುವ ಜನರ ಜೊತೆ, ಇಷ್ಟಪಡುವ ಜಾಗದಲ್ಲಿ, ಇಷ್ಟಪಟ್ಟು ಮಾಡುವುದೇ ಯಶಸ್ಸು. ನಾವು ಇಷ್ಟಪಟ್ಟು ಮಾಡಿದ ಕೆಲಸವನ್ನು ಜನರೂ ಇಷ್ಟಪಟ್ಟರೆ ಅದು ದೊಡ್ಡ ಯಶಸ್ಸು…’ ಹೀಗೆ ಹೇಳಿದ್ದು ರಮೇಶ್‌ ಅರವಿಂದ್‌. ಅವರು ಹೀಗೆ ಹೇಳ್ಳೋಕೆ ಕಾರಣ, “ಶಿವಾಜಿ ಸುರತ್ಕಲ್‌’ ಚಿತ್ರ. ಹೌದು, ರಮೇಶ್‌ ನಟನೆಯ 101ನೇ ಚಿತ್ರ “ಶಿವಾಜಿ ಸುರತ್ಕಲ್‌’ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಉತ್ತಮ ಪ್ರದರ್ಶನದ ಜೊತೆ ಪ್ರೇಕ್ಷಕರು, ವಿಮರ್ಶಕರಿಂದ ಮೆಚ್ಚುಗೆ ಪಡೆದು 2ನೇ ವಾರದತ್ತ ಮುನ್ನಡೆಯುತ್ತಿದೆ.

ಈ ಕುರಿತು ಸಂತಸ ಹಂಚಿಕೊಂಡ ರಮೇಶ್‌, ಯಶಸ್ಸನ್ನು ಹೇಳಿಕೊಂಡ ಪರಿ ಹೀಗಿತ್ತು. “ಇತ್ತೀಚಿನ ವರ್ಷಗಳಲ್ಲಿ ಕೃತಕವಲ್ಲದ ಒಂದು ಸಕ್ಸಸ್‌ ಬರಬೇಕು ಎಂದುಕೊಂಡಿದ್ದೆ. ಅದು ಈಗ “ಶಿವಾಜಿ ಸುರತ್ಕಲ್‌’ ಮೂಲಕ ಈಡೇರಿದೆ. ಥಿಯೇಟರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಡಿಯನ್ಸ್‌ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದೆ ಇದಕ್ಕಿಂತಲೂ ಒಳ್ಳೆಯ ಸಿನಿಮಾ ಮಾಡಬೇಕೆಂಬ ಜವಬ್ದಾರಿ ಜಾಸ್ತಿ ಆಗಿದೆ. ಇನ್ನು ಸಿನಿಮಾವನ್ನು ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಮೆಚ್ಚಿಕೊಂಡಿದ್ದು ಖುಷಿಯಾಯ್ತು. ಟಿಕ್‌ಟಾಕ್‌ನಿಂದಲೂ ಸಿನಿಮಾಕ್ಕೆ ಒಂದಷ್ಟು ಪ್ರಚಾರ ಸಿಕ್ಕಿದೆ.

ಮುಂದೇ ಇಂಥ ಇನ್ನಷ್ಟು ಪಾತ್ರಗಳು ಬಂದರೂ ಬರಬಹುದು’ ಎನ್ನುವುದು ರಮೇಶ್‌ ಮಾತು. ಮೊದಲ ವಾರ ಸುಮಾರು 80 ಕೇಂದ್ರಗಳಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್‌’, 2ನೇ ವಾರದಿಂದ ಸುಮಾರು 120 ಕೇಂದ್ರಗಳಲ್ಲಿ ಪ್ರದರ್ಶನವಾಗುತ್ತಿದೆ. ಪರಭಾಷೆ ಚಿತ್ರಮಂದಿರವೆಂದು ಹೇಳುತ್ತಿದ್ದ ಊರ್ವಶಿ ಟಾಕೀಸ್‌ನಲ್ಲಿಯೂ ಚಿತ್ರ ಶೇ.80ರಷ್ಟು ಹೌಸ್‌ಫ‌ುಲ್‌ ಆಗಿ ಪ್ರದರ್ಶನವಾಗುತ್ತಿದೆ. ಆಸ್ಟ್ರೇಲಿಯಾ, ಯುಕೆಯಲ್ಲೂ 30 ಸೆಂಟರ್‌ಗಳಲ್ಲಿ ಬಿಡುಗಡೆಗೊಂಡಿದೆ ಎಂಬುದು ಚಿತ್ರತಂಡದ ಹೇಳಿಕೆ.

