Udayavni Special

‘ಶ್ರೇಯಸ್‌’ ಹೊಸ ಚಿತ್ರಕ್ಕೆ ಮುಹೂರ್ತ ‘ರೀಷ್ಮಾ’ ನಾಯಕಿ


Team Udayavani, May 7, 2021, 9:50 AM IST

reeshma nanaiah

“ಪೊಗರು’ ಸಿನಿಮಾದ ಬಳಿಕ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದಕಿಶೋರ್‌ ಕಾಂಬಿನೇಶನ್‌ನಲ್ಲಿ “ದುಬಾರಿ’ ಸಿನಿಮಾ ಅನೌನ್ಸ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಚಿತ್ರತಂಡ ಕೂಡ ಅದ್ಧೂರಿಯಾಗಿ ಈ ಸಿನಿಮಾದ ಮುಹೂರ್ತವನ್ನು ನೆರವೇರಿಸಿತ್ತು. ಇನ್ನೇನು “ದುಬಾರಿ’ ಸಿನಿಮಾ ಶೂಟಿಂಗ್‌ ಶುರುವಾಗಲಿದೆ ಎನ್ನುವಷ್ಟರಲ್ಲಿ, ನಿರ್ದೇಶಕ ನಂದಕಿಶೋರ್‌ ಮತ್ತೂಂದು ಹೊಸ ಸಿನಿಮಾಕ್ಕೆ ಕೈ ಹಾಕಿದ್ದಾರೆ.

ಹೌದು, “ದುಬಾರಿ’ ಸಿನಿಮಾ ಅನೌನ್ಸ್‌ ಆದ ಬೆನ್ನಲ್ಲೆ ನಿರ್ದೇಶಕ ನಂದಕಿಶೋರ್‌, ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಕೆಲ  ದಿನಗಳಿಂದ ನಂದಕಿಶೋರ್‌ ಮತ್ತು ಶ್ರೇಯಸ್‌ ಕಾಂಬಿನೇಶನ್‌ನ ಈ ಹೊಸಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಒಂದಷ್ಟು ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಚಿತ್ರದ ಕೆಲಸಗಳಿಗೆ ಅಧಿಕೃತ ಚಾಲನೆ ಸಿಕ್ಕಿದೆ.

ಇತ್ತೀಚೆಗೆ ಚಿತ್ರತಂಡ ಅಧಿಕೃತವಾಗಿ  ಸ್ಕ್ರಿಪ್ಟ್ ಪೂಜೆ ನೆರವೇರಿಸುವ ಮೂಲಕ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿದೆ. ಹೊಸಪೇಟೆ ಬಳಿಯ ಶ್ರೀಕ್ಷೇತ್ರ ಹುಲಗಿಯ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಸರಳವಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ, ಚಿತ್ರತಂಡ ಹಾಜರಿದ್ದು ಚಿತ್ರದ ಕೆಲಸಗಳಿಗೆ ಅಧಿಕೃತ ಚಾಲನೆ ನೀಡಲಾಗಿದೆ. ಈ ಹಿಂದೆ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗುಜ್ಜಲ್‌ ಪುರುಷೋತ್ತಮ್‌, “ಗುಜ್ಜಲ್‌ ಟಾಕೀಸ್‌’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇನ್ನು ಸದ್ಯ ಕೋವಿಡ್‌ ಎರಡನೇ ಅಲೆಯ ಆತಂಕ ತೀವ್ರವಾಗಿರುವುದರಿಂದ, ಸ್ಕ್ರಿಪ್ಟ್ ಪೂಜೆಯನ್ನಷ್ಟೇ ನೆರವೇರಿಸಿ ಪ್ರೀ-ಪ್ರೊಡಕ್ಷನ್‌ ಕೆಲಸ ಶುರು ಮಾಡಿರುವ ಚಿತ್ರತಂಡ ಪರಿಸ್ಥಿತಿ ಸಹಜಸ್ಥಿತಿಗೆ ಬರುತ್ತಿದ್ದಂತೆ, ಸಿನಿಮಾದ ಟೈಟಲ್‌ ರಿಲೀಸ್‌ ಮಾಡಿ ಮುಹೂರ್ತ ನೆರವೇರಿಸಲು ಪ್ಲಾನ್‌ ಮಾಡಿಕೊಂಡಿದೆ. ಅಂದಹಾಗೆ, ಈ ಹೊಸಚಿತ್ರದ ಹಾಡುಗಳಿಗೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಶೇಖರ್‌ ಚಂದ್ರು ಛಾಯಾಗ್ರಹಣ,  ಕೆ.ಎಂ ಪ್ರಕಾಶ್‌ ಸಂಕಲನವಿದೆ.

ಚಿತ್ರದಲ್ಲಿ ರೀಷ್ಮಾ, ಶ್ರೇಯಸ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರದಲ್ಲಿ ನಟಿಸಿರುವ ರೀಷ್ಮಾ ಆ ಚಿತ್ರದ ಮೇಲೆ ಅಪಾರ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ.

ಚಿತ್ರಕ್ಕೆ ಪ್ರಶಾಂತ್‌ ರಾಜಪ್ಪ ಸಂಭಾಷಣೆ ಇದೆ. ಉಳಿದಂತೆ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ಇದರ  ನಡುವೆ ನಂದಕಿಶೋರ್‌ ಈಗಾಗಲೇ ಅನೌನ್ಸ್‌ ಮಾಡಿರುವ”ದುಬಾರಿ’ ಚಿತ್ರದ  ಕಥೆ ಏನು ಅನ್ನೋದು ಮುಂದಷ್ಟೇ ಗೊತ್ತಾಗ ಬೇಕಿದೆ.

ಟಾಪ್ ನ್ಯೂಸ್

kushee ravi

ಲಾಕ್‌ಡೌನ್‌ ‘ಖುಷಿ’ಯಾಗಿದೆ. ಆದರೆ.. ರಿಲೀಸ್‌ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿ

ಪಶ್ಚಿಮಬಂಗಾಳ: ಅಭಿಷೇಕ್ ಬ್ಯಾನರ್ಜಿಗೆ ಕಪಾಳಮೋಕ್ಷ ಮಾಡಿದ್ದ ವ್ಯಕ್ತಿ ನಿಗೂಢವಾಗಿ ಸಾವು

ಪಶ್ಚಿಮಬಂಗಾಳ: ಅಭಿಷೇಕ್ ಬ್ಯಾನರ್ಜಿಗೆ ಕಪಾಳಮೋಕ್ಷ ಮಾಡಿದ್ದ ವ್ಯಕ್ತಿ ನಿಗೂಢವಾಗಿ ಸಾವು!

bsy

ಯಾರೋ ಒಂದಿಬ್ಬರು ಮಾತನಾಡಿದರೆ ಅದು ಗೊಂದಲವಾಗಲ್ಲ: ಸಿಎಂ ಯಡಿಯೂರಪ್ಪ

1

ದಿ.ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ: ಸ್ನೇಹಿತರಿಂದ ಆಕ್ರೋಶ

ರೇಣುಕಾಚಾರ್ಯ

ವಿಶ್ವನಾಥ್ ಬಗ್ಗೆ ಮಾತಾಡಿದ್ರೆ ನನ್ನ ನಾಲಿಗೆಯೇ ಹೊಲಸಾಗುತ್ತದೆ: ರೇಣುಕಾಚಾರ್ಯ ತಿರುಗೇಟು

ಅಸ್ಸಾಂ ಶಾಸಕ ಕುರ್ಮಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ, ಶೀಘ್ರವೇ ಬಿಜೆಪಿ ಸೇರ್ಪಡೆ

ಅಸ್ಸಾಂ ಶಾಸಕ ಕುರ್ಮಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ, ಶೀಘ್ರವೇ ಬಿಜೆಪಿ ಸೇರ್ಪಡೆ

