Udayavni Special

ರಿಚ್ಚಿ Vs ರಿಚ್ಚಿ ಟೈಟಲ್ ಸುತ್ತ

ರಕ್ಷಿತ್‌ ಶೆಟ್ಟಿ"ರಿಚ್ಚಿ'ಸೆಟ್ಟೇರುವ ಮುನ್ನವೇ ಹೊಸಬರ "ರಿಚ್ಚಿ' ತೆರೆಗೆ

Team Udayavani, Sep 23, 2020, 1:54 PM IST

ರಿಚ್ಚಿ Vs ರಿಚ್ಚಿ ಟೈಟಲ್ ಸುತ್ತ

ನಟ ರಕ್ಷಿತ್‌ ಶೆಟ್ಟಿ ಅಭಿನಯದಲ್ಲಿ “ರಿಚ್ಚಿ’ ಎಂಬ ಹೊಸ ಚಿತ್ರ ಅನೌನ್ಸ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಸದ್ಯ ಆ ಚಿತ್ರದ ಕೆಲಸಗಳು ಕೂಡ ಭರದಿಂದ ನಡೆಯುತ್ತಿದೆ. ಇದರ ನಡುವೆಯೇ ಈಗ, ಅದೇ “ರಿಚ್ಚಿ’ ಎನ್ನುವ ಹೆಸರಿನಲ್ಲೇ ಮತ್ತೂಂದು ಹೊಸಬರ ಚಿತ್ರ ಸದ್ದಿಲ್ಲದೆ ತನ್ನ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ರೆಡಿಯಾಗಿದೆ.

ಹೌದು, ಸುಮಾರು ಮೂರು ವರ್ಷಗಳ ಹಿಂದೆ ಫಿಲಂ ಚೇಂಬರ್‌ನಲ್ಲಿ “ರಿಚ್ಚಿ’ ಎನ್ನುವ ಟೈಟಲ್‌ ರಿಜಿಸ್ಟರ್‌ ಮಾಡಿಸಿದ್ದ ಹೊಸಬರ ತಂಡ, ಒಂದೂವರೆ ವರ್ಷದ ಹಿಂದೆ ತನ್ನ ಚಿತ್ರೀಕರಣವನ್ನು ಶುರುಮಾಡಿ ಈಗಾಗಲೇಚಿತ್ರವನ್ನು ಪೂರ್ಣಗೊಳಿಸಿದೆ. ಸದ್ಯ ಸೆನ್ಸಾರ್‌ ಮುಂದಿರುವ ಹೊಸಬರ “ರಿಚ್ಚಿ’ ಇದೇ ಅಕ್ಟೋಬರ್‌ ಅಥವಾ ನವೆಂಬರ್‌ ವೇಳೆಗೆ ಬಿಡುಗಡೆಗೆ ಸಿದ್ದವಾಗಿದೆ.

ಇನ್ನು ತಮ್ಮ “ರಿಚ್ಚಿ’ ಚಿತ್ರದ ಹೆಸರನ್ನೇ ರಕ್ಷಿತ್‌ ಶೆಟ್ಟಿ ಅವರ ಹೊಸಚಿತ್ರಕ್ಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟ ಕಂ ನಿರ್ದೇಶಕ ರಿಚ್ಚಿ (ಹೇಮಂತ್‌), “ನಮ್ಮ ಸಿನಿಮಾದಕಥೆ ಮತ್ತು ಪಾತ್ರಕ್ಕೆಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಸಿನಿಮಾಕ್ಕೆ “ರಿಚ್ಚಿ’ ಅಂಥ ಟೈಟಲ್‌ ಇಟ್ಟುಕೊಂಡಿದ್ದೇವೆ. ಸುಮಾರು 3 ವರ್ಷದ ಹಿಂದೆಯೇ ಫಿಲಂ ಚೇಂಬರ್‌ನಲ್ಲಿ ಈ ಟೈಟಲ್‌ ರಿಜಿಸ್ಟ್ರರ್‌ ಮಾಡಿಸಿದ್ದೇವೆ. ಆಮೇಲೆ ರಿನಿವಲ್‌ಕೂಡ ಮಾಡಿಸಿಕೊಂಡಿದ್ದೇವೆ. ಫಿಲಂ ಚೇಂಬರ್‌ಕೂಡ ನಮಗೆ ಈ ಟೈಟಲ್‌ ಬಳಸಲು ಪರ್ಮಿಷನ್‌ಕೊಟ್ಟಿದೆ. ಹಾಗಾಗಿ ಇದೇ ಟೈಟಲ್‌ನಲ್ಲಿ ಸಿನಿಮಾ ಮಾಡಿ ಮುಗಿಸಿದ್ದೇವೆ. ಕೋವಿಡ್ ಲಾಕ್‌ಡೌನ್‌ ಇಲ್ಲದಿದ್ರೆ, ಇದೇ ಮೇ ತಿಂಗಳಿನಲ್ಲಿ ನಮ್ಮ “ರಿಚ್ಚಿ’ ಸಿನಿಮಾ ರಿಲೀಸ್‌ ಮಾಡುತ್ತಿದ್ದೆವು. ಆದ್ರೂ ರಕ್ಷಿತ್‌ ಶೆಟ್ಟಿ ಯಾಕೆ ತಮ್ಮ ಹೊಸ ಸಿನಿಮಾಕ್ಕೆ ಇದೇ ಟೈಟಲ್‌ ಇಟ್ಟಿದ್ದಾರೋ ಗೊತ್ತಿಲ್ಲ’ ಎಂದಿದ್ದಾರೆ.

