ಸಂಕ್ರಾಂತಿಗೆ ಆಂಜನೇಯನ ಅವತಾರ ಪಡೆದ ದಾಸ: ರಾಬರ್ಟ್ 2ನೇ ಮೋಷನ್ ಪೋಸ್ಟರ್ ರಿಲೀಸ್

Team Udayavani, Jan 15, 2020, 1:00 PM IST

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬವಾದ ಇಂದು ಬಿಡುಗಡೆಗೊಂಡಿದೆ.

ಆನಂದ್ ಆಡಿಯೋದ ಯೂಟ್ಯೂಬ್ ಪೇಜ್​ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ 2.5 ಲಕ್ಷದಷ್ಟು ವೀಕ್ಷಣೆಯನ್ನು ಕಂಡಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ದರ್ಶನ್ ಜತೆಗೆ ವಿನೋದ್ ಪ್ರಭಾಕರ್, ಆಶಾ ಭಟ್​, ಜಗಪತಿ ಬಾಬು, ರವಿ ಕಿಶನ್ ಮತ್ತಿತರರು ನಟಿಸುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, “ಎಲ್ಲರಿಗೂ ವರ್ಷದ ಮೊದಲನೆಯ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಎಳ್ಳು, ಬೆಲ್ಲ ಸವಿಯುತ್ತಾ ನಮ್ಮ ರಾಬರ್ಟ್ ಚಿತ್ರದ ಎರಡನೇ ಲುಕ್ ಪೋಸ್ಟರ್ ನಿಮಗಾಗಿ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆಶೀರ್ವದಿಸಿ” ಎಂದು ಬರೆದುಕೊಂಡಿದ್ದಾರೆ.

ಮೋಷನ್ ಪೋಸ್ಟರ್ 53 ಸೆಕೆಂಡ್‍ಗಳಿದ್ದು  ದರ್ಶನ್ ಆಂಜನೇಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  ಹೆಗಲ ಮೇಲೆ ರಾಮನ ಪಾತ್ರದ ಮಗುವನ್ನು ಕೂರಿಸಿಕೊಂಡಿದ್ದಾರೆ. ಪುಟ್ಟ ರಾಮ ರಾವಣನ ಪ್ರತಿಕೃತಿಯನ್ನು ದಹಿಸಲು ಬಿಲ್ಲು ಹಿಡಿದಿರುವುದನ್ನು ಕಾಣಬಹುದಾಗಿದೆ.

‘ರಾಬರ್ಟ್’ ಸಿನಿಮಾದಲ್ಲಿ ಆಂಜನೇಯನ ಅವತಾರದಲ್ಲಿ ದರ್ಶನ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿರುವುದು ಸುಳ್ಳಲ್ಲ. ಮಾತ್ರವಲ್ಲದೆ ಚಿತ್ರ ಬಹಳ ನಿರೀಕ್ಷೆಯನ್ನು ಹುಟ್ಟಿಸಿದೆ.

ಉಮಾಪತಿ ಫಿಲಂಸ್ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಅವರಿಗೆ ನಟಿ ಆಶಾ ಭಟ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ‘ರಾಬರ್ಟ್’ಮೂಲಕ ದರ್ಶನ್ ಮೊದಲ ಬಾರಿಗೆ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ರೋಮಾಂಚನವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು. ಅಲ್ಲಿ ಜರುಗುವುದು ನಮ್ಮ ಸೇನಾಶಕ್ತಿಯ ವಿಶ್ವರೂಪ ದರ್ಶನ....

  • ನಾಳೆ ಬೆಳಗಾದರೆ ಗಣತಂತ್ರದ ಹಬ್ಬದ ಸಂಭ್ರಮ, ರಾಜಧಾನಿ ದೆಹಲಿಯನ್ನು ರಂಗೇರಿಸಲಿದೆ. ರಾಜಪಥದಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಈ ಬಾರಿ ಕರ್ನಾಟಕದ...

  • ಮಂಗಳೂರು: ಇದುವರೆಗೆ ಕಪ್ಪು ಬಿಳುಪಿನಲ್ಲಿದ್ದು, ಮುಖ ಗುರುತು ಸಿಗುವುದು ಕಷ್ಟ ಎಂಬಂತಿದ್ದ ಮತದಾರರ ಗುರುತಿನ ಚೀಟಿ ಈಗ ಬಾರ್‌ಕೋಡ್‌, ಕಲರ್‌ ಫೋಟೋ ಸಹಿತ ಬಹು ವರ್ಣಗಳಲ್ಲಿ...

  • ಅಂಡಮಾನಿನ ಎಲ್ಲ ಗೂಬೆಗಳೂ ಕ್ಯಾಮೆರಾಗಳಲ್ಲಿ ಬಂಧಿಯಾದವು; ಒಂದನ್ನು ಬಿಟ್ಟು. ಒಳಬಾರದೆ ಹೊರವುಳಿದ ಗೂಬೆಯೆಂದರೆ, ಅಂಡಮಾನ್‌ ಬಾರ್ನ್ ಔಲ್‌. ಅಂದರೆ, ಅಂಡಮಾನ್‌...

  • ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- "ನೋಡಿಲ್ಲಿ, ಈ ದ್ವೀಪದಲ್ಲೇ...