ರವಿ ಹಿಸ್ಟರಿ ಹೇಳ್ತಾರೆ ಚಂದ್ರ…ಸೈಬರ್‌ ಯುಗದೊಳ್‌ ಹೊಸ ಪ್ರೇಮ..

Team Udayavani, Feb 15, 2018, 3:00 PM IST

Ravi-History.jpg

ರವಿ ಹಿಸ್ಟರಿ … ಇದು ಡಿ.ಕೆ. ರವಿ ಅವರ ಹಿಸ್ಟರಿನಾ, ರವಿ ಬೆಳಗೆರೆ ಅವರ ಹಿಸ್ಟರಿನಾ, ರವಿಚಂದ್ರನ್‌ ಹಿಸ್ಟರಿನಾ ಅಥವಾ … ರವಿಪೂಜಾರಿ ಹಿಸ್ಟರಿನಾ? ಶೀರ್ಷಿಕೆ ನೋಡಿದಾಗ ಸಹಜವಾಗಿ ಮೂಡುವ ಪ್ರಶ್ನೆಗಳಿವು. ಆದರೆ, ಇಲ್ಲೀಗ ಹೇಳ ಹೊರಟಿರುವ ಇದು ಯಾರ “ಹಿಸ್ಟರಿ’ ಅಲ್ಲ, ಒಬ್ಬ ಸಾಮಾನ್ಯ ಹುಡುಗನ ಸಾಧನೆ ಹಿಂದಿರುವ ಇತಿಹಾಸ. ಇಂಥದ್ದೊಂದು ಇತಿಹಾಸ ಸಾರುವ ಕಥೆ ಇಟ್ಟುಕೊಂಡು ಹೀಗೊಂದು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮಧುಚಂದ್ರ. 

“ಸೈಬರ್‌ ಯುಗದೊಳ್‌ ನವಯುವ ಮಧುರ ಪ್ರೇಮ ಕಾವ್ಯಂ’ ಮತ್ತು “ವಾಸ್ಕೋಡಿಗಾಮ’ ನಿರ್ದೇಶಿಸಿದ್ದ ಮಧುಚಂದ್ರ ಅವರ ಮೂರನೇ ಚಿತ್ರವಿದು. ರವಿ ಎಂಬ ಹುಡುಗನೊಬ್ಬ ತನ್ನ ಕನಸು ನನಸಸಾಗಿಸಿಕೊಳ್ಳಲು ಹೊರಡುವ ಜರ್ನಿ ಸುತ್ತ ನಡೆಯುವ ಕಥೆ ಇದು. ಆ ಜರ್ನಿಯಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಕಥೆ. ಒಂದೇ ಕಥೆ ಇಲ್ಲಿದ್ದರೂ ನಾಲ್ಕು ಆಯಾಮಗಳು ಇಲ್ಲಿವೆ. ರವಿ ಎಂಬ ಹುಡುಗನೊಬ್ಬನ ಬಯೋಗ್ರಫಿ ಇಲ್ಲಿದೆ. ಅಂದಹಾಗೆ, ನಿರ್ದೇಶಕರು ಈ ಚಿತ್ರ ಶುರುವಿಗೆ ಮುನ್ನ, ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸಿ, ಮೂರು ತಿಂಗಳ ಕಾಲ ವರ್ಕ್‌ಶಾಪ್‌ ಮಾಡಿಸಿದ್ದಾರೆ. ನೀನಾಸಂ, ರಂಗಾಯಣ ಪ್ರತಿಭೆಗಳಿಗೂ ಇಲ್ಲಿ ಜಾಗ ಕೊಟ್ಟಿದ್ದಾರೆ. ಇದು ನೈಜ ಘಟನೆಯೇನಲ್ಲ. ಬೆಂಗಳೂರಲ್ಲೇ ಬಹುತೇಕ ಚಿತ್ರೀಕರಿಸಿದ್ದಾರೆ ಮಧುಚಂದ್ರ.