ಇನ್ನು ಸಸ್ಪೆನ್ಸ್‌ – ಥ್ರಿಲ್ಲರ್‌ಕಂ ಲವ್‌ಸ್ಟೋರಿ ಕಥಾಹಂದರ ಹೊಂದಿರುವ ಹೊಸಬರ “ರಿಚ್ಚಿ’ ಚಿತ್ರವನ್ನು ಬೆಂಗಳೂರು, ಮಡಿಕೇರಿ ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರಕ್ಕೆ ವೀರೇಶ್‌ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನವಿದೆ. ಚಿತ್ರದ 4 ಹಾಡುಗಳಿಗೆ ಅಗಸ್ತ್ಯ ಸಂತೋಷ್‌  ಸಂಗೀತ ಸಂಯೋಜಸಿದ್ದಾರೆ. “ಮಾರುತಿ ಮೂವೀ ಮೇಕರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ರಿಚ್ಚಿ’ ಚಿತ್ರಕ್ಕೆ ನವ ನಿರ್ದೇಶಕ ರಿಚ್ಚಿ (ಹೇಮಂತ್‌) ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ಉಳಿದಂತೆ ನಿಷ್ಕಲಾ, ಮನೋಜ್‌ ಮಿಶ್ರ (ಬಾಂಬೆ), ರಮೇಶ್‌ ಪಂಡಿತ್‌, ಮಿಮಿಕ್ರಿ ಗೋಪಿ, ಮುಂತಾದವರು “ರಿಚ್ಚಿ’ ಚಿತ್ರದ ಪ್ರಮುಖ ಪಾತ್ರಗಳಲ್ಲಿಕಾಣಿಸಿಕೊಂಡಿದ್ದಾರೆ.

ನಮ್ಮ ಟೈಟಲ್‌ ಬೇರೇಯೇ ಇದೆ: ರಕ್ಷಿತ್‌ : ರಿಚ್ಚಿ ಟೈಟಲ್‌ ವಿಷಯವಾಗಿ ಪ್ರತಿಕ್ರಿಯಿಸುವ ರಕ್ಷಿತ್‌ ಶೆಟ್ಟಿ, “ನನ್ನ ಸಿನಿಮಾದ ಟೈಟಲ್‌ ರಿಚ್ಚಿ ಎಂದಿರೋದಿಲ್ಲ. ಸ್ವಲ್ಪ ಬದಲಾವಣೆ ಇರುತ್ತದೆ. ಪಾತ್ರವಷ್ಟೇ ರಿಚ್ಚಿ. ಹಾಗಾಗಿ, ಟೈಟಲ್‌ ಸಮಸ್ಯೆ ಬರೋದಿಲ್ಲ’ ಎನ್ನುತ್ತಾರೆ. ಸದ್ಯ ಗೋವಾದಲ್ಲಿ ಹೊಸ ಚಿತ್ರದ ಸ್ಕ್ರಿಪ್ಟ್ನಲ್ಲಿ ರಕ್ಷಿತ್‌ ಬಿಝಿಯಾಗಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗ್ರಾಮೀಣ ರಸ್ತೆ ಅಭಿವೃದ್ಧಿಗೆ “ಸಡಕ್‌ ಕೃಪೆ’

ಗ್ರಾಮೀಣ ರಸ್ತೆ ಅಭಿವೃದ್ಧಿಗೆ “ಸಡಕ್‌ ಕೃಪೆ’

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

IPL-2

IPL 2020: ಪಾಂಡೆ-ಶಂಕರ್‌ ಅಬ್ಬರ; ಹೈದರಾಬಾದ್‌ಗೆ 8 ವಿಕೆಟ್‌ ಜಯ

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ ಸವಾರರು ಸ್ಥಳದಲ್ಲೇ ಸಾವು

IPLಹೈದರಾಬಾದ್‌ ಕಡಿವಾಣ; ಸಿಡಿಯದ ರಾಜಸ್ಥಾನ್‌ ಗೆಲುವಿಗೆ 155 ರ ಗುರಿ

ಹೈದರಾಬಾದ್‌ ಕಡಿವಾಣ; ಸಿಡಿಯದ ರಾಜಸ್ಥಾನ್‌; SRH ಗೆಲುವಿಗೆ 155ರ ಗುರಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

sraja

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ; ಜ್ಯೂನಿಯರ್ ಚಿರು ಆಗಮನ

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

cinema-tdy-3

ಚಿರು ಮಗುವಿಗಾಗಿ ಬೆಳ್ಳಿತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ

ನಾನು ಹೀರೋ ಆಗ್ತಿರೋದಕ್ಕೆ ಎಲ್ಲ ಸ್ಟಾರ್ ಖುಷಿಯಾಗಿದ್ದಾರೆ…

ನಾನು ಹೀರೋ ಆಗ್ತಿರೋದಕ್ಕೆ ಎಲ್ಲ ಸ್ಟಾರ್ ಖುಷಿಯಾಗಿದ್ದಾರೆ…

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್



ಹೊಸ ಸೇರ್ಪಡೆ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ “ಸಡಕ್‌ ಕೃಪೆ’

ಗ್ರಾಮೀಣ ರಸ್ತೆ ಅಭಿವೃದ್ಧಿಗೆ “ಸಡಕ್‌ ಕೃಪೆ’

ಕಾರವಾರ ನೌಕಾನೆಲೆಗೆ ಅಡ್ಮಿರಲ್‌ ಭೇಟಿ

ಕಾರವಾರ ನೌಕಾನೆಲೆಗೆ ಅಡ್ಮಿರಲ್‌ ಭೇಟಿ

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

IPL-2

IPL 2020: ಪಾಂಡೆ-ಶಂಕರ್‌ ಅಬ್ಬರ; ಹೈದರಾಬಾದ್‌ಗೆ 8 ವಿಕೆಟ್‌ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.