ತಮಿಳು, ತೆಲುಗಿನಲ್ಲೂ ರೆಮೋ ರಿಲೀಸ್
Team Udayavani, Nov 23, 2020, 2:35 PM IST
ಪವನ್ ಒಡೆಯರ್ ತಮ್ಮಕನಸಿನ “ರೆಮೋ’ ಚಿತ್ರದಲ್ಲಿ ಮತ್ತೆ ಬಿಝಿಯಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾ ಕೆಲಸ ಮತ್ತೆ ಆರಂಭವಾಗಿದೆ. ಈ ನಡುವೆಯೇ ಈ ಚಿತ್ರದಕುರಿತಾದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದು ಪರಭಾಷೆಯತ್ತ ಈ ಸಿನಿಮಾ ಹೋಗುತ್ತಿರುವುದು.
ಹೌದು, “ರೆಮೋ’ ಚಿತ್ರಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು, ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಈ ಮೂಲಕ “ರೆಮೋ’ಮೂರು ಭಾಷೆಯಲ್ಲಿ ತೆರೆಗೆ ಬರಲಿದೆ. ಅಷ್ಟಕ್ಕೂ ಏಕಾಏಕಿ ಈ ನಿರ್ಧಾರ ಹೇಗೆ ಎಂದು ನೀವುಕೇಳಬಹುದು. ಅದಕ್ಕೆಕಾರಣ ನಿರ್ಮಾಪಕ ಸಿ.ಆರ್.ಮನೋಹರ್. “ರೆಮೋ’ ಚಿತ್ರದ ಚಿತ್ರೀಕರಣವಾಗಿರುವ ಭಾಗವನ್ನು ವೀಕ್ಷಿಸಿದ ಮನೋಹರ್, ಖುಷಿಯಾಗಿ ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಚಿತ್ರದಲ್ಲಿ ಇಶಾನ್ ನಾಯಕರಾಗಿದ್ದು, ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪವನ್ ಒಡೆಯರ್, “ಇದೊಂದು ಇಂದಿನ ಜನರೇಶನ್ ಸಿನಿಮಾ. ಇದರಲ್ಲಿ ಲವ್, ರಿಲೇಶನ್‌ಶಿಪ್, ಆ್ಯಕ್ಷನ್, ಪ್ರಸೆಂಟೇಶನ್ ಎಲ್ಲವೂ ಹೊಸತರದಲ್ಲಿ ಇರಲಿದೆ. ಇದೊಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಇರುವಂಥ ಸಿನಿಮಾ. ಆಡಿಯನ್ಸ್ ಏನೇನು ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಲು ಬರುತ್ತಾರೋ, ಅದೆಲ್ಲವೂ”ರೆಮೋ’ದಲ್ಲಿ ಇರಲಿದೆ. ಕನ್ನಡ ಪ್ರೇಕ್ಷಕರಿಗೆ “ರೆಮೋ’ ಸಿನಿಮಾ ಹೊಸಥರದ ಅನುಭವ ನೀಡಲಿದೆ. ಈಗ ಚಿತ್ರವನ್ನು ತಮಿಳು ಹಾಗೂ ತೆಲುಗಿನಲ್ಲೂ ರಿಲೀಸ್ ಮಾಡಲು ನಮ್ಮ ನಿರ್ಮಾಪಕರು ನಿರ್ಧರಿಸಿದ್ದಾರೆ’ ಎನ್ನುತ್ತಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣ ಗೊಂಡಿದ್ದು,10 ದಿನಗಳ ಚಿತ್ರೀಕರಣವಷ್ಟೇ ಬಾಕಿ ಇದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444