ಕಾರ್ತಿಕ್‌ ಈ ಚಿತ್ರದ ಹೀರೋ. ಅಷ್ಟೇ ಅಲ್ಲ, ಹಣ ಹಾಕಿ ನಿರ್ಮಾಪಕರೂ ಆಗಿದ್ದಾರೆ. ಅಭಿನಯ ತರಂಗ ಮತ್ತು ಮುಂಬೈನ ಅನುಪಮ್‌ಖೇರ್‌ ನಟನಾ ಶಾಲೆಯಲ್ಲಿ ಕಲಿತು ಸಿನಿಮಾ ಮಾಡುವ ಕನಸು ಕಂಡಿದ್ದರು. ಆ ಕನಸಿಗೆ ಜೊತೆಯಾದವರು ಮಧುಚಂದ್ರ. ಕಥೆ ಕೇಳಿದ ಕಾರ್ತಿಕ್‌ ಇಷ್ಟಪಟ್ಟು, ಸಿನಿಮಾ ಮಾಡಿದ್ದಾರೆ. ಒಂದುವರೆ ವರ್ಷದ ಈ ಜರ್ನಿಯಲ್ಲಿ ಒಳ್ಳೆಯ ಅನುಭವ ಪಡೆದು, ಹೊಸ ತಂಡ ಕಟ್ಟಿಕೊಂಡು ಹೊಸಬಗೆಯ ಚಿತ್ರ ಕೊಡುವ ಉತ್ಸಾಹ ಅವರದು.

ಪಲ್ಲವಿ ರಾಜ್‌ ಚಿತ್ರದ ನಾಯಕಿ ಅವರಿಗೆ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಸಿಕ್ಕಿದೆ. ಐಶ್ವರ್ಯರಾವ್‌ ಎಂಬ ಮೈಸೂರಿನ ಇನ್ನೊಬ್ಬ ಬೆಡಗಿಯೂ ಇಲ್ಲಿ ನಾಯಕಿ. ಮೂಲತಃ ಡ್ಯಾನ್ಸರ್‌ ಆಗಿರುವ ಐಶ್ವರ್ಯರಾವ್‌, ಒಳ್ಳೇ ತಂಡದಲ್ಲಿ ಕೆಲಸ ಮಾಡಿದ ಬಗ್ಗೆ ಖುಷಿಗೊಂಡಿದ್ದಾರೆ. ಚಿತ್ರಕ್ಕೆ ಸೂರಜ್‌ ಸರ್ಜಾ ಮತ್ತು ವಿಜೇತ್‌ ಕೃಷ್ಣ ಸಂಗೀತ ನೀಡಿದ್ದಾರೆ. ಇವರಿಬ್ಬರೂ ಅರ್ಜುನ್‌ ಸರ್ಜಾ ಅವರ ಕುಟುಂಬದವರು ಎಂಬುದು ವಿಶೇಷ. 

ಚಿತ್ರದಲ್ಲಿ ಮೂರು ಹಾಡುಗಳಿಗೆ ರಾಗ ಸಂಯೋಜಿಸಿದ್ದು, ಇಲ್ಲಿ ಮೆಲೋಡಿ, ರ್ಯಾಪ್‌ ಕಲ್ಚರ್‌ ಮೇಲಿನ ಹಾಡು ಹಾಗೂ ಗ್ಯಾಂಗ್‌ಸ್ಟರ್‌ ಕುರಿತ ಟಪ್ಪಾಂಗುಚ್ಚಿ ಹಾಡು ಕೊಟ್ಟಿದ್ದಾರೆ ಸೂರಜ್‌ ಸರ್ಜಾ ಮತ್ತು ವಿಜೇತ್‌ ಕೃಷ್ಣ. ಚಿತ್ರದ ಆಡಿಯೋ ಹಕ್ಕನ್ನು ಡಿಬೀಟ್ಸ್‌ ಸಂಸ್ಥೆ ಪಡೆದಿದೆ. ಶೈಲಜಾನಾಗ್‌ ಅವರು ಹಾಡುಗಳನ್ನು ಕೇಳಿ, ಯಾವುದೇ ವ್ಯಾಪಾರ ದೃಷ್ಟಿಯಿಂದ ಮಾತನಾಡದೆ, ಹೊಸಬರ ಪ್ರಯತ್ನಕ್ಕೆ ಸಾಥ್‌ ಕೊಟ್ಟಿದ್ದಾರೆ. ಅನಂತ್‌ ಅರಸ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಅಬ್ದುಲ್‌ ಕರೀಂ ಸಂಕಲನ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹೊರಬಂದಿವೆ.

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.