ಮಹಿಳೆಯರಿಗೆ “ರಂಗನಾಯಕಿ’ ಸ್ಪೆಷಲ್‌ ಶೋ

ನವೆಂಬರ್‌ 1 ರಿಲೀಸ್‌

Team Udayavani, Oct 15, 2019, 3:04 AM IST

Ranganayaki

ಸದ್ಯ ತೆರೆಗೆ ಬರೋದಕ್ಕೂ ಮೊದಲೇ ನಿರ್ದೇಶಕ ದಯಾಳ್‌ ಪದ್ಮನಾಭನ್‌ ನಿರ್ದೇಶನದಲ್ಲಿ ಮೂಡಿಬಂದಿರುವ “ರಂಗನಾಯಕಿ’ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈಗಾಗಲೇ “ಗೋವಾ ಇಂಟರ್‌ನ್ಯಾಶನಲ್‌ ಫಿಲಂ ಫೆಸ್ಟಿವಲ್‌-2019’ಕ್ಕೆ ಪನೋರಮಾ ವಿಭಾಗದಲ್ಲಿ ಕನ್ನಡದಿಂದ ಸ್ಥಾನ ಪಡೆದುಕೊಂಡಿರುವ ಏಕೈಕ ಚಿತ್ರ “ರಂಗನಾಯಕಿ’, ಅ. 24ರಂದು ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ಇದಾದ ಬಳಿಕ ನವೆಂಬರ್‌ 1ರಂದು “ರಂಗನಾಯಕಿ’ಯನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ ಚಿತ್ರತಂಡ. ಇನ್ನು “ರಂಗನಾಯಕಿ’ ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ, ಚಿತ್ರ ಬಿಡುಗಡೆಯ ನಂತರ ಮಹಿಳೆಯರಿಗಾಗಿಯೇ ವಿಶೇಷ ಪ್ರದರ್ಶನವನ್ನು ಆಯೋಜಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ಈ ಬಗ್ಗೆ ಮಾತನಾಡುವ “ರಂಗನಾಯಕಿ’ ಚಿತ್ರದ ನಿರ್ದೇಶಕ ದಯಾಳ್‌ ಪದ್ಮನಾಭನ್‌, “ಇದೊಂದು ಮಹಿಳಾ ಪ್ರಧಾನ ಚಿತ್ರ.

ತನಗಾದ ಅನ್ಯಾಯದ ವಿರುದ್ಧ ಹುಡುಗಿಯೊಬ್ಬಳು ಹೇಗೆ ಕಾನೂನಿನ ಚೌಕಟ್ಟಿನಲ್ಲಿ ಹೋರಾಡಿ ನ್ಯಾಯ ಪಡೆಯುತ್ತಾಳೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ಸಂತ್ರಸ್ತ ಹುಡುಗಿ ಬದುಕಿದ್ದರೆ, ಎಂಥಹ ಸಂದರ್ಭ ಮತ್ತು ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಳು ಅನ್ನೋದನ್ನ ಈ ಚಿತ್ರದಲ್ಲಿ ಕಾಲ್ಪನಿಕವಾಗಿ ಹೇಳಿದ್ದೇವೆ. ಇದು ಎಲ್ಲರಿಗೂ ಮುಟ್ಟುವ ಕಥೆ. ಅದರಲ್ಲೂ ಇಂದಿನ ಮಹಿಳೆಯರಿಗೆ ತುಂಬ ಕನೆಕ್ಟ್ ಆಗುವ ಸಬ್ಜೆಕ್ಟ್ ಈ ಚಿತ್ರದಲ್ಲಿದೆ. ಹಾಗಾಗಿ ಮಹಿಳೆಯರಿಗಾಗಿಯೇ ಸ್ಪೆಷಲ್‌ ಶೋ ಮಾಡುವ ಬಗ್ಗೆ ಪ್ಲಾನ್‌ ಮಾಡಿಕೊಳ್ಳುತ್ತಿದ್ದೇವೆ’ ಎನ್ನುವ ಮಾಹಿತಿ ನೀಡುತ್ತಾರೆ.

