ಹೀರೋ ಎಂಬ ಟೆಕ್ನಿಷಿಯನ್ಸ್‌ ಸಿನಿಮಾ: ಇಲ್ಲಿ ಎಲ್ಲರೂ, ಎಲ್ಲವೂ ಆಗಿದ್ದಾರೆ…


Team Udayavani, Feb 19, 2021, 11:13 AM IST

hero

ಸಾಮಾನ್ಯವಾಗಿ ಯಾವುದೇ ಸಿನಿಮಾದಲ್ಲಿ ಕಲಾವಿದರು ಕ್ಯಾಮರ ಮುಂದೆ ಕೆಲಸ ಮಾಡಿದರೆ, ತಂತ್ರಜ್ಞರು ಕ್ಯಾಮರ ಹಿಂದೆ ಕೆಲಸ ಮಾಡುತ್ತಾರೆ. ಆದರೆ ರಿಷಭ್‌ ಶೆಟ್ಟಿ ಅಭಿನಯದ “ಹೀರೋ’ ಸಿನಿಮಾದಲ್ಲಿ ಹಾಗಲ್ಲ. ತುಂಬ ಅಪರೂಪವೆಂಬಂತೆ, ಕ್ಯಾಮರಾ ಮುಂದೆ ಕೆಲಸ ಮಾಡಿದವರೇ, ಕ್ಯಾಮರ ಹಿಂದೆ ಕೂಡ ಕೆಲಸ ಮಾಡಿದ್ದಾರೆ. ಇಡೀ ಸಿನಿಮಾ ತಂಡದಲ್ಲಿದ್ದ 24 ಜನರಲ್ಲಿ ಛಾಯಾಗ್ರಹಕ ರೊಬ್ಬರನ್ನು ಹೊರತುಪಡಿಸಿ, ಇನ್ನುಳಿದ 23 ಜನರೂ ತೆರೆ ಮುಂದೆ ಮತ್ತು ತೆರೆ ಹಿಂದೆ ಎರಡೂ ಕಡೆ ಕೆಲಸ ಮಾಡಿದ್ದಾರೆ. ಇದೇ “ಹೀರೋ’ ಸಿನಿಮಾದ ವಿಶೇಷತೆ.

ಅಂದಹಾಗೆ, ಇದಕ್ಕೆಲ್ಲ ಕಾರಣವಾಗಿದ್ದು ಕೋವಿಡ್‌! ಹೌದು, ಕೋವಿಡ್‌ ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ, ಸರ್ಕಾರ ಸಿನಿಮಾಗಳ ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ ನೀಡಿತ್ತು. ಇದೇ ಸಂದರ್ಭದಲ್ಲಿ “ಹೀರೋ’ ಚಿತ್ರತಂಡ ಕೂಡ ಚಿತ್ರೀಕರಣಕ್ಕೆ ಇಳಿದಿತ್ತು. ಕೋವಿಡ್‌ ಆತಂಕ ಸಹಜವಾಗಿಯೇ ಎಲ್ಲೆಡೆ ಇದ್ದ ಕಾರಣ ಅತಿ ಕಡಿಮೆ ಕಲಾವಿದರು ಮತ್ತು ತಂತ್ರಜ್ಞರನ್ನು ಬಳಸಿಕೊಂಡು “ಹೀರೋ’ ಶೂಟಿಂಗ್‌ ಪೂರ್ಣಗೊಳಿಸುವುದು ಚಿತ್ರತಂಡ ಮುಂದಿದ್ದ ದೊಡ್ಡ ಸವಾಲಾಗಿತ್ತು. ಆಗ ಇಡೀ ಚಿತ್ರತಂಡ ಒಗ್ಗಟ್ಟಾಗಿ ಇಂಥದ್ದೊಂದು “ಡಬಲ್‌ ರೋಲ್‌’ ಕಾರ್ಯಕ್ಕೆ ಮುಂದಾಯಿತು.

ಇದನ್ನೂ ಓದಿ:ತುಳು ಚಿತ್ರರಂಗ @50: ‘ಎನ್ನ ತಂಗಡಿ’ ಯಿಂದ ‘ಗಮ್ಜಾಲ್’ ವರೆಗೆ ಚಿತ್ರರಂಗ ನಡೆದು ಬಂದ ಪಯಣ

ಈ ಬಗ್ಗೆ ಮಾತನಾಡುವ ರಿಷಭ್‌ ಶೆಟ್ಟಿ, “ಕೋವಿಡ್‌ ಲಾಕ್‌ಡೌನ್‌ ಇದ್ದ ವೇಳೆ, ಏನೂ ಮಾಡೋಕೆ ಆಗದಂಥ ಸ್ಥಿತಿಯಲ್ಲಿ “ಹೀರೊ ಶೂಟಿಂಗ್‌ ಶುರು ಮಾಡಿದ್ದೆವು. ಆ ಸಮಯದಲ್ಲಿ ಕೇವಲ 24 ಜನರ ತಂಡ ಬೆಂಗಳೂರಿನಿಂದ ಹೊರಗೆ ಬೇರೊಂದು ಕಡೆಗೆ ಹೋಗಿ ಇಡೀ ಸಿನಿಮಾವನ್ನು ಮಾಡಿ ಮುಗಿಸಿದೆವು. ಅಲ್ಲಿ ನಮಗೆ ಬೇಕಾದ ಯಾವುದೇ ಸವಲತ್ತುಗಳಿರಲಿಲ್ಲ. ಹೀಗಿರುವಾಗ, ನಮಗೆ ಲಭ್ಯವಿದ್ದ ಅವಕಾಶ, ಸೌಲಭ್ಯಗಳನ್ನೇ ಬಳಸಿಕೊಂಡು ನಾವು ಅಂದುಕೊಂಡಂತೆ ಸಿನಿಮಾ ಮಾಡಿ ಮುಗಿಸಬೇಕಾಗಿತ್ತು. ಇದು ನಿಜಕ್ಕೂ ಒಂದು ಅದ್ಭುತ ಅನುಭವ’ ಎನ್ನುತ್ತಾರೆ.

