‘ಹೀರೋ’ ಪುತ್ರನ ಕ್ಯೂಟ್ ಲುಕ್ : ಮುದ್ದು ಮುದ್ದಾಗಿದೆ ‘ರಣ್ವಿತ್’ ಎಂಟ್ರಿ
ನಮ್ಮನೆಯ ಹೀರೋಗೆ ನಿಮ್ಮ ಹಾರೈಕೆಗಳಿರಲಿ ಎಂದು ಟ್ವೀಟ್ ಮಾಡಿದ್ದಾರೆ.
Team Udayavani, Apr 7, 2021, 2:05 PM IST
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್, ಕಪ್ಪು ಬಣ್ಣದ ಸೂಟು ತೊಟ್ಟು ಹಳದಿ ಬಣ್ಣದ ಪುಟ್ಟ ಲ್ಯಾಂಬೋರ್ಗಿನಿ ಕಾರು ಏರಿ ‘ಹೀರೋ’ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾನೆ. ಹಿಂದುಗಡೆ ಕೇಳಿ ಬರುವ ಹೀರೋ ಚಿತ್ರದ ರಿಧಮ್ ಬಿಜಿಗೆ ರಣ್ವಿತ್ ಥೇಟ್ ‘ಹೀರೋ’ನಂತೆಯೇ ಮಿಂಚಿದ್ದಾನೆ. ಪುಟ್ಟ ಕಂದನ ಈ ನ್ಯೂ ಲುಕ್ ವಾವ್ಹ್ ಎನ್ನುವಂತಿದೆ.
ರಿಷಬ್ ಶೆಟ್ಟಿ ಇಂದು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೋಡಿದ್ರೆ ಅಪ್ಪನಂತೆ ರಣ್ವಿತ್ ಕೂಡ ಸಿನಿಮಾಗೆ ಎಂಟ್ರಿ ಕೊಟ್ರಾ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ, ಈ ಪುಟಾಣಿಯ ಲುಕ್ ಯಾವುದೋ ಸಿನಿಮಾದ್ದು ಅಲ್ಲ.
ಹೌದು, ರಿಷಬ್ ಶೆಟ್ಟಿ ಹಾಗೂ ಪ್ರಗತಿ ದಂಪತಿಯ ಪುತ್ರ ರಣ್ವಿತ್ಗೆ ಇಂದು ಎರಡನೇ ವರ್ಷದ ಜನ್ಮದಿನದ ಸಂಭ್ರಮ. ಈ ಸಡಗರವನ್ನು ಫಿಲ್ಮಿ ಸ್ಟೈಲಿನಲ್ಲಿಯೆ ಆಚರಿಸಿದ್ದಾರೆ ಶೆಟ್ಟರು. ತಮ್ಮ ಮಗನಿಗೆ ಅಂದವಾದ ಉಡುಗೆ ತೊಡಿಸಿ, ಪುಟ್ಟದೊಂದು ಕಾರು ಕೊಡಿಸಿದ್ದಾರೆ.
ತನ್ನ ಮಗನ ಈ ಚೆಂದನೆಯ ವಿಡಿಯೋ ಸಂಭ್ರಮ-ಸಡಗರದಿಂದ ಟ್ವಿಟರ್ ನಲ್ಲಿ ಶೇರ್ ಮಾಡಿರುವ ರಿಷಬ್ ಶೆಟ್ಟಿ, ‘ಮಕ್ಕಳು ಗೊಂಬೆಗೆ ಬಟ್ಟೆ ತೊಡಿಸಿ ಆಟ ಆಡಿದ್ರೆ, ಗೊಂಬೆಯಂತೆ ಮುದ್ದಾದ ಮಗುವಿಗೆ ಚಂದದ ಬಟ್ಟೆ ತೊಡಿಸಿ ಆಡಿ ಆನಂದಿಸೋದು ʼದೊಡ್ಡವರ ಮಕ್ಕಳಾಟʼ. ಇವತ್ತು ನಮ್ಮ ಬಂಗಾರಿಗೆ ಎರಡು ತುಂಬಿದೆ. ಈ ಸಂಭ್ರಮದಲ್ಲಿ ನಾನು ಪ್ರಗತಿ ಆಡಿದ ಮಕ್ಕಳಾಟವನ್ನ ನಿಮ್ಮೊಡನೆ ಹಂಚಿಕೊಳ್ತಿದ್ದೇವೆ. ನಮ್ಮನೆಯ ಹೀರೋಗೆ ನಿಮ್ಮ ಹಾರೈಕೆಗಳಿರಲಿ ಎಂದು ಟ್ವೀಟ್ ಮಾಡಿದ್ದಾರೆ.
ಮಕ್ಕಳು ಗೊಂಬೆಗೆ ಬಟ್ಟೆ ತೊಡಿಸಿ ಆಟ ಆಡಿದ್ರೆ, ಗೊಂಬೆಯಂತೆ ಮುದ್ದಾದ ಮಗುವಿಗೆ ಚಂದದ ಬಟ್ಟೆ ತೊಡಿಸಿ ಆಡಿ ಆನಂದಿಸೋದು ʼದೊಡ್ಡವರ ಮಕ್ಕಳಾಟʼ. ಇವತ್ತು ನಮ್ಮ ಬಂಗಾರಿಗೆ ಎರಡು ತುಂಬಿದೆ. ಈ ಸಂಭ್ರಮದಲ್ಲಿ ನಾನು ಪ್ರಗತಿ ಆಡಿದ ಮಕ್ಕಳಾಟವನ್ನ ನಿಮ್ಮೊಡನೆ ಹಂಚಿಕೊಳ್ತಿದ್ದೇವೆ. ನಮ್ಮನೆಯ ಹೀರೋಗೆ ನಿಮ್ಮ ಹಾರೈಕೆಗಳಿರಲಿ. #HappyBirthdayRanvit pic.twitter.com/kfDBPwhssa
— Rishab Shetty (@shetty_rishab) April 7, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