ಖುಷಿಯಲ್ಲಿರುವ ನಿರ್ದೇಶಕ ಆಕಾಶ್‌ ಶ್ರೀವತ್ಸ ಅವರು, “ಈಗಾಗಲೇ “ಬದ್ಮಾಶ್‌’ ಚಿತ್ರದ ನಿರ್ಮಾಪಕರು ಯಎಸ್‌ ಜನರಿಗೆ ತೋರಿಸಲು ಹಕ್ಕು ಪಡೆದಿದ್ದಾರೆ. ಬಾಲಿವುಡ್‌ ದೊಡ್ಡ ಸಂಸ್ಥೆಯೊಂದು ರಿಮೇಕ್‌ ಮಾಡಲು ಉತ್ಸುಕವಾಗಿದೆ. ಇದರ ಜೊತೆಗೆ ತೆಲುಗು, ತಮಿಳಿನಿಂದಲೂ ಈ ಚಿತ್ರ ರಿಮೇಕ್‌ ಮಾಡುವ ಬಗ್ಗೆ ಕರೆ ಬಂದಿದೆ. ಬಹುಶಃ ಅಲ್ಲಿಯೂ ನಿರ್ದೇಶನ ಮಾಡಬಹುದೇನೋ ಗೊತ್ತಿಲ್ಲ. ಸಣ್ಣ ಸಣ್ಣ ಪಾತ್ರ ಗುರುತಿಸಿ ಕೆಲಸ ಮಾಡಿದ್ದು ಸಾರ್ಥಕವಾಯಿತು’ ಎಂಬುದು ಅವರ ಮಾತು. ನಿರ್ಮಾಪಕ ಅನೂಪ್‌ ಗೌಡ, “ಇದೇ ರೀತಿ ಮುಂದೆ‌ಯೂ ಸಹಕಾರ ಇರಲಿ’ ಎಂಬ ಮನವಿ ಇಟ್ಟರು. ಅಂದು ಬಂದಿದ್ದ ಚಿತ್ರತಂಡದವರು ಸಿನಿಮಾಗೆ ಸಿಗುತ್ತಿರುವ ಮೆಚ್ಚುಗೆ ಕುರಿತು ಮಾತನಾಡಿದರು.

ಟಾಪ್ ನ್ಯೂಸ್

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

rain

ಉತ್ತರಾಖಂಡದಲ್ಲಿ ಭಾರಿ ಮಳೆ ಎಚ್ಚರಿಕೆ : ತುರ್ತು ಪರಿಸ್ಥಿತಿಗೆ ಅಗತ್ಯ ವ್ಯವಸ್ಥೆ

ಹಣಕಾಸು ಸಚಿವಾಲಯ ಸರ್ಕಾರಿ ಆಸ್ತಿಗಳ ಮೋನಿಟೈಷೇಶನ್ ಗಾಗಿ ಕ್ಯಾಬಿನೆಟ್‌ ಅನುಮೋದನೆ ಪಡೆಯಲಿದೆ

ಸಿಪಿಎಸ್‌ಇ ಒಡೆತನದ ಭೂಮಿ: ಹಣಕಾಸು ಸಚಿವಾಲಯದಿಂದ ಹೊಸ ಚಿಂತನೆ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

hgyuy

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ek-love-ya

‘ಏಕ್‌ ಲವ್‌ ಯಾ’ ಜ.21ಕ್ಕೆ ರಿಲೀಸ್‌

hftytyt

ದಚ್ಚು ಜೊತೆ “ಕ್ರಾಂತಿ”ಗೆ ಸಜ್ಜಾದ ಡಿಂಪಲ್ ಕ್ವೀನ್ ರಚಿತಾ ರಾಮ್

MUST WATCH

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

ಹೊಸ ಸೇರ್ಪಡೆ

hfghftytr

ಗುಳದಾಳಕ್ಕೆ ನಡೆದುಕೊಂಡು ಬಂದ ಜಿಲ್ಲಾಧಿಕಾರಿ 

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

ಮಳೆಯ ಅಬ್ಬರಕ್ಕೆ ಅತಂತ್ರಗೊಂಡ ಕಾಫಿ ಬೆಳೆಗಾರ

ಮಳೆಯ ಅಬ್ಬರಕ್ಕೆ ಅತಂತ್ರಗೊಂಡ ಕಾಫಿ ಬೆಳೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.