ರಿಷಭ್‌ ಶೆಟ್ಟಿ ಹೇಳುವಂತೆ, “ನಮಗೆ ಸಿನಿಮಾವನ್ನು ಎಷ್ಟು ಕಡಿಮೆ ಜನರನ್ನು ಇಟ್ಟುಕೊಂಡು ಮಾಡಬೇಕಾಗಿತ್ತೋ, ಗುಣಮಟ್ಟದಲ್ಲಿ ಎಲ್ಲೂ ಕೊರತೆ ಯಾಗದಂತೆ ಸಿನಿಮಾ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿತ್ತು. ಇಲ್ಲಿ ಸಿನಿಮಾಟೋಗ್ರಫ‌ರ್‌ ಒಬ್ಬರನ್ನು ಹೊರತುಪಡಿಸಿ, ಲೈಟ್‌ ಬಾಯ್ಸ, ಕುಕ್‌, ಮೇಕಪ್‌ ಮ್ಯಾನ್‌, ಕ್ಯಾಮರಾ ಅಸಿಸ್ಟೆಂಟ್‌ಗಳಿಂದ ಹಿಡಿದು ಸೆಟ್‌ನಲ್ಲಿ ಇದ್ದ ಪ್ರತಿಯೊಬ್ಬರೂ ಬೇರೆ ಬೇರೆ ಕ್ಯಾರೆಕ್ಟರ್‌ಗಳಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಆರ್ಟಿಸ್ಟ್‌ಗಳು ಕೂಡ ಅಷ್ಟೇ ಕ್ಯಾಮರಾ ಹಿಂದೆ ಎಲ್ಲ ಕೆಲಸವನ್ನೂ ಮಾಡಿದ್ದಾರೆ. ಆ್ಯಕ್ಟರ್ ಟೆಕ್ನೀಷಿಯನ್ಸ್‌ ಕೆಲಸ ಮಾಡಿದ್ದಾರೆ, ಟೆಕ್ನೀಷಿಯನ್ಸ್‌ ಆ್ಯಕ್ಟರ್ ಕೆಲಸ ಮಾಡಿದ್ದಾರೆ’ ಎನ್ನುತ್ತಾರೆ.

ಇದನ್ನೂ ಓದಿ:ಮಾಸ್‌ ಡೈಲಾಗ್ಸ್‌ನಲ್ಲಿ ಸ್ಟಾರ್‌ ಸಿನಿಮಾಗಳ ಅಬ್ಬರ

ರಿಷಭ್‌ ಅವರು ಹೇಳುವಂತೆ “ಹೀರೋ’ ಸಿನಿಮಾದ ಆರ್ಟಿಸ್ಟ್‌ ಮತ್ತು ಟೆಕ್ನೀಷಿಯನ್ಸ್‌ಗಳೇ ನಿಜವಾದ “ಹೀರೋ’ಗಳಂತೆ, “ಸೆಟ್‌ನಲ್ಲಿ ನಮ್ಮ ಟೀಮ್‌ನಲ್ಲಿದ್ದ 24ರಲ್ಲಿ 23 ಜನ ತೆರೆಮುಂದೆ, ತೆರೆಹಿಂದೆ ಎರಡೂ ಕಡೆ ಕೆಲಸ ಮಾಡಿದ್ದಾರೆ. ಇಷ್ಟು ಜನರಲ್ಲಿ ಯಾರೋ ಒಬ್ಬರು ಇಲ್ಲದಿದ್ದರೂ “ಹೀರೋ’ ಸಿನಿಮಾ ಇಷ್ಟು ಚೆನ್ನಾಗಿ ಬರಲು ಸಾಧ್ಯವಾಗುತ್ತಿರಲಿಲ್ಲ. ಒಂದರ್ಥದಲ್ಲಿ ಹೇಳಬೇಕು ಅಂದ್ರೆ ಇವರೇ “ಹೀರೋ’ ಸಿನಿಮಾದ ನಿಜವಾದ “ಹೀರೋ’ ಗಳು’ ಎನ್ನುವುದು ರಿಷಭ್‌ ಮಾತು. ಅಂದಹಾಗೆ, ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹೀರೋ ಮಾರ್ಚ್‌ 5ರಂದು ತೆರೆಕಾಣುತ್ತಿದೆ. ಚಿತ್ರಕ್ಕೆ ಭರತ್‌ ರಾಜ್‌ ನಿರ್ದೇಶನವಿದೆ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ್‌ ಅಪಾರ್ಟ್‌ಮೆಂಟ್ಸ್‌

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ನಲ್ಲಿ ಗೆಲುವಿನ ನಗೆ

oreo kannada movie

ಬಿಸ್ಕೆಟ್‌ ಹೆಸರು ಈಗ ಸಿನಿಮಾ ಟೈಟಲ್‌

avatar purusha

‘ಲಡ್ಡು ಬಂದು ಬಾಯಿಗೆ ಬಿತ್ತಾ…’ ಅವತಾರ್‌ ಪುರುಷ ಹಾಡು

premam poojyam

ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್‌ ಗ್ಯಾಂಗ್‌: ಮನಗೆದ್ದ ಪ್ಯೂರ್‌ ಲವ್‌ ಸ್ಟೋರಿ

madhagaja

ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರು

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.