Udayavni Special

ಇಂದಿನಿಂದ ರಿಷಭ್‌ ಹೀರೋಯಿಸಂ: ಹೊಸ ಜಾನರ್‌ ಜತೆ ಶೆಟ್ರ ಎಂಟ್ರಿ


Team Udayavani, Mar 5, 2021, 8:51 AM IST

rishab shetty hero movie

“ಬೆಲ್‌ ಬಾಟಂ’ ಚಿತ್ರದ ಸಕ್ಸಸ್‌ ಬಳಿಕ ರಿಷಭ್‌ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ ಮತ್ತೂಂದು ಚಿತ್ರ “ಹೀರೋ’ ಈ ವಾರ ತೆರೆಗೆ ಬರುತ್ತಿದೆ. “ರಿಷಭ್‌ ಶೆಟ್ಟಿ ಫಿಲಂಸ್‌’ ಬ್ಯಾನರ್‌ನಲ್ಲಿ ರಿಷಭ್‌ ಶೆಟ್ಟಿ ಅವರೇ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಭರತ್‌ ರಾಜ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ “ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್‌ ನಾಯಕಿಯಾಗಿ ಅಭಿನಯಿಸಿದ್ದಾರೆ.

ಇನ್ನೊಂದು ವಿಶೇಷವೆಂದರೆ ಹೀರೋ’ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಚಿತ್ರತಂಡ ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಮಾಡಿ ಮುಗಿಸಿರುವುದ ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ ಕಂ ನಿರ್ಮಾಪಕ ರಿಷಭ್‌ ಶೆಟ್ಟಿ, “ಎಲ್ಲ ಸಿಗುತ್ತಿರುವ ಸಮಯದಲ್ಲೇ ಪ್ಲಾನಿಂಗ್‌ ಪ್ರಕಾರ ಸಿನಿಮಾ ಶೂಟಿಂಗ್‌ ಮಾಡೋದು ಕಷ್ಟ. ಹೀಗಿರುವಾಗ, ಲಾಕ್‌ಡೌನ್‌ ಟೈಮ್‌ನಲ್ಲಿ ನಾವು ಶೂಟಿಂಗ್‌ ಪ್ಲಾನ್‌ ಮಾಡಿಕೊಂಡಿದ್ದೆವು. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು, ಕಡಿಮೆ ಕಲಾವಿದರು – ತಂತ್ರಜ್ಞರನ್ನು ಇಟ್ಟುಕೊಂಡ ಶೂಟಿಂಗ್‌ ಮಾಡಲು ಮುಂದಾದೆವು. ತುಂಬಾ ರಿಸ್ಕ್ ಇದ್ದರೂ, ನಮಗೆ ಬೇರೆ ದಾರಿ ಇರಲಿಲ್ಲ. ಅಂದುಕೊಂಡಂತೆ ಸಿನಿಮಾ ಶೂಟಿಂಗ್‌ ಮಾಡಿ ಮುಗಿಸುವುದು ನಮಗಿದ್ದ ದೊಡ್ಡ ಚಾಲೆಂಜ್‌ ಆಗಿತ್ತು. ಅದರಂತೆ, ಕೊನೆಗೂ ಕೇವಲ 24 ಜನರ ಟೀಮ್‌ ಇಟ್ಟುಕೊಂಡು ಅಂದುಕೊಂಡಂತೆ ಶೂಟಿಂಗ್‌ ಮಾಡಿ ಮುಗಿಸಿದೆವು. ಇಡೀ ಟೀಮ್‌ ಎಫ‌ರ್ಟ್‌ನಿಂದ ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ನಿಜವಾಗ್ಲೂ ಹೇಳಬೇಕು ಅಂದ್ರೆ, “ಹೀರೋ’ ಸಿನಿಮಾದಲ್ಲಿ ತೆರೆಮುಂದೆ, ತೆರೆಹಿಂದೆ ಎಲ್ಲರೂ, ಎಲ್ಲ ಕೆಲಸವನ್ನೂ ಮಾಡಿದ್ದಾರೆ. ಇವರೇ ಸಿನಿಮಾದ ನಿಜವಾದ “ಹೀರೋ’ಗಳು’ ಎನ್ನುತ್ತಾರೆ.

