ಹೊಸ ಚರ್ಚೆ ಹುಟ್ಟು ಹಾಕಿದ ರಶ್ಮಿಕಾ ಮಂದಣ್ಣ
Team Udayavani, Nov 14, 2021, 10:28 AM IST
ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಈಗ ಸೌತ್ ಇಂಡಿಯಾ ಸ್ಟಾರ್. ಸದ್ಯ ಬಾಲಿವುಡ್ನಲ್ಲೂ ಬಿಝಿ. ಇಂತಹ ರಶ್ಮಿಕಾ ಆಗಾಗ ತಮ್ಮ ಹೇಳಿಕೆಗಳ, ಸಂದರ್ಶನಗಳ ಮೂಲಕ ಸುದ್ದಿಯಲ್ಲಿರುತ್ತಾರೆ.
ಸದ್ಯ ರಶ್ಮಿಕಾ ಡೇಟಿಂಗ್ ಕುರಿತು ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ “ನಿಮಗಿಂತ ಚಿಕ್ಕ ವಯಸ್ಸಿನವರ ಜೊತೆ ಡೇಟಿಂಗ್ ಮಾಡುತ್ತೀರಾ?’ ಎಂಬ ಪ್ರಶ್ನೆಗೆ ರಶ್ಮಿಕಾ ಬೋಲ್ಡ್ ಆಗಿ ಉತ್ತರಿಸಿದ್ದಾರೆ.
ಇದನ್ನೂ ಓದಿ:ಅಭಿಮಾನಿಗಳ ಜೊತೆ ಶಿವಣ್ಣ ಇಂದು ಭಜರಂಗಿ-2ವೀಕ್ಷಣೆ
“ಡೇಟಿಂಗ್ಗೆ ವಯಸ್ಸು ಮುಖ್ಯವಾಗಿರುವುದಿಲ್ಲ, ವ್ಯಕ್ತಿ ಮುಖ್ಯವಾಗುತ್ತಾರೆ’ ಎಂದಿದ್ದಾರೆ. ರಶ್ಮಿಕಾ ಈ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಅನೇಕರು ಇದನ್ನು ಆಕೆಯ ಮದುವೆಗೂ ಲಿಂಕ್ ಮಾಡುತ್ತಿದ್ದಾರೆ. ಸದ್ಯ ರಶ್ಮಿಕಾ ನಟನೆಯ ಬಹುಭಾಷಾ ಚಿತ್ರ “ಪುಷ್ಪ’ ರಿಲೀಸ್ಗೆ ರೆಡಿಯಾಗಿದೆ. ಇದರ ಜೊತೆಗೆ ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ.