ವಿದೇಶದತ್ತ “ಎಲ್ಲಿದ್ದೆ …’
Team Udayavani, Oct 26, 2019, 5:00 AM IST
ಸೃಜನ್ ಲೋಕೇಶ್ ಅಭಿನಯದ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಎರಡು ವಾರಗಳ ಹಿಂದೆ ಬಿಡುಗಡೆಯಾಗಿರೋದು ನಿಮಗೆ ಗೊತ್ತೇ ಇದೆ. ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದು ಖುಷಿಯಲ್ಲಿರುವ ಚಿತ್ರತಂಡ ಈಗ ಮತ್ತಷ್ಟು ಖುಷಿಯಲ್ಲಿದೆ. ಅದಕ್ಕೆ ಕಾರಣ, ಫಾರಿನ್ ರಿಲೀಸ್. ಹೌದು, “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಈಗ ವಿದೇಶದಲ್ಲಿ ಬಿಡುಗಡೆಯಾಗಿದೆ.
ಈ ವಾರದಿಂದ ಸಿಡ್ನಿ, ಮೇಲ್ಬೊರ್ನ್, ಪರ್ತ್, ನ್ಯೂಜಿಲೆಂಡ್ಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಅದೇ ಸೃಜನ್ ಕಾಮಿಡಿ ಮಜವನ್ನು ಅಲ್ಲಿನ ಕನ್ನಡಿಗರು ಇಷ್ಟಪಡುತ್ತಿದ್ದಾರಂತೆ. ಈ ನಡುವೆಯೇ ಚಿತ್ರ 25ನೇ ದಿನದತ್ತ ಸಾಗುತ್ತಿದೆ. ಲೊಕೇಶ್ ಪ್ರೊಡಕ್ಷನ್ಸ್ನಡಿ ಈ ಚಿತ್ರವನ್ನು ಸೃಜನ್ ನಿರ್ಮಿಸಿ, ನಟಿಸಿದ್ದಾರೆ. ತೇಜಸ್ವಿ ಈ ಚಿತ್ರದ ನಿರ್ದೇಶಕ. ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