ಇದನ್ನೂ ಓದಿ:“ಒಟಿಟಿ ಶೋ ಸೆನ್ಸಾರ್‌ ಅಗತ್ಯ’

ಈಗಾಗಲೇ “ಹೀರೋ’ ಚಿತ್ರದ ಪೋಸ್ಟರ್‌, ಟ್ರೇಲರ್‌ ಬಿಡುಗಡೆಯಾಗಿದ್ದು, ಇದೊಂದು ಕ್ರೈಂ-ಥ್ರಿಲ್ಲರ್‌ ಹಾಗೂ ಕಾಮಿಡಿ ಜಾನರ್‌ ಕಥೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರದ ಕಥಾಹಂದರದ ಗುಟ್ಟು ಬಿಟ್ಟುಕೊಡದ ಚಿತ್ರತಂಡ, ಅದನ್ನು ತೆರೆಮೇಲೆ ನೋಡಬೇಕು ಎನ್ನುತ್ತದೆ. ಸದ್ಯ ಕಳೆದ ಕೆಲ ದಿನಗಳಿಂದ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇಂದು “ಹೀರೋ’ವನ್ನು ತೆರೆಮೇಲೆ ತರುತ್ತಿದೆ.

ಚಿತ್ರದ ಬಿಡುಗಡೆಯ ತಯಾರಿ ಬಗ್ಗೆ ಮಾತನಾಡುವ ರಿಷಭ್‌ ಶೆಟ್ಟಿ, “ಕಳೆದ ಎರಡು ತಿಂಗಳಿನಿಂದ ಬೇರೆ ಬೇರೆ ರೀತಿಯಲ್ಲಿ ಸಿನಿಮಾದ ಪ್ರಮೋಶನ್‌ ಕೆಲಸಗಳನ್ನು ಮಾಡುತ್ತಿದ್ದೇವೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌, ಹಾಡುಗಳಿಗೆ ಆಡಿಯನ್ಸ್‌ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಆಡಿಯನ್ಸ್‌ ಮತ್ತು ಇಂಡಸ್ಟ್ರಿ ಕಡೆಯಿಂದಲೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳು ಕೇಳಿ ಬರುತ್ತಿದೆ. ಆ ನಿರೀಕ್ಷೆಯನ್ನು ತಲುಪುತ್ತೇವೆ ಎಂಬ ವಿಶ್ವಾಸದಲ್ಲಿ, ಈ ವಾರ “ಹೀರೋ’ ಸಿನಿಮಾ ರಿಲೀಸ್‌ ಮಾಡುತ್ತಿದ್ದೇವೆ’ ಎನ್ನುತ್ತಾರೆ.

“ಈ ವಾರ ಕರ್ನಾಟಕ ರಾಜ್ಯಾದ್ಯಂತ ಸುಮಾರು 160ಕ್ಕೂ ಅಧಿಕ ಸೆಂಟರ್‌ಗಳಲ್ಲಿ “ಹೀರೋ’ ಸಿನಿಮಾ ರಿಲೀಸ್‌ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜೊತೆಗೆ ಕರ್ನಾಟಕದ ಹೊರಗಿನ ಕೆಲವು ರಾಜ್ಯಗಳಲ್ಲೂ ಸಿನಿಮಾ ರಿಲೀಸ್‌ ಆಗುತ್ತಿದೆ. ನಾಲ್ಕು ವಾರಗಳ ನಂತರ ಸಿನಿಮಾವನ್ನು ಓವರ್‌ಸೀಸ್‌ ಕೂಡ ರಿಲೀಸ್‌ ಮಾಡುವ ಪ್ಲಾನ್‌ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ರಿಷಭ್‌ ಶೆಟ್ಟಿ.

ಒಟ್ಟಾರೆ ಹೊಸ ವರ್ಷದಲ್ಲಿ ತೆರೆಮೇಲೆ “ಹೀರೋ’ ಮೂಲಕ ಹೊಸ ಎಂಟ್ರಿ ಕೊಡಲು ರೆಡಿಯಾಗಿರುವ ರಿಷಭ್‌ ಶೆಟ್ಟಿ, ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕು.

ಜಿ. ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

hfgfg

ಸಮಾಜದ ಮನೋಭಾವ ಬದಲಾಯಿಸುವುದೇ ಅಂಬೇಡ್ಕರ್ ಜಯಂತಿ ಉದ್ದೇಶ : ಡಿಸಿ ಮುಲ್ಲೈ 

Cancel Class 12 CBSE exams, unfair to keep students under pressure till June : Priyanka Gandhi

ಜೂನ್ ತನಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಒತ್ತಡದಲ್ಲಿರಿಸುವುದು ಸರಿಯಲ್ಲ : ಪ್ರಿಯಾಂಕಾ

ಹಲವಾರು ವಿಶೇಷತೆಗಳೊಂದಿಗೆ ಒನ್ ಪ್ಲಸ್ ವಾಚ್ ಬಿಡುಗಡೆ

ಹಲವಾರು ವಿಶೇಷತೆ ಹೊಂದಿರುವ ಒನ್ ಪ್ಲಸ್ ವಾಚ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

BJP will not get even 70 seats in West Bengal: Mamata          

ಪಶ್ಚಿಮ ಬಂಗಾಳದಲ್ಲಿ 70 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ : ಮಮತಾ ಬ್ಯಾನರ್ಜಿ