ಇನ್ನು ಈಗಾಗಲೇ ಆನ್‌ಲೈನ್‌ನಲ್ಲಿ “ರಂಗನಾಯಕಿ’ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಎಲ್ಲಾ ಹಾಡುಗಳಿಗೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಕಥೆ ಎಲ್ಲರ ಮನಮುಟ್ಟುವಂತಿದೆ ಎನ್ನುವ ಚಿತ್ರತಂಡ, ಬಿಡುಗಡೆಯ ಬಳಿಕ ಪ್ರೇಕ್ಷಕರೇ ನಮಗಿಂತ ಹೆಚ್ಚಾಗಿ “ರಂಗನಾಯಕಿ’ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತದೆ. ಈ ಚಿತ್ರವನ್ನು ಎಸ್‌ವಿ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಎಸ್‌.ವಿ.ನಾರಾಯಣ್‌ ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

Kiribati and Samoa

ಇದುವರೆಗೆ ಕೇವಲ ಎರಡು ಕೋವಿಡ್ ಕೇಸ್ ಪತ್ತೆಯಾದ ದೇಶದಲ್ಲಿ ಲಾಕ್ ಡೌನ್ ಜಾರಿ!

1-wf

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ!: ಸಲ್ಮಾನ್ ಖಾನ್ ಮೇಲೆ ಆರೋಪ

ಗಣರಾಜ್ಯೋತ್ಸವ: ಸಂಭಾವ್ಯ ಉಗ್ರರ ದಾಳಿ ಸಂಚು ವಿಫಲ, RDX, ಗ್ರೆನೇಡ್ ಲಾಂಚರ್ ವಶಕ್ಕೆ

ಗಣರಾಜ್ಯೋತ್ಸವ: ಸಂಭಾವ್ಯ ಉಗ್ರರ ದಾಳಿ ಸಂಚು ವಿಫಲ, RDX, ಗ್ರೆನೇಡ್ ಲಾಂಚರ್ ವಶಕ್ಕೆ

dr-sudhakar

ಕೋವಿಡ್ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ: ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ್’ ಫಸ್ಟ್ ಲುಕ್ ಬಿಡುಗಡೆ

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ’ ಫಸ್ಟ್ ಲುಕ್ ಬಿಡುಗಡೆ

ಕೋವಿಡ್ ಟೆಸ್ಟ್‌ ವರದಿ ಯಾವಾಗ ಬರುತ್ತೆ?

ಕೋವಿಡ್ ಟೆಸ್ಟ್‌ ವರದಿ ಯಾವಾಗ ಬರುತ್ತೆ?

1-dsadsa

ಸಿಎಂ ಆಗಲು ಪಂಚಮಸಾಲಿ ಮೂರನೇ ಪೀಠ : ನಿರಾಣಿ ವಿರುದ್ಧ ಕಾಶಪ್ಪನವರ್ ಕಿಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ್’ ಫಸ್ಟ್ ಲುಕ್ ಬಿಡುಗಡೆ

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ’ ಫಸ್ಟ್ ಲುಕ್ ಬಿಡುಗಡೆ

khasagi putagalu

ವೀಕೆಂಡ್‌ ಲಾಕ್‌ ಡೌನ್‌ ಗೆ ಮುಕ್ತಿ: ಹೊಸಬರ ಸಿನ್ಮಾ ರಿಲೀಸ್‌ ಗೆ ಇದು ಸಕಾಲ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

amazon prime video

ಪುನೀತ್‍ ರಾಜ್‍ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಅಮೆಜಾನ್‍ ಪ್ರೈಮ್‍

MUST WATCH

udayavani youtube

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

ಹೊಸ ಸೇರ್ಪಡೆ

12culture

ನಮ್ಮ ಸಂಸ್ಕೃತಿಯಿಂದ ಉನ್ನತ ಸಾಧನೆ

ವಿಶ್ವಕರ್ಮ ಸಮುದಾಯಕ್ಕೆ ಅನುದಾನ ಸೀಮಿತ: ಖಂಡನೆ

ವಿಶ್ವಕರ್ಮ ಸಮುದಾಯಕ್ಕೆ ಅನುದಾನ ಸೀಮಿತ: ಖಂಡನೆ

ರಸ್ತೆ ಬದಿಯ ವಿದ್ಯುತ್‌ ಕಂಬ ಬದಲಿಸಿ ಅಪಾಯ ತಪ್ಪಿಸಿ

ರಸ್ತೆ ಬದಿಯ ವಿದ್ಯುತ್‌ ಕಂಬ ಬದಲಿಸಿ ಅಪಾಯ ತಪ್ಪಿಸಿ

ಮನ್‌ಮುಲ್‌ ಹಗರಣ ಸಿಬಿಐ ತನಿಖೆಗೆ ವಹಿಸಲು ಆಗ್ರಹ

ಮನ್‌ಮುಲ್‌ ಹಗರಣ ಸಿಬಿಐ ತನಿಖೆಗೆ ವಹಿಸಲು ಆಗ್ರಹ

13chavhana

ಸಂಕಷ್ಟದಲ್ಲಿದ್ದವರಿಗೆ ಚವ್ಹಾಣ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.