Udayavni Special

ರಾಜ್‌ದೂತ್‌ ಮೇಲೆ ಹಾಡುಗಳ ಸವಾರಿ

Team Udayavani, Dec 20, 2018, 11:43 AM IST

rd159.jpg

ಕನ್ನಡದಲ್ಲಿ ಕಾರು, ಬೈಕ್‌ ಹೆಸರಿಟ್ಟುಕೊಂಡಿರುವ ಅದೆಷ್ಟೋ ಚಿತ್ರಗಳು ಬಂದಿವೆ, ಕೆಲವು ಬಿಡುಗಡೆಗೆ ರೆಡಿಯಾಗಿವೆ. ಇನ್ನೂ ಕೆಲವು ಚಿತ್ರೀಕರಣದಲ್ಲಿವೆ. ಹಾಗೆ ಹೆಸರಿಸುವುದಾದರೆ, ಈಗ “ರಾಜ್‌ದೂತ್‌’ ಎಂಬ ಹೊಸಬರ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಹೌದು, ಸದ್ದಿಲ್ಲದೆಯೇ ಚಿತ್ರ ಮುಗಿಸಿರುವ ಚಿತ್ರತಂಡ, ಇತ್ತೀಚೆಗಷ್ಟೇ ಚಿತ್ರದ ಹಾಡುಗಳನ್ನು ಹೊರತಂದಿದೆ.

ಲಹರಿ ಆಡಿಯೋ ಸಂಸ್ಥೆಯ ಲಹರಿ ವೇಲು ಅವರು ಹಾಡುಗಳನ್ನು ಹೊರತರುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. “ರಾಜ್‌ದೂತ್‌’ ಎಂಬ ಹೆಸರಿದೆ ಅಂದರೆ, ಚಿತ್ರದಲ್ಲಿ ರಾಜ್‌ದೂತ್‌ ಬೈಕ್‌ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚಿತ್ರಕ್ಕೆ ಪವನ್‌ಕುಮಾರ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಾಹಿತ್ಯ, ನೃತ್ಯ ಜವಾಬ್ದಾರಿಯನ್ನೂ ಇವರೇ ವಹಿಸಿಕೊಂಡಿದ್ದಾರೆ.

“ರಾಜ್‌ದೂತ್‌’ ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಗೆಳೆಯರ ನಡುವಿನ ಸಂಬಂಧ ಮತ್ತು ರಾಜ್‌ದೂತ್‌ ಬೈಕ್‌ ಮೇಲಿನ ಪ್ರೀತಿ ಕುರಿತು ಸಾಗುವ ಕಥೆ. ಇಬ್ಬರು ಗೆಳೆಯರ ನಡುವೆ ರಾಜ್‌ದೂತ್‌ ಎಂಟ್ರಿಕೊಟ್ಟಾಗ, ಅದನ್ನು ಏನಾದರೂ ಸರಿ, ನನ್ನ ಪಾಲಾಗಬೇಕೆಂಬ ಹಠದಲ್ಲಿ ಆ ಇಬ್ಬರು ಗೆಳೆಯರು ಹರಸಾಹಸ ಪಡುತ್ತಾರೆ. ಆ ಬೈಕ್‌ ತಾತನೊಬ್ಬನದ್ದಾಗಿದ್ದರಿಂದ ಇಬ್ಬರು ಗೆಳೆಯರ ಮಧ್ಯೆ ಸಣ್ಣ ಭಿನ್ನಾಭಿಪ್ರಾಯ ಶುರುವಾಗಿ ಜಗಳಕ್ಕೂ ತಿರುಗುತ್ತದೆ.

ಕೊನೆಗೆ ರಾಜ್‌ದೂತ್‌ ಬೈಕ್‌ ಯಾರ ಪಾಲಾಗುತ್ತೆ ಎಂಬುದು ಕಥೆ. ಇದರ ನಡುವೆ ಒಂದು ಲವ್‌ಸ್ಟೋರಿಯೂ ಸೇರಿಕೊಳ್ಳುತ್ತೆ. ಮಿಕ್ಕಿದ್ದು ವಿಷಯ ತಿಳಿಯಬೇಕಾದರೆ, “ರಾಜ್‌ದೂತ್‌’ ಸಿನಿಮಾ ನೋಡಬೇಕು. ಚಿತ್ರದಲ್ಲಿ ಅನಿಲ್‌ ನಾಯಕರಾಗಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿಯೂ ಅವರದೇ. ಇನ್ನು, ತೇಜು ಪೊನ್ನಪ್ಪ ಇವರಿಗೆ ನಾಯಕಿ. ಆದರ್ಶ್‌ ನಾರಾಯಣ್‌ ಎರಡನೇ ನಾಯಕನಾಗಿದ್ದು,

ಸದಾ ಅಮ್ಮನ ಹಣದಿಂದ ಮೋಜು ಮಾಡುವ ಪಾತ್ರ ಮಾಡಿದ್ದಾರೆ. ಇನ್ನು, ರಿಶ್ವಿ‌ಭಟ್‌ ಸಿನಿಮಾದುದ್ದಕ್ಕೂ ಬೈಕ್‌ ಓಡಿಸುವ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ನೀನಾಸಂ ಅಶ್ವಥ್‌, ವಿಶ್ರುತ್‌ ರಾಜ್‌, ಶ್ರೀನಿವಾಸ್‌, ಶಶಿಕಲಾ, ನಂದೀಶ್‌ ನಟಿಸಿದ್ದಾರೆ. ಬೆಂಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಅರುಣ್‌ ಆ್ಯಂಡ್ರೂ ಸಂಗೀತವಿದೆ. ವಿಜಯಪ್ರಕಾಶ್‌, ಚೇತನ್‌ನಾಯ್ಕ, ಮಧುಶೇಖರ್‌, ಮಹಬೂಬ್‌ಸಾಬ್‌ ಹಾಡಿದ್ದಾರೆ.

ಟಾಪ್ ನ್ಯೂಸ್

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kadala teerada barghavaru

ಕಡಲ ತೀರದಲ್ಲಿ ಹೊಸಬರ ಕನಸು

ಸೋನು ಗೌಡ ಕೈಯಲ್ಲಿ ವೆಡ್ಡಿಂಗ್‌ ಗಿಫ್ಟ್

ಸೋನು ಗೌಡ ಕೈಯಲ್ಲಿ ವೆಡ್ಡಿಂಗ್‌ ಗಿಫ್ಟ್

ರಾಘವೇಂದ್ರ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ರಾಘವೇಂದ್ರ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

gjkjhgfd

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.