ಅಭಿಮಾನಿಗಳ ಜೊತೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಬರ್ತ್‌ಡೇ


Team Udayavani, May 31, 2022, 8:54 AM IST

ಅಭಿಮಾನಿಗಳ ಜೊತೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಬರ್ತ್‌ಡೇ

ಸ್ಯಾಂಡಲ್‌ವುಡ್‌ನ‌ ಕ್ರೇಜಿಸ್ಟಾರ್‌ ಖ್ಯಾತಿಯ ನಟ ಕಂ ನಿರ್ದೇಶಕ ರವಿಚಂದ್ರನ್‌ ಅವರಿಗೆ ಸೋಮವಾರ (ಮೇ. 30) ಹುಟ್ಟುಹಬ್ಬದ ಸಂಭ್ರಮ. ಕಳೆದ ಮೂರು ವರ್ಷಗಳಿಂದ ಕೋವಿಡ್‌ ಭಯ, ಲಾಕ್‌ಡೌನ್‌ ಆತಂಕದಿಂದಾಗಿ ಹುಟ್ಟುಹಬ್ಬದ ಸಂಭ್ರಮದಿಂದ ದೂರವಿದ್ದ ರವಿಚಂದ್ರನ್‌, ಈ ಬಾರಿ ತಮ್ಮ ಕುಟುಂಬದವರು ಮತ್ತು ಅಭಿಮಾನಿಗಳ ಜೊತೆ ಅದ್ಧೂರಿಯಾಗಿ 61ನೇ ಜನ್ಮದಿನವನ್ನು ಆಚರಿಸಿಕೊಂಡರು.

ಕಳೆದ ಮೂರು ವರ್ಷಗಳಿಂದ ಕೋವಿಡ್‌ ಭಯದಿಂದಾಗಿ ಬಹುತೇಕ ಸ್ಟಾರ್‌ ನಟರ ಅದ್ಧೂರಿ ಬರ್ತ್‌ಡೇಗೆ ಬ್ರೇಕ್‌ ಬಿದ್ದಿತ್ತು. ಅದರಂತೆ ರವಿಚಂದ್ರನ್‌ ಕೂಡ ಮೂರು ವರ್ಷಗಳಿಂದ ಅಭಿಮಾನಿಗಳ ಜೊತೆ ಬರ್ತ್‌ಡೇ ಸಂಭ್ರಮಿಸಿರಲಿಲ್ಲ. ಆದರೆ ಈ ಬಾರಿ ಕೋವಿಡ್‌ ಆತಂಕ ದೂರವಾಗಿರುವುದರಿಂದ, ರವಿಚಂದ್ರನ್‌ ತಮ್ಮ ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರ ಜೊತೆಗೆ ಸೇರಿ ಭರ್ಜರಿಯಾಗಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.

ಇದೇ ವೇಳೆ ಮಾತನಾಡಿದ ರವಿಚಂದ್ರನ್‌, “ನಾನು ಇಲ್ಲಿಯವರೆಗೆ ನನ್ನ ಜೀವನದಲ್ಲಿ ಏನೇ ಮಾಡಿದ್ದರೂ, ಅದು ಸಿನಿಮಾಕ್ಕಾಗಿಯೇ ಮಾಡಿದ್ದೇನೆ. ನನ್ನ ಹೆಂಡತಿ ಮತ್ತು ಮಕ್ಕಳಿಗೆ ನನ್ನಿಂದ ಮೋಸವಾಗಿರಬಹುದು. ಆದರೆ ಸಿನಿಮಾಕ್ಕೆ ನಾನೆಂದಿಗೂ ಮೋಸ ಮಾಡಿಲ್ಲ. ಸಿನಿಮಾ ಬಿಟ್ಟು ನನಗೇನೂ ಗೊತ್ತಿಲ್ಲ. ನಾನು ಬದುಕಿರುವವರೆಗೂ ಸಿನಿಮಾವನ್ನೇ ಪ್ರೀತಿಸುತ್ತೇನೆ. ಮುಂದೆ ಕೂಡ ಅಷ್ಟೇ, ನಾನು ಏನೇ ಮಾಡಿದ್ರೂ ಸಿನಿಮಾಕ್ಕಾಗಿಯೇ ಮಾಡುತ್ತೇನೆ’ ಎಂದರು ರವಿಚಂದ್ರನ್‌.

