ಡ್ಯಾನ್ಸ್‌, ಫೈಟ್‌ಗೆ ನಾನ್‌ ರೆಡಿ

ಲಂಡನ್‌ನಿಂದ ಶಿವಣ್ಣ ಸಂದೇಶ

Team Udayavani, Jul 20, 2019, 3:03 AM IST

ಶಿವರಾಜಕುಮಾರ್‌ ಅವರು ಲಂಡನ್‌ಗೆ ತೆರಳಿ ಭುಜದ ಶಸ್ತ್ರಚಿಕಿತ್ಸೆಗೊಳಗಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಸದ್ಯ ಲಂಡನ್‌ನಲ್ಲಿರುವ ಶಿವಣ್ಣ ಯಾವಾಗ ಬರುತ್ತಾರೆಂಬ ಪ್ರಶ್ನೆಯ ಜೊತೆಗೆ ಮತ್ತೆ ಡ್ಯಾನ್ಸ್‌, ಫೈಟ್‌ ಮಾಡುತ್ತಾರಾ ಎಂಬ ಪ್ರಶ್ನೆ ಕೂಡಾ ಅವರ ಅಭಿಮಾನಿಗಳಲ್ಲಿದೆ. ಈ ಬಗ್ಗೆ ಸ್ವತಃ ಶಿವರಾಜಕುಮಾರ್‌ ಉತ್ತರಿಸಿದ್ದಾರೆ.

ತಮಗೆ ಚಿಕಿತ್ಸೆ ನೀಡಿದ ಡಾಕ್ಟರ್‌ ಆ್ಯಂಡ್ರೂ ವ್ಯಾಲೇಸ್‌ ಜೊತೆಗಿನ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿರುವ ಶಿವಣ್ಣ, ಸದಾ ನಗುತ್ತಲೇ ಇರುವ ಪಾಸಿಟಿವ್‌ ವ್ಯಕ್ತಿ ಎಂದಿದ್ದಾರೆ. ಜೊತೆಗೆ ಅಭಿಮಾನಿಗಳಿಗೂ ಒಂದು ಗುಡ್‌ ನ್ಯೂಸ್‌ ನೀಡಿದ್ದಾರೆ.

“ನಾನು ಡ್ಯಾನ್ಸ್‌ ,ಫೈಟ್‌ ಮಾಡಲು ಯಾವುದೇ ಅಭ್ಯಂತರವಿಲ್ಲವೆಂದು ವೈದ್ಯರು ಹೇಳಿದ್ದಾರೆ’ ಎಂದು ಟ್ವೀಟ್‌ ಮಾಡಿರುವ ಶಿವಣ್ಣ, ಬೆಂಗಳೂರಿಗೆ ಬಂದು ಶೂಟಿಂಗ್‌ನಲ್ಲಿ ಭಾಗಿಯಾಗಲು ಉತ್ಸುಕನಾಗಿರುವುದಾಗಿಯೂ ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಶಿವರಾಜಕುಮಾರ್‌ ಯುಎಸ್‌ಎಗೆ ತೆರಳಿದ ವೇಳೆ, ಒಂದು ಮುಂಜಾನೆ ವಾಕಿಂಗ್‌ ಮಾಡುವ ಸಂದರ್ಭದಲ್ಲಿ ಜಾರಿ ಬಿದ್ದಿದ್ದರು. ಆಗ ಕೈಗೆ ಪೆಟ್ಟು ಬಿದ್ದಿತ್ತು. ಸ್ವಲ್ಪ ನೋವು ಇದ್ದುದರಿಂದ ಅದನ್ನು ಅಷ್ಟೊಂದು ಪರಿಗಣಿಸದೇ ಸುಮ್ಮನಾಗಿದ್ದರು.

ಆದರೆ, ನೋವು ಹೆಚ್ಚಾದ ಕಾರಣ ಈಗ ಲಂಡನ್‌ಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಲಂಡನ್‌ನಿಂದ ಜುಲೈ 23ಕ್ಕೆ ಶಿವಣ್ಣ ವಾಪಾಸ್ಸಾಗಲಿದ್ದು, ಆ ನಂತರ ಕೆಲ ತಿಂಗಳು ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಅವರ ನಟನೆತ “ಭಜರಂಗಿ-2′ ನಡೆಯುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