ಧ್ರುವ ಶೂಟಿಂಗ್‌ ಸೆಟ್‍ನಲ್ಲಿ ರೆಬೆಲ್‌ಸ್ಟಾರ್‌ ನೆನಪು

Team Udayavani, Feb 26, 2019, 5:35 AM IST

ಒಂದೆಡೆ ನಟ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇನ್ನೊಂದೆಡೆ, “ಪೊಗರು’ ಚಿತ್ರದ ಸೆಟ್‌ನಿಂದ ದಿನಕ್ಕೊಂದು ಹೊಸ ಸುದ್ದಿಗಳು ಹೊರಬರುತ್ತಿದೆ. ಈಗ “ಪೊಗರು’ ಚಿತ್ರದ ಸೆಟ್‌ನಿಂದ ಹೊರಬಂದ ಲೆಟೆಸ್ಟ್‌ ಸುದ್ದಿಯೆಂದರೆ, ನಟ ಧ್ರುವಾ ಸರ್ಜಾಗೆ ಚಿತ್ರೀಕರಣದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಶ್‌ ಜೊತೆಯಲ್ಲೇ ಇದ್ದಂತೆ ಭಾಸವಾಗುತ್ತಿದೆಯಂತೆ.

ಹೌದು, ಈ ಹಿಂದೆ ತಮ್ಮ “ಪೊಗರು’ ಚಿತ್ರದ ಚಿತ್ರೀಕರಣದ ವೇಳೆ ಅಂಬರೀಶ್‌ ಚಿತ್ರದ ಸೆಟ್‌ಗೆ ಭೇಟಿ ನೀಡಿ ಧ್ರುವ ಸರ್ಜಾಗೆ ಆಶೀರ್ವಾದ ಮಾಡಿದ್ದರು. ಇದೀಗ “ಪೊಗರು’ ಚಿತ್ರದ ಚಿತ್ರೀಕರಣ ಮುಂದುವರೆಯುತ್ತಿದ್ದು, ಚಿತ್ರದಲ್ಲಿ ಅಂಬಿಗೆ ಸಂಬಂಧಿಸಿದ ಸನ್ನಿವೇಶವೊಂದನ್ನು ಸೃಷ್ಟಿಸಲಾಗಿದೆ. ಈ ಸನ್ನಿವೇಶದಲ್ಲಿ ಅಂಬಿಯ ಪುತ್ಥಳಿ ಕಾಣಿಸಿಕೊಳ್ಳಲಿದೆ. ಇದಕ್ಕಾಗಿ ಚಿತ್ರದ ಸೆಟ್‌ನಲ್ಲಿ ಅಂಬಿ ಪುತ್ಥಳಿಯನ್ನು ನಿರ್ಮಿಸಲಾಗಿದೆ.

ಸದ್ಯ ಈ ಸನ್ನಿವೇಶದ ಚಿತ್ರೀಕರಣದಲ್ಲಿ ನಟ ಧ್ರುವ ಸರ್ಜಾ, ಅಂಬರೀಶ್‌ ಜೊತೆಗಿನ ತಮ್ಮ ನೆನಪುಗಳನ್ನು ಟ್ವಿಟ್ಟರ್‌ನಲ್ಲಿ ಮೆಲುಕು ಹಾಕಿದ್ದಾರೆ. ಈ ಕುರಿತು ಭಾವನಾತ್ಮಕ ಟ್ವೀಟ್‌ ಪೋಸ್ಟ್‌ ಮಾಡಿರುವ ಧ್ರುವ, “ಈ ಹಿಂದೆ “ಪೊಗರು’ ಚಿತ್ರೀಕರಣದ ಸ್ಥಳಕ್ಕೆ ಅಂಬರೀಶ್‌ ಮಾಮ ಬಂದು ಆಶೀರ್ವದಿಸಿ, ಬೆಂಬಲಿಸಿದ್ದರು. ಈಗಲೂ ಅಂಬರೀಷ್‌ ಮಾಮ ಬಂದಿದ್ದಾರೆ ಎಂದು ನನಗೆ ಭಾಸವಾಗುತ್ತಿದೆ.

ಅಂಬರೀಷ್‌ ಮಾಮ ಎಲ್ಲೂ ಹೋಗಿಲ್ಲ, ಸದಾಕಾಲ ಜೊತೆ ಇದ್ದಾರೆ. ಮಿಸ್‌ ಯು ಕನ್ವರ್‌ ಲಾಲಾ’ ಎಂದು ಬರೆದುಕೊಂಡು ಅಂಬಿ ಪುತ್ಥಳಿ ಜೊತೆಗಿರುವ ಫೋಟೋವೊಂದನ್ನು ಅಪ್‌ಲೋಡ್‌ ಮಾಡಿದ್ದಾರೆ.  ಸದ್ಯ ಧ್ರುವ ಸರ್ಜಾ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಸಿಗುತ್ತಿದ್ದು, ಅಂಬಿ ಫ್ಯಾನ್ಸ್‌ ಅಂತೂ “ಪೊಗರು’ ಹುಡುಗನ ಮಾತಿಗೆ ಜೈ ಎನ್ನುತ್ತಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