“ಸುಮಾರು 3 ವರ್ಷಗಳಿಂದ ಕೊರೊನಾ ಭಯದಿಂದ ಬರ್ತ್‌ಡೇ ಸೆಲೆಬ್ರೆಶನ್‌ ಮಾಡಲಾಗಿರಲಿಲ್ಲ. ಅಭಿಮಾನಿಗಳು ಕೂಡ ಪ್ರತಿವರ್ಷ ನಮ್ಮ ಜೊತೆ ಬರ್ತ್‌ಡೇ ಸೆಲೆಬ್ರೆಶನ್‌ ಮಾಡುವಂತೆ ಕೇಳುತ್ತಿದ್ದರು. ಆದ್ರೆ ಈ ವರ್ಷ ಬರ್ತ್‌ಡೇಗೆ ಕೊರೊನಾ ಭಯ ಕಡಿಮೆಯಾಗಿದೆ. ಅದಕ್ಕಾಗಿ ಅಭಿಮಾನಿಗಳ ಜೊತೆಗೇ ಬರ್ತ್‌ಡೇ ಸೆಲೆಬ್ರೆಶನ್‌ ಮಾಡಿಕೊಳ್ಳುತ್ತಿದ್ದೇನೆ’ ಎನ್ನುವುದು ರವಿಚಂದ್ರನ್‌ ಮಾತು.

“ನಾನು ಯಾವಾಗಲೂ ಹೊಸಥರದ ಸಿನಿಮಾಗಳನ್ನು ಮಾಡಬೇಕು ಅಂಥ ಯೋಚಿಸುವವನು. ನನ್ನ ಅಭಿಮಾನಿಗಳಿಗೆ ಅಂಥ ಸಿನಿಮಾ ಕೊಡುವುದಕ್ಕಾಗಿ ಹತ್ತು ವರ್ಷ ಮುಂದೆ ಹೋಗಿ ಯೋಚಿಸುತ್ತೇನೆ. ಹಾಗಾಗಿಯೇ “ಏಕಾಂಗಿ’ಯಂತಹ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಆದ್ರೆ ಅಭಿಮಾನಿಗಳು ನಾನು ನಿರೀಕ್ಷಿಸಿದಂತೆ, ಆ ಸಿನಿಮಾ ಸ್ವೀಕರಿಸಲಿಲ್ಲ. ಮಾಮೂಲಿ ಲವ್‌ಸ್ಟೋರಿ, ಹೊಡಿ-ಬಡಿ ಥರದ ಸಿನಿಮಾಗಳನ್ನು ಮಾಡೋದಾದ್ರೆ, ಇಷ್ಟೊತ್ತಿಗೆ ಅಂಥ ಹತ್ತಾರು ಸಿನಿಮಾಗಳನ್ನು ಮಾಡಬಹುದಿತ್ತು. ಮತ್ತೆ ನನ್ನನ್ನು ಅಂಥದ್ದೇ ಸಿನಿಮಾಗಳನ್ನು ಮಾಡುವಂತೆ ಹಿಂದಕ್ಕೆ ಎಳೆಯಬೇಡಿ’ ಎನ್ನುವುದು ಅಭಿಮಾನಿಗಳಿಗೆ ರವಿಚಂದ್ರನ್‌ ಮನವಿ.

