ರೆಬೆಲ್‌ ಭೀಷ್ಮ – ದುರ್ಯೋಧನ ನೋಡಲು ಕಾತುರ

ಕುರುಕ್ಷೇತ್ರಕ್ಕಾಗಿ ಕಾಯುತ್ತಿರುವೆ: ಸುಮಲತಾ ಟ್ವೀಟ್‌

Team Udayavani, Jul 21, 2019, 3:01 AM IST

ಈಗ ಎಲ್ಲೆಡೆ “ಕುರುಕ್ಷೇತ್ರ’ ಚಿತ್ರದ್ದೇ ಜೋರು ಸುದ್ದಿ. ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಸದ್ಯದ ಮಟ್ಟಿಗೆ ನಿರೀಕ್ಷೆ ಹುಟ್ಟಿಸಿರುವುದಂತೂ ಸುಳ್ಳಲ್ಲ. ಚಿತ್ರ ಯಾವಾಗ ಶುರವಾಯಿತೋ, ಅಂದಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ “ಕುರುಕ್ಷೇತ್ರ’ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆ ಇತ್ತು.

ಅದಕ್ಕೆ ಸ್ವತಃ ನಿರ್ಮಾಪಕರೇ ಆಗಸ್ಟ್‌ 2 ರಂದು ಪ್ರಪಂಚಾದ್ಯಂತ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಹಾಗಾಗಿ ದರ್ಶನ್‌ ಅಭಿಮಾನಿಗಳಷ್ಟೇ ಅಲ್ಲ, ಇಡೀ ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆ ಚಿತ್ರರಂಗ ಕೂಡ “ಕುರುಕ್ಷೇತ್ರ’ವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದೆ.

ಅದರ ಬೆನ್ನಲ್ಲೇ ಸಂಸದರಾದ ಸುಮಲತಾ ಅಂಬರೀಶ್‌ ಅವರು ಸಹ ತಮ್ಮ ಟ್ವೀಟರ್‌ ಖಾತೆಯಲ್ಲಿ, “ಕುರುಕ್ಷೇತ್ರ’ ಚಿತ್ರದ ಬಗ್ಗೆ ಟ್ವೀಟ್‌ ಮಾಡುವ ಮೂಲಕ ಅಭಿಮಾನಿಗಳ ಖುಷಿಗೆ ಮತ್ತಷ್ಟು ಕಾರಣರಾಗಿದ್ದಾರೆ. ಹೌದು, ಸುಮಲತಾ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ದುರ್ಯೋಧನ ಹಾಗು ರೆಬೆಲ್‌ ಭೀಷ್ಮ ಇವರಿಬ್ಬರನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಚಿತ್ರದಲ್ಲಿ ದರ್ಶನ್‌ ದುರ್ಯೋಧನನಾಗಿ ಕಾಣಿಸಿಕೊಂಡರೆ, ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರು ಭೀಷ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಕುರುಕ್ಷೇತ್ರ’ ಅಂಬರೀಶ್‌ ಅಭಿನಯದ ಕೊನೆಯ ಚಿತ್ರ ಎಂಬುದು ಮತ್ತೂಂದು ವಿಶೇಷ.ಅಂದಹಾಗೆ, “ಕುರುಕ್ಷೇತ್ರ’ ಚಿತ್ರ ಬಿಡುಗಡೆಗೆ ಇನ್ನು ಕೇವಲ ಹನ್ನೆರೆಡು ದಿನಗಳು ಮಾತ್ರ ಬಾಕಿ ಉಳಿದಿವೆ.

ಈಗಾಗಲೇ ದರ್ಶನ್‌ ಅಭಿಮಾನಿಗಳು, ಚಿತ್ರ ಬಿಡುಗಡೆಯ ದಿನವನ್ನು ಎಣಿಸತೊಡಗಿದ್ದಾರೆ. ಈಗಿನಿಂದಲೇ ಚಿತ್ರ ನೋಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ನೋಡಲು ಚಿತ್ರರಂಗದ ಮಂದಿ ಕಾದಿದ್ದಾರೆ.

ಇದೇ ಮೊದಲ ಸಲ ಭಾರತದ ಇತಿಹಾಸದಲ್ಲಿ ಪೌರಾಣಿಕ ಸಿನಿಮಾ “ಕುರುಕ್ಷೇತ್ರ’ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅನೇಕ ವಿಶೇಷತೆಗಳೂ ಇವೆ. ಕನ್ನಡ ಚಿತ್ರರಂಗದ ಬಹುತೇಕ ನಟರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರದಲ್ಲಿ ಧರ್ಮರಾಯನಾಗಿ ಶಶಿಕುಮಾರ್‌, ಕರ್ಣನಾಗಿ ಅರ್ಜುನ್‌ ಸರ್ಜಾ, ಅರ್ಜುನನಾಗಿ ಸೋನುಸೂದ್‌, ಅಭಿಮನ್ಯುರಾಗಿ ನಿಖಿಲ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೇಘನಾರಾಜ್‌, ಹರಿಪ್ರಿಯಾ ಕೂಡ “ಕುರುಕ್ಷೇತ್ರ’ದಲ್ಲಿದ್ದಾರೆ. ಮುನಿರತ್ನ ನಿರ್ಮಾಣದ ಈ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದು, ದೊಡ್ಡ ತಾಂತ್ರಿಕ ವರ್ಗ ಇಲ್ಲಿ ಕೆಲಸ ಮಾಡಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಈಗ ಬಿಝಿ ಹೀರೋ! ಹೀಗೆಂದರೆ ನೀವು ಆಶ್ಚರ್ಯಪಡುವ ಅಗತ್ಯವಿಲ್ಲ. ಅವರ ನಟನೆಯ "ಬೆಲ್‌ ಬಾಟಮ್‌' ಚಿತ್ರ ಹಿಟ್‌ ಆದ ಬಳಿಕ ಅವರನ್ನು ಹುಡುಕಿಕೊಂಡು...

  • ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಮುನಿರತ್ನ ನಿರ್ಮಾಣದ "ಕುರುಕ್ಷೇತ್ರ' ಚಿತ್ರ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಇತ್ತೀಚೆಗೆ ಚಿತ್ರದ...

  • ಸೃಜನ್‌ ಲೋಕೇಶ್‌ ಅಭಿನಯದ "ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಎಲ್ಲರಿಗೂ ಗೊತ್ತಿದೆ. ಈಗ ಆ ಚಿತ್ರದ ಹೊಸ ಸುದ್ದಿಯೆಂದರೆ, ಚಿತ್ರದ...

  • ಈ ಬಾರಿ ಕನ್ನಡಕ್ಕೆ ಬರೋಬ್ಬರಿ ಹದಿಮೂರು ರಾಷ್ಟ್ರಪ್ರಶಸ್ತಿಗಳು ದೊರೆತಿರುವುದು ದಾಖಲೆ. ಇದು ಸಹಜವಾಗಿಯೇ ಕನ್ನಡಿಗರಿಗೆ ಖುಷಿ ಹೆಚ್ಚಿಸಿದೆ. ಪ್ರಶಸ್ತಿ ಪುರಸ್ಕಾರ...

  • ಆನ್‌ಲೈನ್‌ನಲ್ಲಿ ಆಗಾಗ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಸೆಲೆಬ್ರಿಟಿಗಳ ಹೆಸರಲ್ಲಿ ಹಲವು ಪ್ರಕರಣಗಳು...

ಹೊಸ ಸೇರ್ಪಡೆ