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kushee ravi

ಲಾಕ್‌ಡೌನ್‌ ‘ಖುಷಿ’ಯಾಗಿದೆ. ಆದರೆ.. ರಿಲೀಸ್‌ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿ

1

ದಿ.ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ: ಸ್ನೇಹಿತರಿಂದ ಆಕ್ರೋಶ

ಕೆಜಿಎಫ್-2 ಡಬ್ಬಿಂಗ್ ಫೋಟೋ ವೈರಲ್‌

ಕೆಜಿಎಫ್-2 ಡಬ್ಬಿಂಗ್ ಫೋಟೋ ವೈರಲ್‌

568

ಹುಟ್ಟೂರು ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆ ನೀಡಿದ ನಿರ್ಮಾಪಕ ವಿಜಯ್ ಕಿರಂಗದೂರು

654

ಸಂಚಾರಿ ವಿಜಯ್ ಸಮಾಧಿಗೆ ಹಾಲು-ತುಪ್ಪ ಬಿಟ್ಟ ಕುಟುಂಬಸ್ಥರು

MUST WATCH

udayavani youtube

ಹೆಬ್ರಿ ಸುತ್ತಮುತ್ತ ಭಾರೀ ಗಾಳಿಮಳೆ, ಬೃಹತ್ ಮರಗಳು ಧರೆಗೆ ,ಅಪಾರ ಹಾನಿ

udayavani youtube

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್

udayavani youtube

ಮಳೆ ಕೊಯ್ಲು: 15 ನಿಮಿಷದ ಮಳೆಗೆ ಸಂಗ್ರಹವಾದ ನೀರು ಎಷ್ಟು ಗೊತ್ತಾ?

udayavani youtube

ಪೇರಳೆ ಕೃಷಿಯಲ್ಲಿ ಖುಷಿ ಕಾಣಲು, ಉಡುಪಿ ಕೃಷಿಕರಿಗೆ ಇಲ್ಲಿದೆ ಸುವರ್ಣವಕಾಶ ,

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ , ತುಂಬಿ ಹರಿಯುತ್ತಿರುವ ಹೇಮಾವತಿ ನದಿ

ಹೊಸ ಸೇರ್ಪಡೆ

kushee ravi

ಲಾಕ್‌ಡೌನ್‌ ‘ಖುಷಿ’ಯಾಗಿದೆ. ಆದರೆ.. ರಿಲೀಸ್‌ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿ

sertyuiuytrewerty

ವಿಶ್ವನಾಥ್ ವಿರುದ್ಧ ಶಿಸ್ತು ಕ್ರಮ ರಾಜ್ಯ ಬಿಜೆಪಿ ವ್ಯಾಪ್ತಿಗೆ ಬರೋದಿಲ್ಲ :ಅಶ್ವಥ್ ನಾರಾಯಣ

3ನೇ ಅಲೆ ಕೋವಿಡ್‌ ಚಿಕಿತ್ಸಾ ವ್ಯವಸ್ಥೆಗೆ ಸಿದ್ಧತೆ

ಪಶ್ಚಿಮಬಂಗಾಳ: ಅಭಿಷೇಕ್ ಬ್ಯಾನರ್ಜಿಗೆ ಕಪಾಳಮೋಕ್ಷ ಮಾಡಿದ್ದ ವ್ಯಕ್ತಿ ನಿಗೂಢವಾಗಿ ಸಾವು

ಪಶ್ಚಿಮಬಂಗಾಳ: ಅಭಿಷೇಕ್ ಬ್ಯಾನರ್ಜಿಗೆ ಕಪಾಳಮೋಕ್ಷ ಮಾಡಿದ್ದ ವ್ಯಕ್ತಿ ನಿಗೂಢವಾಗಿ ಸಾವು!

anivasi kannadiga

ತುಳುವ ಜಾಲ್ಡ್‌ ಕೃಷ್ಣ ಪಾರ್ದನ ಇಂದು ಸಮಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.