“ರವಿಮಾಮ’ನಿಗೆ ಶುಭಾಶಯಗಳ ಮಹಾಪೂರ: ಇನ್ನು ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಜನ್ಮದಿನಕ್ಕೆ ಸಿನಿಮಾ ಮತ್ತು ಇತರ ಕ್ಷೇತ್ರಗಳ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ತಾರೆಯರು “ರವಿಮಾಮ’ನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಟಾಪ್ ನ್ಯೂಸ್

1-asdsadd

ರಷ್ಯಾ-ಉಕ್ರೇನ್ ಮಾನವ ಹಕ್ಕು ಸಂಸ್ಥೆಗಳು, ಬಿಲಿಯಾಟ್ಸ್ಕಿ ಗೆ ಜಂಟಿಯಾಗಿ ಶಾಂತಿ ನೊಬೆಲ್

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

jds

SSC: 20,000 ಹುದ್ದೆ ಆಯ್ಕೆಗೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಹೆಚ್ ಡಿಕೆ ಆಗ್ರಹ

web baby corner

Easy recipes: ಬೇಬಿ ಕಾರ್ನ್ ಮಂಚೂರಿಯನ್‌ ಟ್ರೈ ಮಾಡಿ ಟೇಸ್ಟ್ ನೋಡಿ…

ಪ.ಜಾತಿಗೆ 17% ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಪ.ಜಾತಿಗೆ 17%, ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

1-adasas-dsa

ಮಂಗಳೂರು : ಲಂಚ ಪಡೆದ ಭೂಮಾಪಕನಿಗೆ 3 ವರ್ಷ ಶಿಕ್ಷೆ, ದಂಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ಓ…’ ಇದು ಹಾರರ್ ಸಿನಿಮಾ

‘ಓ…’ ಇದು ಹಾರರ್ ಸಿನಿಮಾ

dil pasand

ಡಾರ್ಲಿಂಗ್ ಕೃಷ್ಣ ನಟನೆಯ ‘ದಿಲ್‌ ಪಸಂದ್‌’ ಟೀಸರ್ ಔಟ್

pramod  shetty

‘ಶಭಾಷ್‌ ಬಡ್ಡಿ ಮಗ್ನೆ’ ಎಂದ ಪ್ರಮೋದ್‌ ಶೆಟ್ಟಿ : ಹೀರೋ ಆಗಿ ಮತ್ತೊಂದು ಚಿತ್ರ

totapuri

ಜಗ್ಗೇಶ್ ಮೊಗದಲ್ಲಿ ‘ತೋತಾಪುರಿ’ ಸಿಹಿ

ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ

ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ಪಾದಯಾತ್ರೆ; ಸಂವಾದದಲ್ಲಿ ಸಮಸ್ಯೆ ಹೇಳಿಕೊಂಡು ರೈತ ಮಹಿಳೆಯರ ಕಣ್ಣೀರು

ಪಾದಯಾತ್ರೆ; ಸಂವಾದದಲ್ಲಿ ಸಮಸ್ಯೆ ಹೇಳಿಕೊಂಡು ರೈತ ಮಹಿಳೆಯರ ಕಣ್ಣೀರು

1-asdsadd

ರಷ್ಯಾ-ಉಕ್ರೇನ್ ಮಾನವ ಹಕ್ಕು ಸಂಸ್ಥೆಗಳು, ಬಿಲಿಯಾಟ್ಸ್ಕಿ ಗೆ ಜಂಟಿಯಾಗಿ ಶಾಂತಿ ನೊಬೆಲ್

ಕಣ್ಮನ ಸೆಳೆದ ಅರಕಲಗೂಡು ದಸರಾ ಉತ್ಸವ

ಕಣ್ಮನ ಸೆಳೆದ ಅರಕಲಗೂಡು ದಸರಾ ಉತ್ಸವ

ನರೇಗಾ ಮೂಲಕ ಜೈವಿಕ ಅನಿಲ ಸ್ಥಾಪನೆಗೆ ಒತ್ತು

ನರೇಗಾ ಮೂಲಕ ಜೈವಿಕ ಅನಿಲ ಸ್ಥಾಪನೆಗೆ ಒತ್ತು

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.