ಕಥಾಸಂಗಮದಲ್ಲಿ ರಿಷಭ್ ಭಿಕ್ಷುಕ!
Team Udayavani, Dec 19, 2017, 11:49 AM IST
ಈ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ತಟ್ಟನೆ ನಿಮಗೆ ಗೊತ್ತಾಗಲಿಕ್ಕಿಲ್ಲ. ಸ್ವಲ್ಪ ಆಲೋಚಿಸಿ, ಮುಖಚಹರೆಯನ್ನು ರಿವೈಂಡ್ ಮಾಡಿಕೊಂಡರೆ ಖಂಡಿತಾ ಗೊತ್ತಾಗುತ್ತದೆ, ಅದು ರಿಷಭ್ ಶೆಟ್ಟಿ ಎಂದು. ಹೌದು, ಇದು ರಿಷಭ್ ಶೆಟ್ಟಿಯವರ ಪಾತ್ರವೊಂದರ ಲುಕ್.
ರಿಷಭ್ “ಕಥಾಸಂಗಮ’ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಅದರಲ್ಲಿನ ಒಂದು ಕಥೆಯಲ್ಲಿ ರಿಷಭ್ ನಟಿಸಿದ್ದಾರೆ. ಅದು ಭಿಕ್ಷುಕನಾಗಿ. ಆ ಪಾತ್ರಕ್ಕೆ ಈ ತರಹದ ಗೆಟಪ್ ಹಾಕಿದ್ದಾರೆ. ಜಿಭಾ ಶರೀಫ್ ಎನ್ನುವವರ ಮೇಕಪ್ನಲ್ಲಿ ರಿಷಭ್ ಈ ರೀತಿ ಕಾಣಿಸಿಕೊಂಡಿದ್ದಾರೆ. ಈ ಕಥೆಯನ್ನು ಕಿರಣ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.