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

ಸಿಬಿಎಸ್ಇ ಪರೀಕ್ಷೆ ರದ್ದತಿಯಿಂದ SSLC ಬಗ್ಗೆ ಗೊಂದಲ! ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್

ಸಿಬಿಎಸ್ಇ ಪರೀಕ್ಷೆ ರದ್ದತಿಯಿಂದ SSLC ಬಗ್ಗೆ ಗೊಂದಲ! ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್

Ram Gopal Varma calls Kumbh Mela ‘corona atom bomb’, says it’s a ‘viral explosion’

ಇದು ಕುಂಭ ಮೇಳವಲ್ಲ, ‘ಕೊರೋನಾ ಅಟೊಮ್ ಬಾಂಬ್’ : ಆರ್ ಜಿ ವಿ ವಿವಾದಾತ್ಮಕ ಹೇಳಿಕೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hnfghdf

ಚಂದನವನದ ನವದಂಪತಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್‌’ಗೆ ಕೋವಿಡ್ ಸೋಂಕು ದೃಢ

ಮಾಸ್‌-ಕ್ಲಾಸ್‌ಗೆ ಒಪ್ಪುವ ಹೂರಣ: ಪ್ರಜ್ವಲ್ ದೇವರಾಜ್ ರ ‘ಅರ್ಜುನ್ ಗೌಡ’ ಟ್ರೇಲರ್

ಮಾಸ್‌-ಕ್ಲಾಸ್‌ಗೆ ಒಪ್ಪುವ ಹೂರಣ: ಪ್ರಜ್ವಲ್ ದೇವರಾಜ್ ರ ‘ಅರ್ಜುನ್ ಗೌಡ’ ಟ್ರೇಲರ್

ವೀಲ್‌ಚೇರ್‌ನಲ್ಲಿ ಒಂದು ವಿಭಿನ್ನ ಪ್ರೇಮಕಥೆ

ವೀಲ್‌ಚೇರ್‌ನಲ್ಲಿ ಒಂದು ವಿಭಿನ್ನ ಪ್ರೇಮಕಥೆ

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

jgjgj

‘ಕೋಟಿಗೊಬ್ಬ-3’ ಪೊಸ್ಟರ್ ಡಿಸೈನರ್‍ ಸಾಯಿ ಕೃಷ್ಣನನ್ನು ಕೈಬಿಟ್ಟ ನಿರ್ಮಾಣ ಸಂಸ್ಥೆ  

MUST WATCH

udayavani youtube

CBSE 10th ಪರೀಕ್ಷೆ ರದ್ದು, 12th ಪರೀಕ್ಷೆ ಮುಂದೂಡಿಕೆ

udayavani youtube

ಮಸ್ಕಿಯಲ್ಲಿ ಪ್ರತಾಪ್‌ ಗೌಡ ಪರ ಖ್ಯಾತ SINGER MANGLI

udayavani youtube

ಹೊಸ ಕೈಗಾರಿಕಾ ನೀತಿ 2020-2025, ಬಗ್ಗೆ ಮಾಹಿತಿ ಇಲ್ಲಿದೆ!

udayavani youtube

ಕುರಿಗಾಹಿಯ ಲವ್ ಸ್ಟೋರಿ ಕೊಲೆಯಲ್ಲಿ ಕೊನೆ| CRIME FILE | Udayavani

udayavani youtube

News bulletin 13- 04-2021 | UDAYAVANI

ಹೊಸ ಸೇರ್ಪಡೆ

hfgfg

ಸಮಾಜದ ಮನೋಭಾವ ಬದಲಾಯಿಸುವುದೇ ಅಂಬೇಡ್ಕರ್ ಜಯಂತಿ ಉದ್ದೇಶ : ಡಿಸಿ ಮುಲ್ಲೈ 

Davanagere

15 ರಂದು ವೀರಭದ್ರೇಶ್ವರ ಶಿಲಾ ಮೂರ್ತಿ ಪುರ ಪ್ರವೇಶ

14-11

ರಾಜ್ಯ ಸರ್ಕಾರದಿಂದ ಸಾರಿಗೆ ಕಾರ್ಮಿಕರಿಗೆ ಅನ್ಯಾಯ

fcngfgdfxgdf

ಮದುಮಗಳಿಗೆ ಒಡವೆಗಳೇ ವೈಯ್ಯಾರ : ಚೆಂದನೆಯ ಆಭರಣ ಆಯ್ಕೆಗೆ ಇಲ್ಲಿವೆ ಕೆಲವು ಟಿಪ್ಸ್

Cancel Class 12 CBSE exams, unfair to keep students under pressure till June : Priyanka Gandhi

ಜೂನ್ ತನಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಒತ್ತಡದಲ್ಲಿರಿಸುವುದು ಸರಿಯಲ್ಲ : ಪ್ರಿಯಾಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.